ರಿಯಲ್ ಸ್ಟಾರ್ ಉಪೇಂದ್ರ ವಿಭಿನ್ನ ಪಾತ್ರಗಳ ಗಮನಸೆಳೆದವರು. ಸದ್ಯ ಭಾರ್ಗವ ಸಿನಿಮಾದಲ್ಲಿ ನಟಿಸುತ್ತಿರುವ ಅವರೀಗ ಮತ್ತೊಮ್ಮೆ ಟಾಲಿವುಡ್ನತ್ತ ಹೆಜ್ಜೆ ಇಟ್ಟಿದ್ದಾರೆ. ಉಪ್ಪಿ ಸನ್ ಆಫ್ ಸತ್ಯಮೂರ್ತಿ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಅವರು ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ನಾಯಕನಾಗಿ ನಟಿಸುತ್ತಿರುವ #RAPO22 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರ ಮಿಸ್ ಶೆಟ್ಟಿ ಮಿಸ್ಟರ್ ಪಾಲಿಶೆಟ್ಟಿ ನಿರ್ದೇಶಿಸಿದ್ದ ಮಹೇಶ್ ಬಾಬು ಪಿ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ. ಈ ಸಿನಿಮಾಗೆ ರಿಯಲ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ.
ಉಪೇಂದ್ರ ರಾಮ್ ಪೋತಿನೇನಿ ಸಿನಿಮಾದಲ್ಲಿ ಸೂರ್ಯ ಕುಮಾರ್ ಎಂಬ ಪಾತ್ರ ಪ್ಲೇ ಮಾಡುತ್ತಿದ್ದಾರೆ. ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ಬುದ್ದಿವಂತನನ್ನು ತಮ್ಮ ಬಳಗಕ್ಕೆ ಸ್ವಾಗತ ಮಾಡಿಕೊಂಡಿದೆ. ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ಉಪ್ಪಿ ಖಳನಾಯಕನಾಗಿ ರಾಮ್ ಗೆ ತೊಡೆತಟ್ಟಲಿದ್ದಾರೆ ಎನ್ನಲಾಗುತ್ತಿದೆ.
అందనివాడు.. అందరివాడు… 🤩
Honoured to present our Superstar @nimmaupendra garu as 'SURYA KUMAR' – a tribute to the Spirit of Every Superstar we admire and look up to. ❤️#RAPO22 ❤️🔥
The exciting #RAPO22TitleGlimpse drops on May 15th 💥 pic.twitter.com/Iys138Nni2
— RAm POthineni (@ramsayz) May 12, 2025
ರಿಯಲ್ ಸ್ಟಾರ್ ಉಪೇಂದ್ರ ಕೂಲಿ ಸಿನಿಮಾ ಮೂಲಕ ಕಾಲಿವುಡ್ಗೆ ಎಂಟ್ರಿ ಕೊಟ್ಟಿದಾರೆ. ಮೊದಲ ಬಾರಿಗೆ ರಜನಿಕಾಂತ್ ಜೊತೆ ಅವರು ನಟಿಸಿದ್ದು, ಬಹುದೊಡ್ಡ ತಾರಾಬಳಗವಿರುವ ಈ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಕೂಲಿ ರಿಲೀಸ್ಗೂ ಮೊದಲೇ ಮತ್ತೊಂದು ತೆಲುಗು ಸಿನಿಮಾಗೆ ಸಹಿ ಹಾಕುವ ಮೂಲಕ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇನ್ನು, ಪ್ಯಾನ್ ಇಂಡಿಯಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿ ನಟಿಸುತ್ತಿದ್ದಾರೆ.