ಭಾರತವು ಪ್ರಪಂಚದಲ್ಲಿ ಅರಿಶಿನದ ಅತಿದೊಡ್ಡ ಉತ್ಪಾದಕ ಮತ್ತು ರಫ್ತುದಾರ. ಭಾರತವು ಅತ್ಯುನ್ನತ ಗುಣಮಟ್ಟದ ಅರಿಶಿನವನ್ನು ಉತ್ಪಾದಿಸುತ್ತದೆ, ಇದು ಪ್ರಪಂಚದ ಉಳಿದ ಭಾಗಗಳಿಗೆ ಹೋಲಿಸಿದರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧದ 60% ಕಮಿಷನ್ ಆರೋಪ ಎಸ್‌ಐಟಿ ತನಿಖೆ ನಡೆಸಲಿ: ಬೊಮ್ಮಾಯಿ!
ಪ್ರಪಂಚದಾದ್ಯಂತ ಅರಿಶಿನದ ಒಟ್ಟು ಉತ್ಪಾದನೆಯಲ್ಲಿ ಭಾರತದ ಪಾಲು 80% ಆಗಿದೆ. ಅರಿಶಿನವನ್ನು ಔಷಧೀಯ ಮಸಾಲೆ ಎಂದೂ ಕರೆಯುತ್ತಾರೆ, ಇದು ಹೆಚ್ಚಿನ ಪ್ರಮಾಣದ ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಮಾಂತ್ರಿಕ ಹಳದಿ ಮಸಾಲೆ ಅಂತಾನೆ ಕರೆಯಲ್ಪಡುವ ಅರಿಶಿನ ನಮ್ಮಲ್ಲಿ ತುಂಬಾನೇ ಜನಪ್ರಿಯವಾದ ಮಸಾಲೆ ಪದಾರ್ಥವಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಅರಿಶಿನವು ಕರ್ಕುಮಾ ಲಾಂಗಾ ಸಸ್ಯದ ಮೂಲದಿಂದ ಉತ್ಪತ್ತಿಯಾಗುವ ವ್ಯಾಪಕವಾಗಿ ಬಳಸಲಾಗುವ ಮಸಾಲೆಯಾಗಿದೆ. ಇದನ್ನು ಚೀನಿ ಮತ್ತು ಆಯುರ್ವೇದ ಔಷಧದಲ್ಲಿ ಗಿಡಮೂಲಿಕೆಗಳ ಚಿಕಿತ್ಸೆಯಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ.
ಅರಿಶಿನವಿಲ್ಲದೆ ಯಾವುದೇ ಧಾರ್ಮಿಕ ಆಚರಣೆ ಪೂರ್ಣಗೊಳ್ಳುವುದಿಲ್ಲ. ಅರಿಶಿನ ಗುರು ಗ್ರಹಕ್ಕೆ ಸಂಬಂಧಿಸಿದೆ. ಅರಿಶಿನವು ಅಡುಗೆಮನೆಯಲ್ಲಿ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ, ಆದರೆ ಇದು ಧಾರ್ಮಿಕ ಕಾರ್ಯಗಳನ್ನು ಸಹ ಪೂರ್ಣಗೊಳಿಸುತ್ತದೆ. ಅರಿಶಿನದಿಂದಾಗಿ, ಅನೇಕ ರೀತಿಯ ವಾಸ್ತು ದೋಷಗಳನ್ನು ಸಹ ತೆಗೆದುಹಾಕಲಾಗುತ್ತದೆ. ಆದ್ದರಿಂದ ಧಾರ್ಮಿಕ ಕಾರ್ಯಗಳಲ್ಲಿ ಅರಿಶಿನದ ವಿಶೇಷ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳೋಣ.
* 1. ಅರಿಶಿನ ಬೊಟ್ಟು:- ಪೂಜೆಯ ಸಮಯದಲ್ಲಿ ಕೈ ಮಣಿಕಟ್ಟಿಗೆ ಅಥವಾ ಕುತ್ತಿಗೆಗೆ ಅರಿಶಿನದ ಬೊಟ್ಟು ಅಥವಾ ಹುಂಡು ಇಡುವುದರಿಂದ ಗುರು ಗ್ರಹವು ಜಾತಕದಲ್ಲಿ ಬಲಗೊಳ್ಳುತ್ತದೆ ಮತ್ತು ಆ ವ್ಯಕ್ತಿಯ ಮಾತು ಸಮಾಜದಲ್ಲಿ ಗೌರವಪೂರ್ವಕವಾಗಿರುತ್ತದೆ.
