Close Menu
Ain Live News
    Facebook X (Twitter) Instagram YouTube
    Sunday, June 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Vijayendra: ಬಿಜೆಪಿ, ಮೋದಿಜೀ ಪರ ಸುನಾಮಿ ರೀತಿ ಅಲೆ: ವಿಜಯೇಂದ್ರ

    By AIN AuthorDecember 3, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಇಡೀ ದೇಶದಲ್ಲಿ ವಾತಾವರಣ ಬಿಜೆಪಿ ಪರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ವಿಶ್ಲೇಷಿಸಿದರು. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಜೀ ಅವರು ಪ್ರಧಾನಮಂತ್ರಿ ಆಗಬೇಕೆಂಬ ಆಸೆ ಜನತೆಯಲ್ಲಿ ಇದೆ ಎಂಬುದು ಈ ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ ಗೊತ್ತಾಗಿದೆ ಎಂದು ತಿಳಿಸಿದರು. ಪಂಚರಾಜ್ಯ ಚುನಾವಣೆ ಒಂದು ರೀತಿಯ ಸೆಮಿ ಫೈನಲ್ ಎಂದು ವಿಶ್ಲೇಷಿಸಲಾಗುತ್ತಿತ್ತು. ಸುನಾಮಿ ರೀತಿಯಲ್ಲಿ ಬಿಜೆಪಿ ಅಲೆ ಎದ್ದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.

    5 ರಾಜ್ಯಗಳ ವಿಜಯ, ವಿಜಯ ಯಾತ್ರೆ ಇಲ್ಲಿಗೇ ನಿಲ್ಲುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಜೀ ಅವರು ಪ್ರಧಾನಿ ಆಗುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಷಯದಲ್ಲಿ ಯಾವುದೇ ಅನುಮಾನ ಉಳಿದಿಲ್ಲ ಎಂದು ತಿಳಿಸಿದರು. ದೇಶದ ಜನರು ದೇಶರಕ್ಷಣೆಯ ಗ್ಯಾರಂಟಿ ಬಯಸುತ್ತಿದ್ದಾರೆ. ಹೊರತು, ಅಧಿಕಾರ ಕಬಳಿಗುವ ಆಮಿಷದ ಗ್ಯಾರಂಟಿಗಳನ್ನಲ್ಲ ಎಂಬುದು ಸ್ಪಷ್ಟವಾಗಿ ಈ ಫಲಿತಾಂಶದ ಮೂಲಕ ಗೊತ್ತಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೂ ಕೂಡ ಗೊತ್ತಾಗಿದೆ ಎಂದು ವಿವರಿಸಿದರು.

    ‌MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್!

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಗ್ಯಾರೆಂಟಿಗಳೆಂಬ ಆಮಿಷದ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಈಗಾಗಲೇ ರಾಜ್ಯದ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. 6 ತಿಂಗಳುಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಅಭಿವೃದ್ಧಿ ಕೆಲಸಗಳು ಯಾವ ರೀತಿ ಕುಂಠಿತವಾಗಿವೆ, ರೈತರು ಯಾವ ರೀತಿಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದನ್ನು ಗಮನಿಸಿದ ರಾಜ್ಯದ ಜನತೆ ಬೇಸತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ- ಎನ್‍ಡಿಎ ಭಾಗೀದಾರ ಪಕ್ಷ ಜೆಡಿಎಸ್‍ಗಳು ಒಟ್ಟಾಗಿ ಚುನಾವಣೆ ಎದುರಿಸಲಿವೆ. 28ಕ್ಕೆ 28 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ರಾಜ್ಯಗಳ ಫಲಿತಾಂಶ ಬಿಜೆಪಿ ಪರವಾಗಿ ಬಂದಿದೆ. ನರೇಂದ್ರ ಮೋದಿಜೀ ಅವರ ನಾಯಕತ್ವ ಈ ದೇಶಕ್ಕೆ ಅಗತ್ಯ ಇದೆ. 3ನೇ ಬಾರಿಗೆ ಪ್ರಧಾನಮಂತ್ರಿ ಆಗುವುದರ ಮೂಲಕ ಅಭಿವೃದ್ಧಿ ಪಥದಲ್ಲಿ ಈ ದೇಶ ಸಾಗಬೇಕೆಂಬ ಸಂದೇಶವನ್ನು 5 ರಾಜ್ಯಗಳ ಚುನಾವಣೆಯಲ್ಲಿ ಮತದಾರರು ನೀಡಿದ್ದಾರೆ ಎಂದು ತಿಳಿಸಿದರು.

