ರಿಯಲ್ ಸ್ಟಾರ್, ಸೂಪರ್ ಸ್ಟಾರ್, ಬುದ್ದಿವಂತ ಖ್ಯಾತಿಯ ಡೈರೆಕ್ಟರ್ಸ್ಗಳ ಡೈರೆಕ್ಟರ್ ಅಂದ್ರೆ ಒನ್ ಅಂಡ್ ಒನ್ಲಿ ಉಪೇಂದ್ರ. ಉಪ್ಪಿ ನಟನೆ, ನಿರ್ದೇಶನದಲ್ಲಿ ತಮ್ಮದೇ ಛಾಪೂ ಮೂಡಿಸಿದ್ದಾರೆ. ಉಪೇಂದ್ರ ಅವರಂತೆ ಇಂಡಸ್ಟ್ರಿಯಲ್ಲಿ ಮಿಂಚೋದಿಕ್ಕೆ ಅವರ ಪುತ್ರ ರೆಡಿಯಾಗಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಸಿನಿಮಾ ಇಂಡಸ್ಟ್ರೀಗೆ ಸೆಲೆಬ್ರಿಟಿ ಮಕ್ಕಳ ಎಂಟ್ರಿ ಹೊಸತೆಲ್ಲ. ಇತ್ತೀಚೆಗೆ ದುನಿಯಾ ವಿಜಯ್ ಕುಮಾರ್ ಇಬ್ಬರು ಮಕ್ಕಳ ಚಿತ್ರರಂಗ ಪ್ರವೇಶಿಸಿದ್ದಾರೆ. ಇದೀಗ ಉಪ್ಪಿ ಸುಪುತ್ರ ಆಯುಷ್ ಉಪೇಂದ್ರ ಬಣ್ಣ ಹಚ್ಚಲು ರೆಡಿಯಾಗಿದ್ದಾರಂತೆ. ನಿನ್ನೆ ಆಯುಷ್ ಹುಟ್ಟುಹಬ್ಬದ ಅಂಗವಾಗಿ ಇಡೀ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹೊಸ ಸಿನಿಮಾದ ಸ್ಕ್ರೀಪ್ಟ್ ಪೂಜೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಆಯುಷ್ ಉಪೇಂದ್ರಗೆ ಕಲೆ ರಕ್ತದಲ್ಲಿಯೇ ಬಂದಿದೆ. ಅಮ್ಮ-ಅಪ್ಪ ಇಬ್ಬರು ಸಿನಿಮಾ ಇಂಡಸ್ಟ್ರೀಯಲ್ಲಿ ತಮ್ಮದೇ ದ ಹೆಸರು ಮಾಡಿದ್ದಾರೆ. ಹೀಗಾಗಿ ಅವರಿಗೆ ರಕ್ತಗತವಾಗಿ ಕಲೆ ಒಲಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಆಯುಷ್ ಉಪೇಂದ್ರ ಅವರನ್ನು ಇಂಡಸ್ಟ್ರೀಗೆ ಪರಿಚಯಿಸುತ್ತಿರುವುದು ಪುರುಷೋತ್ತಮ್.
ಯಶ್ ಗೆ ಮೊದಲ ಸಲಾ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಪುರುಷೋತ್ತಮ್ ಈಗ ಉಪ್ಪಿ ಮಗನ್ನು ಇಂಡಸ್ಟ್ರೀಗೆ ಲಾಂಚ್ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ. ತಾರಾ ಪತಿ ವೇಣು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರಂತೆ. ನಟನೆಗಾಗಿ ಒಂದಷ್ಟು ಕೋರ್ಸ್ ಕಲಿತಿರುವ ಆಯುಷ್ ಉಪೇಂದ್ರ ಎಂಟ್ರಿ ಹೇಗೆ ಇರಲಿದೆ ಎಂಬ ನಿರೀಕ್ಷೆ ಇಡೀ ಸಿನಿಮಾಪ್ರೇಮಿಗಳಿಗಿದೆ.