ಯಾದಗಿರಿ:- ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕುರಿಗಾಹಿಗಳು ನೀರುಪಾಲಾಗಿರುವ ಘಟನೆ ಸುರಪುರ ತಾಲೂಕಿನ ಏವೂರ ಗ್ರಾಮದ ಬಳಿಯ ಬಸವಸಾಗರ ಜಲಾಶಯದ ಜೆಬಿಸಿ ಕಾಲುವೆಯಲ್ಲಿ ಜರುಗಿದೆ.
ಲ್ಯಾಪ್ ಟಾಪ್ ಆನ್ ಮಾಡಿದ ತಕ್ಷಣ ರಿಫ್ರೆಶ್ ಮಾಡ್ತೀರಾ? ಹಾಗಿದ್ರೆ ನೀವು ಇದನ್ನು ನೋಡಿ!
ಜಟ್ಟೆಪ್ಪ (19), ಕರಿಯಪ್ಪ (19) ಮೃತರು. ರವಿವಾರ (ಮೇ.18) ಒಟ್ಟು ಆರು ಮಂದಿ ಕುರಿಗಾಯಿಗಳು ಕುರಿ ಮೇಯಿಸಲು ತೆರಳಿದ್ದರು. ಆರೂ ಮಂದಿ ಕಾಲುವೆಯಲ್ಲಿ ಈಜಲು ತೆರಳಿದ್ದಾರೆ. ಆರು ಮಂದಿ ಕುರಿಗಾಹಿಗಳ ಪೈಕಿ ಇಬ್ಬರು ನೀರುಪಾಲಾಗಿದ್ದು, ನಾಲ್ವರು ಪಾರಾಗಿದ್ದಾರೆ.
ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.