    ತೆಲಂಗಾಣ ವಿಧಾನಸಭೆ ಚುನಾವಣೆ ವಿಚಾರದಲ್ಲಿ ಬಿಜೆಪಿಗೆ ಬಹಳ ನಿರೀಕ್ಷೆ ಇರಲಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದ ಮತದಾರರು ಕೂಡ ಬಿಜೆಪಿ ಕೈಹಿಡಿಯಲಿದ್ದಾರೆ. ನರೇಂದ್ರ ಮೋದಿಜೀ ಅವರಿಗೆ ಶಕ್ತಿ ಕೊಡುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಗ್ಯಾರಂಟಿ ಪರಿಣಾಮ ಬೀರಿದ್ದರೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲೂ ಕಾಂಗ್ರೆಸ್ ಗೆಲ್ಲಬೇಕಿತ್ತು. ಕರ್ನಾಟಕದಲ್ಲಿ ಯಾವ ರೀತಿ ಮತದಾರರ ಕಣ್ಣಿಗೆ ಬೂದಿ ಎರಚಿ ಯಶಸ್ವಿ ಆದರೋ, ತೆಲಂಗಾಣದಲ್ಲೂ ಕೂಡ ಮೇಲ್ನೋಟಕ್ಕೆ ಹಾಗೇ ಮಾಡಿದ್ದು ಗೊತ್ತಾಗುತ್ತದೆ.

    ತೆಲಂಗಾಣದಲ್ಲಿದ್ದ ಆಡಳಿತ ವಿರೋಧಿ ಅಲೆಯ ಪ್ರಯೋಜನ ಪಡೆಯಲು ಕಾರಣಾಂತರಗಳಿಂದ ಬಿಜೆಪಿಗೆ ಆಗಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕರ್ನಾಟಕದಲ್ಲಿ ಆದ ಆದಾಯ ತೆರಿಗೆ ದಾಳಿ, ನೂರಾರು ಕೋಟಿ ಹಣ ಲಭಿಸಿದ್ದು ಇದಕ್ಕೆ ಸಾಕ್ಷಿ. ಎಷ್ಟು ಹಣ ತೆಲಂಗಾಣಕ್ಕೆ ವರ್ಗಾವಣೆ ಆಗಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರೇ ಹೇಳಬೇಕಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟವಾಗಿ ಮೇಲುಗೈ ಆಗಲಿದೆ ಎಂದು ತಿಳಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯುವ ನೀರು ಪೂರೈಕೆ, ನಂತರ ಕೆರೆಗಳಿಗೆ ನೀರು: ಡಿಸಿಎಂ ಡಿ.ಕೆ. ಶಿವಕುಮಾರ್

    June 21, 2025

    ವಂಚನೆ ಆರೋಪ: ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ FIR!

    June 21, 2025

    ಐಟಿ ಕ್ಷೇತ್ರದ ಹುದ್ದೆಗಳನ್ನ ಎಐ ಕಿತ್ತುಕೊಳ್ಳುತ್ತಾ!? ಇನ್ಫೋಸಿಸ್ ದಿಗ್ಗಜ ಎನ್‌.ಆರ್ ನಾರಾಯಣಮೂರ್ತಿ ಏನಂದ್ರೂ!?

    June 21, 2025

    ಮಾವು ಮಾರುಕಟ್ಟೆ ಮಧ್ಯಪ್ರವೇಶ : ಬೆಲೆ ವ್ಯತ್ಯಾಸ ಪಾವತಿಗೆ ಸರ್ಕಾರದ ಒಪ್ಪಿಗೆ ಎನ್. ಚಲುವರಾಯಸ್ವಾಮಿ!

    June 21, 2025

    19 ವರ್ಷದ ಯುವಕ ಪಾರ್ಕ್ ನಲ್ಲಿ ನೇಣಿಗೆ ಶರಣು: ಸೂಸೈಡ್ ಗೆ ಕಾರಣ!?

    June 21, 2025

    ಜಲಮಂಡಳಿಯ ವತಿಯಿಂದ ತ್ವರಿತವಾಗಿ ಹೊಸ ಚರಂಡಿ ನಿರ್ಮಿಸಲು ಸೂಚನೆ: ಸ್ನೇಹಲ್

    June 21, 2025

    ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಿಜೆಪಿಗೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ!

    June 21, 2025

    ಇಂದು ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪರಿಷತ್ ಶಾಸಕ ಟಿ. ಎ.ಶರವಣ ಭಾಗಿ

    June 21, 2025

    BJP ರಾಜ್ಯಾಧ್ಯಕ್ಷನಾಗಿ ಒಂದೂಕಾಲು ವರ್ಷ ಶ್ರದ್ಧೆಯಿಂದ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದು ವಿಜಯೇಂದ್ರ ಹೇಳಿದ್ಯಾಕೆ..?

    June 21, 2025

    BSY ಮೇಲೆ ಈಶ್ವರಪ್ಪಗೆ ಸಾಪ್ಟ್ ಕಾರ್ನರ್, BJPಗೆ ವಾಪಸ್ ಆಗ್ತಾರಾ ಮಾಜಿ ಸಚಿವ..!?

    June 21, 2025

    ನಾನು ದ್ವೇಷ ಭಾಷಣ ಮಾಡಿದ್ರು ಸಹ ನನಗೂ ನೋಟೀಸ್ ಜಾರಿ ಆಗುತ್ತದೆ: ಸಚಿವ ದಿನೇಶ್ ಗುಂಡೂರಾವ್

    June 21, 2025

    ವಸತಿ ಯೋಜನೆ ಅವ್ಯವಹಾರದ ಬಗ್ಗೆ ಮಾತಾಡಿದ್ದು ಸತ್ಯ, ಸಿಎಂ ಕರೆದರೆ ಹೋಗಿ ಹೇಳುತ್ತೇನೆ: ಬಿಆರ್ ಪಾಟೀಲ್

    June 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.