ಇಡೀ ಕ್ರಿಕೆಟ್ ಜಗತ್ತು ಇವತ್ತು ಹದಿನಾಲ್ಕು ವರ್ಷದ ಪೋರ ವೈಭವ್ ಸೂರ್ಯವಂಶಿ ಬಗ್ಗೆ ಕೊಂಡಾಡುತ್ತಿದೆ. ಗುಣಗಾನ ಮಾಡುತ್ತಿದೆ. 14 ವರ್ಷದ ಪೋರನ ತಾಕತ್ತು, ಗತ್ತು, ಗೈರತ್ತಿನ ಬಗ್ಗೆ ಕ್ರಿಕೆಟ್ ದಿಗ್ಗಜರೇ ಸಲಾಂ ಎನ್ನುತ್ತಿದ್ದಾರೆ. ನಿನ್ನೆ ನಡೆದ ಆರ್ ಆರ್ ವರ್ಸಸ್ ಜಿಟಿ ಐಪಿಎಲ್ ಕಾಳಗದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು, ಜಸ್ಟ್ ವಾವ್ ಎನ್ನುವ ಫರ್ಪಾಮೆನ್ಸ್ ಕೊಟ್ಟಿದ್ದು ಆರ್ ಆರ್ ಯಂಗೆಸ್ಟ್ ಫ್ಲೇಯರ್ ವೈಭವ್ ಸೂರ್ಯವಂಶಿ.
ಭಾರತದ ಫ್ಯೂಚರ್ ಕ್ರಿಕೆಟ್ ತಾರೆ, ಆರ್ ಆರ್‌ನ ಗತವೈಭವ ಅಂತಾ ಕ್ರಿಕೆಟ್ ಪ್ರೇಮಿಗಳು ಸೂರ್ಯವಂಶಿಯನ್ನು ವರ್ಣನೆ ಮಾಡುತ್ತಿದ್ದಾರೆ. ಸಿಡಿಲಬ್ಬರದ ಆಟ ಆಡಿ ಆರ್ ಆರ್ ಗೆಲುವಿಗೆ ಕಾರಣರಾದ ವೈಭವ್ ಸೂರ್ಯವಂಶಿಗೆ ಮಹಾನ್ ಗುರುವಾಗಿ ಹಿಂದೆ ನಿಂತಿರುವವರು ನಮ್ಮ ಕನ್ನಡದ ಹೆಮ್ಮೆ ರಾಹುಲ್ ದ್ರಾವಿಡ್. ಐಪಿಎಲ್ ಬಿಡ್ಡಿಂಗ್‌ನಲ್ಲಿ ಈ 14ರ ಪೋರನ್ನು ಒಂದೂವರೆ ಕೋಟಿ ಕೊಟ್ಟು ಖರೀಸುವಂತೆ ಹಠ ಹಿಡಿದ್ದು ರಾಹುಲ್ ಡ್ರಾವಿಡ್. ದೆಹಲಿ ಕ್ಯಾಪಿಟಲ್ ಪಾಲಾಗದಂತೆ ವೈಭವ್ ನ್ನು ತಮ್ಮ ತಂಡಕ್ಕೆ ಬರ ಮಾಡಿಕೊಂಡಿದ್ದು ರಾಹುಲ್ ದ್ರಾವಿಡ್.
ಕ್ರಿಸ್ ಗೇಲ್ ದಾಖಲೆ ಅಳಿಸಿ ಹಾಕಲು ಇನ್ನೊಂದೇ ಹೆಜ್ಜೆ ಇಡಬೇಕಿರುವ ವೈಭವ್ ಸೂರ್ಯವಂಶಿ, 35 ಎಸೆತಗಳಲ್ಲಿ ಶತಕ ಗಳಿಸಿ ಗುಜರಾತ್ ಬೌಲರ್ಸ್‌ಗಳನ್ನೇ ಬೆರಗು ಮೂಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ವೈಭವ್ ಸೂರ್ಯವಂಶಿ ಅಗಾಧ ಕ್ರಿಕೆಟ್ ಶಿಸ್ತನ್ನು ಗುರುತಿಸಿದ್ದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್. BCCI ಆಯೋಜಿಸಿದ್ದ U-19 ಟೂರ್ನಿಯಲ್ಲಿ ವೈಭವ್ ಪ್ರದರ್ಶನ ಲಕ್ಷ್ಮಣ್ ಕ್ಲೀನ್ ಬೋಲ್ಡ್ ಆಗಿದ್ದರು. ಬಳಿಕ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ U-19 ಚತುಷ್ಕೋನ ಸರಣಿಗೆ ಆಯ್ಕೆ ಮಾಡಿದರು. ಆ ಬಳಿಕ ಐಪಿಎಲ್ ಹರಾಜು ಸಂದರ್ಭದಲ್ಲಿ ವೈಭವ್ ಸೂರ್ಯವಂಶಿ ಅವರ ಹೆಸರನ್ನು ರಾಜಸ್ಥಾನ್ ರಾಯಲ್ಸ್‌ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಶಿಫಾರಸು ಮಾಡಿದ್ದು ವಿ.ವಿ.ಎಸ್.ಲಕ್ಷ್ಮಣ್. ಹೀಗಾಗಿ ದ್ರಾವಿಡ್ ಹರಾಜಿನಲ್ಲಿ ಹಠ ಬಿಡದೇ ಈ 14ರ ಪೋರನನ್ನು ತಮ್ಮ ಟೀಮ್ ಗೆ ಸೇರ್ಪಡೆ ಮಾಡಿಕೊಂಡಿದ್ದರು.
ಬಿಹಾರದ ಮೂಲದ ವೈಭವ್ ಕ್ರಿಕೆಟ್ ಕನಸನ್ನು ಪೂರೈಸೋದಿಕ್ಕೆ ತಂದೆ ತಾಯಿ ತಮ್ಮ ಕುಟುಂಬದ ಜೀವನಾಡಿಯಾಗಿದ್ದ ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಾರೆ. ಆ ಗಟ್ಟಿ ನಿರ್ಧಾರಕ್ಕೆ ಇವತ್ತು ಸಾರ್ಥಕತೆ ಸಿಕ್ಕಿದೆ. ತಂದೆ ತಾಯಿ ಮಗನ ಸಾಧನೆ ಕಂಡು ಭಾವುಕರಾಗಿದ್ದಾರೆ.