* 2. ಅರಿಶಿನ ದಾನ:- ಹಿಂದೂ ಧರ್ಮದಲ್ಲಿ, ಅರಿಶಿನ ದಾನವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಅರಿಶಿನ ದಾನ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎನ್ನುವ ನಂಬಿಕೆಯಿದೆ. ಇನ್ನು ಜ್ಯೋತಿಷ್ಯ ಶಾಸ್ತ್ರವನ್ನು ತೆಗೆದುಕೊಂಡರೆ, ನಾವು ಅರಿಶಿನ ದಾನ ಮಾಡುವುದರಿಂದ ಗುರು ಗ್ರಹದಲ್ಲಿ ಹೊಂದಾಣಿಕೆ ರೂಪುಗೊಳ್ಳುತ್ತದೆ ಎಂದು ಹೇಳಲಾಗಿದೆ.
* 3. ಅರಿಶಿನ ತಿಲಕ:- ಪೂಜೆಯಲ್ಲಿ ಹಣೆಯ ಮೇಲೆ ಅರಿಶಿನ ತಿಲಕ ಹಚ್ಚುವುದರಿಂದ ಮದುವೆಗೆ ಸಂಬಂಧಿಸಿದ ಕೆಲಸಕ್ಕೆ ಸಹಾಯ ಮಾಡುತ್ತದೆ. ವಿವಾಹ ಸಂಬಂಧಗಳಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ ಹಣೆಗೆ ಅರಿಶಿನದ ತಿಲಕವನ್ನು ಇಡಬೇಕು. ಇದು ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ.
* 4. ಅರಿಶಿನ ರೇಖೆ:- ಮನೆಯ ಮುಖ್ಯ ದ್ವಾರದ ಬಳಿ ಅಥವಾ ಮನೆಯನ್ನು ಪ್ರವೇಶಿಸುವಲ್ಲಿ ಅಥವಾ ಮನೆಯ ಗೋಡೆಯ ಸುತ್ತ ಅರಿಶಿನ ರೇಖೆಯನ್ನು ಹಾಕುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ಆ ಮನೆಯೊಳಗೆ ಪ್ರವೇಶಿಸುವುದಿಲ್ಲ ಎನ್ನುವ ನಂಬಿಕೆಯಿದೆ. ಹಿಂದೆ ಕೆಲವು ಹಳ್ಳಿಗಳಲ್ಲಿ ಪೌರ್ಣಮಿ ಮತ್ತು ಅಮಾವಾಸ್ಯೆಯ ಸಮಯದಲ್ಲಿ ಈ ರೀತಿ ಮಾಡುತ್ತಿದ್ದರು.
* 5. ಅರಿಶಿನ ನೀರಿನ ಸ್ನಾನ:- ಅರಿಶಿನ ಬಳಕೆಯಲ್ಲಿ, ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ನಂತರ ಆ ನೀರಿನಿಂದ ಸ್ನಾನ ಮಾಡಿದರೆ, ಅದು ಆ ವ್ಯಕ್ತಿಗೆ ದೈಹಿಕ ಮತ್ತು ಮಾನಸಿಕ ಶುದ್ಧತೆಯನ್ನು ನೀಡುತ್ತದೆ. ಈ ಪ್ರಯೋಗವು ವೃತ್ತಿಜೀವನದ ಯಶಸ್ಸಿಗೆ ಸೂಕ್ತವಾದ ರಾಮಬಾಣವಾಗಿದೆ.
