ಇಂಡಿಯನ್ ಪ್ರೀಮಿಯರ್ ಲೀಗ್ ನ 62ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(RR) ಚೆನ್ನೈ ಸೂಪರ್ ಕಿಂಗ್ಸ್ವಿರುದ್ಧ ರೋಚಕ ಗೆಲುವು ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ, 14 ವರ್ಷದ ವೈಭವ್ ಸೂರ್ಯವಂಶಿ, ಧೋನಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Vaibhav touching Mahi's feet ♥️
Sanskar 💯💯#CSKvsRR #VaibhavSuryavanshi pic.twitter.com/61tMzFjWSm
— URS AKASH (@AapkaAkash05) May 20, 2025
ಹೌದು ಪಂದ್ಯದ ನಂತರ ಎರಡೂ ತಂಡಗಳ ಆಟಗಾರರು ಕೈಕುಲುಕುತ್ತಿದ್ದಾಗ ಧೋನಿ ಬಳಿಗೆ ಬಂದ ವೈಭವ್ ಸೂರ್ಯವಂಶಿ, ಇದ್ದಕ್ಕಿದ್ದಂತೆ ಮಾಜಿ ಭಾರತೀಯ ನಾಯಕನ ಪಾದಗಳಿಗೆ ನಮಸ್ಕರಿಸಿದ್ದಾರೆ.
ಈ ಅನಿರೀಕ್ಷಿತ ಬೆಳವಣಿಗೆಗೆ ಧೋನಿ ಕೂಡ ನಗುತ್ತಾ, ವೈಭವ್ ಅವರನ್ನು ಹಿಡಿದು ಮೇಲಕ್ಕೆತ್ತಿ, ಸ್ವಲ್ಪ ಹೊತ್ತು ಅವರೊಂದಿಗೆ ಮಾತುಕಥೆ ನಡೆಸುವುದು ಕಂಡುಬಂದಿತು. ಈ ಅದ್ಭುತ ದೃಶ್ಯವು ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ತೋರಿಸಲಾಗುವ ಗೌರವವನ್ನು ಸಂಕೇತಿಸುತ್ತದೆ ಎಂದು ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ.