ಬೆಂಗಳೂರು:- ಹಳತನ್ನು ಕಳಚಿ ಹೊಸ ಚಿಗುರು ಚಿಗುರಿ ಪರಿವರ್ತನೆಗೆ ಸಂಕೇತವಾಗುವ ಯುಗಾದಿ ಮತ್ತೆ ಬಂದಿದೆ. ಯುಗಾದಿ ಎಂದರೆ ಕೇವಲ ಪ್ರಕೃತಿ ಬದಲಾವಣೆ ಮಾತ್ರವಲ್ಲದೇ ಜೀವಿಗಳ ಬದುಕಿನ ಬದಲಾವಣೆಗಳು. ಅದರಲ್ಲೂ ಜನತೆ ನಮ್ಮ ಆ ವರ್ಷದ ಬದುಕಿಗೆ ಮುನ್ನಡಿ ಬರೆಯುವ ಹಬ್ಬ. ಯುಗಾದಿ ಆಚರಣೆಗೆ ಇಡೀ ಕರುನಾಡು ತಯಾರಿ ನಡೆಸುತ್ತಿದೆ.
ಯುಗಾದಿ ದಿನವೇ ಪತ್ನಿ ಸೇರಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ: ಗಂಡ ಎಸ್ಕೇಪ್, ಖಾಕಿ ತಲಾಶ್!
ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿಯೂ ಮಾವು ಮತ್ತು ಬೇವಿನ ಸೊಪ್ಪಿನ ರಾಶಿ ಇರಿಸಲಾಗಿದ್ದು, ಜನರು ಸಂಭ್ರಮದಿಂದ ಖರೀದಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಕೆ.ಆರ್.ಮಾರುಕಟ್ಟೆ, ಯಶವಂತಪುರ, ಗಾಂಧಿ ಬಜಾರ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ವಿಜಯನಗರ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆ ನಗರದ ವಿವಿಧೆಡೆ ಮಾರುಕಟ್ಟೆಯಲ್ಲಿ ಜನಜಂಗುಳಿ ಇನ್ನೂ ಮುಂದುವರಿದಿದೆ. ಜನರು ಹಬ್ಬಕ್ಕೆ ಬೇಕಾದ ಮಾವು ಮತ್ತು ಬೇವಿನ ಸೊಪ್ಪು, ಹೂವು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ನಗರದ ಬಟ್ಟೆ ಅಂಗಡಿಗಳು, ಆಭರಣ ಮಳಿಗೆಗಳಲ್ಲೂ ಖರೀದಿ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಎರಡು-ಮೂರು ದಿನಗಳಿಂದ ಹೂವಿನ ವ್ಯಾಪಾರ ಗರಿಗೆದರಿದ್ದು, ಮಲ್ಲಿಗೆ, ಗುಲಾಬಿ ಸೇರಿದಂತೆ ಕೆಲ ಹೂವಿನ ದರಗಳು ಕೊಂಚ ಏರಿಕೆಯಾಗಿವೆ. ಅಲ್ಲದೇ ಈ ಬಾರಿ ಕನಕಾಂಬರ ಹೂವಿನ ಬೆಳೆ ಚೆನ್ನಾಗಿ ಬಂದಿದ್ದು, ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿದೆ.
ನಗರವಾಸಿಗಳಲ್ಲಿ ಹಲವರು ಊರುಗಳಿಗೆ ತೆರಳಿದ್ದಾರೆ. ತಿಂಗಳಾಂತ್ಯಕ್ಕೆ ಹಬ್ಬ ಬಂದಿದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಿದೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಕಡಿಮೆ ಆಗಿದೆ.