* 6. ದುಃಸ್ವಪ್ನಗಳು ಮತ್ತು ಕೆಟ್ಟ ಗಾಳಿಯಿಂದ ರಕ್ಷಣೆ:- ಅರಿಶಿನದ ಕೊಂಬಿಗೆ ಮೋಲಿ ದಾರವನ್ನು ಸುತ್ತಿ ಅಥವಾ ಮೋಲಿ ದಾರಕ್ಕೆ ಅರಿಶಿನವನ್ನು ಹಚ್ಚಿ ರಾತ್ರಿ ಮಲಗಿದ್ದಾಗ ಹಾಸಿಗೆಯಲ್ಲಿ ಇಡುತ್ತಾರೆ, ಆಗ ಆ ವ್ಯಕ್ತಿಗೆ ದುಃಸ್ವಪ್ನಗಳು ಬೀಳುವುದಿಲ್ಲ. ಇದನ್ನು ಮಾಡುವುದರಿಂದ ಅತಿಯಾದ ಮತ್ತು ಹೊರಗಿನ ಗಾಳಿಯಿಂದ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಗಾಳಿಯಲ್ಲಿನ ನಕಾರಾತ್ಮಕ ಶಕ್ತಿಗಳು ಕೂಡ ನಮ್ಮನ್ನು ಮುಟ್ಟುವುದಿಲ್ಲ.
* 7. ವಿವಾಹ ಯೋಗಕ್ಕೆ ಅರಿಶಿನ ಬಳಕೆ:- ಪ್ರತಿ ಗುರುವಾರ ಭಗವಾನ್ ಗಣೇಶನಿಗೆ ಒಂದು ಚಿಟಿಕೆ ಅರಿಶಿನವನ್ನು ಅರ್ಪಿಸಿದರೆ, ಆಗ ವಿವಾಹದಲ್ಲಿನ ಎಲ್ಲಾ ಅಡೆತಡೆಗಳು ದೂರಾಗುತ್ತದೆ. ಅದೇ ಸಮಯದಲ್ಲಿ, ವಿಷ್ಣು ಮತ್ತು ಲಕ್ಷ್ಮಿಯ ವಿಗ್ರಹಗಳ ಹಿಂದೆ ಅರಿಶಿನವನ್ನು ಯಾರಿಗೂ ತಿಳಿಯದಂತೆ ಅಡಿಗಿಸಟ್ಟರೆ ವಿವಾಹವು ಬಹುಬೇಗ ಆಗುತ್ತದೆ.
* 8. ಸಮೃದ್ಧಿಗೆ ಅರಿಶಿನ ಬಳಕೆ:- ಅರಿಶಿನ ಬಳಕೆಯು ಜೀವನಕ್ಕೆ ಸಮೃದ್ಧಿಯನ್ನು ತರುತ್ತದೆ. ಇದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಅದಕ್ಕಾಗಿಯೇ ಇದನ್ನು ಪೂಜೆ, ಹೋಮ ಮತ್ತು ಹವನ, ಪಠಣ ಇತ್ಯಾದಿಗಳಲ್ಲಿಯೂ ಬಳಸಲಾಗುತ್ತದೆ. ಪ್ರತಿನಿತ್ಯ ಸ್ನಾನದ ನೀರಿಗೆ ಅರಿಶಿನವನ್ನು ಬೆರೆಸಿ ಸ್ನಾನ ಮಾಡಿ ಹಣೆಗೆ ಅರಿಶಿನದ ತಿಲಕವನ್ನಿಟ್ಟುಕೊಳ್ಳಿ.
* 9. ಅರಿಶಿನ ಜಪಮಾಲೆ:- ಅರಿಶಿನದ ಜಪಮಾಲೆಯೊಂದಿಗೆ ನೀವು ಯಾವುದೇ ಮಂತ್ರವನ್ನು ಜಪಿಸಿದರೆ, ನೀವು ಅತಿಯಾದ ಬುದ್ಧಿಶಕ್ತಿಯನ್ನು ಹೊಂದುತ್ತೀರಿ ಮತ್ತು ಇದು ನಿಮ್ಮ ಗಮನವನ್ನು ಮಂತ್ರದ ಮೇಲೆ ಕೇಂದ್ರೀಕರಿಸಲು ಸಹಕರಿಸುತ್ತದೆ. ಇದರೊಂದಿಗೆ ನಿಮ್ಮ ಏಕಾಗ್ರತೆಯನ್ನು ಕೂಡ ಹೆಚ್ಚಿಸುತ್ತದೆ.