ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕರ್ನಾಟಕ ಹೈಕೋರ್ಟ್ ಎಸ್ಐಟಿಗೆ ಆದೇಶಿಸಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೇ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ಲಪಟಾಯಿಸಿ ಬಾರ್, ಜ್ಯುವೆಲರಿ ಶಾಪ್, ಲೋಕಸಭೆ ಚುನಾವಣೆಗೂ ಹಣ ಬಳಕೆ ಮಾಡಿದ್ದಾರೆ. ಬಿಜೆಪಿ ಹೋರಾಟದ ಪರಿಣಾಮವಾಗಿ ನಾಗೇಂದ್ರ ಸಚಿವ ಸ್ಥಾನ ಕಳೆದುಕೊಂಡ್ರು ಎಂದರು.
Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಸಂಪತ್ತು..! ಹೀಗೆ ಮಾಡಿದ್ರೆ ಬಡತನ ಕಾಡುತ್ತೆ
ಇನ್ನೂ ಖುದ್ದು ಸಿಎಂ ಅವರೇ ಈ ಹಗರಣದಲ್ಲಿ ಭಾಗಿಯಾಗಿದ್ದು, ಆದ್ದರಿಂದಲೇ ನ್ಯಾಯಾಲಯ ಈ ಪ್ರಕರಣವನ್ನ ಸಿಬಿಐಗೆ ವಹಿಸಿದೆ. ಇದರಿಂದ ಮುಂದೆ ದೊಡ್ಡ ತಲೆಗಳು ಉರುಳಲಿವೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.