ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಎಲ್ಲೆಡೆಯೂ ನಿರಂತರ ಮಳೆಯಾಗುತ್ತಿದ್ದು, ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಹುಬ್ಬಳ್ಳಿಯ ಪ್ರತಿಷ್ಠಿತ ಉಣಕಲ್ ಕೆರೆಯು ಕೋಡಿ ಹರಿಯುತ್ತಿದೆ.
ಹೌದು.. ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉಣಕಲ್ ಕೆರೆ ಬುಧವಾರದಿಂದಲೇ ಕೋಡಿ ಹರಿಯುತ್ತಿದೆ. ಕೆರೆ ಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡಿಗೆ ಪಥ ನಿರ್ಮಿಸಲಾಗಿದ್ದು, ಕೋಡಿ ಹರಿಯುವುದನ್ನು ವೀಕ್ಷಿಸಲು ಜನರಿಗೆ ಅನುಕೂಲವಾಗಿದೆ.
ನಿಮಗೂ ಈ ಸಮಸ್ಯೆ ಇದ್ಯಾ!? ಹಾಗಿದ್ರೆ ಆಲೂಗಡ್ಡೆ ಮುಟ್ಟಲೇಬೇಡಿ! ಇದು ತಿಳಿದ್ರೆ ಶಾಕ್ ಆಗ್ತೀರಾ!?
ಉಣಕಲ್ ಕೆರೆ ಮೈದುಂಬಿದೆ. ಪ್ರತಿವರ್ಷ ಕೋಡಿ ಹರಿದಾಗಲೂ ಜನರು ತಂಡಗಳಲ್ಲಿ ಬಂದು, ವೀಕ್ಷಿಸುತ್ತಾರೆ. ಆದರೆ, ಕೆರೆಯಲ್ಲಿ ಸಂಗ್ರಹವಾದ ತ್ಯಾಜ್ಯ ಕೋಡಿ ಹರಿವ ನೀರಿನ ಮೂಲಕ ರಾಜಕಾಲುವೆ ಸೇರುತ್ತಿದೆ. ರಾಜಕಾಲುವೆ ತುಂಬಿದರೆ, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಈಗಾಗಲೇ ಬಹುತೇಕ ಕಡೆಯಲ್ಲಿ ರಾಜಕಾಲುವೆ ಸಂಪೂರ್ಣ ಕಸದಿಂದ ತುಂಬಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.