ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಸದ್ದಿಲ್ಲದೇ ಎಂಗೇಜ್ ಆಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿದೆ. ಅನುಕೂಲ್ ಮಿಶ್ರಾ ಎಂಬುವವರು ಜೊತೆ ವೈಷ್ಣವಿ ಉಂಗುರ ಬದಲಿಸಿಕೊಂಡಿದ್ದಾರೆ. ಅವಳ ಪ್ರಪಂಚವು ಸ್ಕ್ರಿಪ್ಟ್‌ಗಳು ಮತ್ತು ಸ್ಟೇಜ್‌ಗಳಾಗಿತ್ತು. ಅವನದು ಆಕಾಶ ಮತ್ತು ಸೇವೆ. ಆದರೆ ವಿಧಿ ಪರಿಪೂರ್ಣ ಪ್ರೇಮಕಥೆಯನ್ನು ಬರೆದಿತು” ಎಂದು ವೈಷ್ಣವಿ ತಮ್ಮ ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ವೈಷ್ಣವಿ ಕೈ ಹಿಡಿಯುತ್ತಿರುವ ಅನುಕೂಲ್ ಮಿಶ್ರ ಏರ್ ಪೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕನ್ನಡಿಗರ ಅಚ್ಚುಮೆಚ್ಚಿನ ನಟಿಯಾಗಿದ್ದ ವೈಷ್ಣವಿ ಗೌಡ ಬಳಿಕ ಬಿಗ್‌ಬಾಸ್ ಶೋನಲ್ಲಿಯೂ ಭಾಗಿಯಾಗಿದ್ದರು. ಬಳಿಕ ಜೀ ಕನ್ನಡ ವಾಹಿನಿಯ ‘ಸೀತಾರಾಮ’ ಧಾರಾವಾಹಿಯಲ್ಲಿ ಸೀತಾ ಪಾತ್ರದ ಮೂಲಕ ಎಲ್ಲರನ್ನೂ ಆವರಿಸಿಕೊಂಡಿದ್ದಾರೆ.
2022ರಲ್ಲಿ ವಿದ್ಯಾಭರಣ್ ಎಂಬುವವರ ಜೊತೆ ವೈಷ್ಣವಿ ಮದುವೆ ಮಾತುಕತೆ ನಡೆದಿತ್ತು. ಹೂ ಮುಡಿಸುವ ಶಾಸ್ತ್ತದ ಫೋಟೋ ವೈರಲ್ ಆಗುತ್ತಿದ್ದಂತೆ, ಅವರು ಸರಿ ಇಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಆ ಸಂಬಂಧ ಮುರಿದು ಬಿದ್ದಿತ್ತು. ಈಗ ವೈಷ್ಣವಿ ತಮ್ಮ ಬಾಳ ಸಂಗಾತಿ ಪರಿಚಯಿಸಿದ್ದಾರೆ.
ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರ ನಿಶ್ಚಿತಾರ್ಥದಲ್ಲಿ ಚಿತ್ರರಂಗದ ಹಲವು ತಾರೆಯರು ಭಾಗಿಯಾಗಿದ್ದಾರೆ. ವೈಷ್ಣವಿ ಅಚ್ಚುಮೆಚ್ಚಿನ ಗೆಳತಿ ನಟಿ ಅಮೂಲ್ಯ ದಂಪತಿ, ನಟಿ ಕಂ ಆಂಕರ್ ಚೈತ್ರಾ ವಸುದೇವ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.