ಗದಗ:- ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಗದಗ ಬೆಟಗೇರಿಯ ನರಸಾಪೂರದ ಆಶ್ರಯ ಕಾಲೋನಿಯಲ್ಲಿ ಜರುಗಿದೆ.
ಎಷ್ಟೇ ವಯಸ್ಸಾದ್ರೂ ನೀವು ತುಂಬಾ ಚಿಕ್ಕವರಂತೆ ಕಾಣಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!
ಉಮೇಶ ಕಾಟವಾ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ವ್ಯಕ್ತಿಯು, SS ಫೈನಾನ್ಸ್, ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಸೇರಿದಂತೆ ಇತರೆ ಮೈಕ್ರೋ ಫೈನಾನ್ಸ್ ನಲ್ಲಿ ಸುಮಾರು ಒಂದೂವರೆ ಲಕ್ಷ ಸಾಲ ಮಾಡಿದ್ದರು.
ಆದರೆ ಸಾಲ ಮರು ಪಾವತಿ ಮಾಡಲು ಕಷ್ಟವಾಗುತ್ತಿದ್ದ ಹಿನ್ನೆಲೆ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಹೆಚ್ಚಾಯ್ತು. ರಾತ್ರಿ ಒಂಭತ್ತು ಘಂಟೆಯಾದ್ರೂ ಮನೆ ಕಡೆ ಬಂದು ಸಾಲ ಮರುಪಾವತಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಪೀಡಿಸುತ್ತಿದ್ದರು. ಅಲ್ಲದೇ ನೀನು ಸಾಕಿರುವ ಆಡುಗಳನ್ನು ಮಾರಿ ನಮ್ಮ ಸಾಲ ಕಟ್ಟು ಎಂದು ಮೈಕ್ರೋ ಸಿಬ್ಬಂದಿ ಟಾರ್ಚರ್ ಕೊಟ್ಟಿದ್ದಾರೆ.
ಸಂಜೆ ಒಳಗೆ ಕಂತು ಕಟ್ಟಲೇಬೇಕು ಅಂತಾ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದರು. ಈ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.