ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ನಗರದ ಮೂರುಸಾವಿರಹ ಮಠದಲ್ಲಿ ಏ. 27 ರಿಂದ 30 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್. ಹೂಗಾರ ಹೇಳಿದರು. ನಗರದಲ್ಲಿಂದುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 27 ರಂದು ಬೆಳಿಗ್ಗೆ 8.30 ಗಂಟೆಗೆ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಷಟಸ್ಥಲ ಧ್ವಜಾರೋಹಣ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ, ವೀರಶೈವ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ ಹಾಗೂ ಸಿದ್ಧಾರೂಢಮಠದ ಧರ್ಮದರ್ಶಿ ಮಂಜುನಾಥ ಎಸ್. ಮುನವಳ್ಳಿ ಭಾಗವಹಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಬೈಕ್ ರ್ಯಾಲಿ ನಡೆಯಲಿದ್ದು,
ಬಸವಣ್ಣನವರ ಭಾವಚಿತ್ರ ಭವ್ಯ ಮೆರವಣಿಗೆಮುಖ್ಯ ಅತಿಥಿಗಳಾಗಿ ವಸಂತ ಹೊರಟ್ಟಿ, ನಾಗರಾಜ ಗೌರಿ, ಸಂಕಲ್ಪ ಶೆಟ್ಟರ ಆಗಮಿಸಲಿದ್ದಾರೆ ಎಂದರು.
Mango Benefits: ನಿಮಗೆ ಗೊತ್ತೆ..? ತೂಕ ಹೆಚ್ಚಾಗುವುದನ್ನು ತಡೆಯುತ್ತವಂತೆ ಮಾವಿನ ಹಣ್ಣು!
ಏ. 28 ರಂದು ಸಂಜೆ 4 ಗಂಟೆಗೆ ಮಹಿಳೆಯರಿಂದ ಮತ್ತು ಮಕ್ಕಳಿಂದ ಶ್ರೀ ಬಸವಣ್ಣನವರ ವಚನಗಳ ಗಾಯನ ಸ್ಪರ್ಧೆ ನಡೆಯಲಿದೆ. ಸಂಜೆ 6.30ಕ್ಕೆ ಕು. ದಿಯಾ ಆವಾರಿ ಅವರಿಂದ ಭರತ ನಾಟ್ಯ ಜೊತೆಗೆ ವಿದ್ವಾನ ಸುಜಯ ಶಾನಭಾಗ ಮತ್ತು ಕಲಾ ಸುಜಯ ತಂಡಗಳಿಂದ ವಚನಾಧಾರಿತ ನೃತ್ಯರೂಪಕಗಳು, ಕು. ಮಹನ್ಯಾ ಪಾಟೀಲ ಅವರಿಂದ ಸಂಗೀತ ಸಂಜೆ ಮತ್ತು ಪ್ರಕಾಶ ಜಾಡರ ಅವರ ಹಾಸ್ಯ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹಾಗೂ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಕುಂದಗೋಳದ ಬಸವಣ್ಣಜ್ಜನವರು ಉಪಸ್ಥಿತರಿರುವರು ಎಂದು ವಿವರಿಸಿದರು.
ಏ. 29 ರಂದು ಸಂಜೆ 6.30ಕ್ಕೆ ಬಸವರಾಜ ಕೆಂದೊಳ್ಳಿ ಅವರಿಂದ ಬಸವಣ್ಣನವರ ವಚನ ಗಾಯನ ನಡೆಯಲಿವೆ. ಈ ಸಂದರ್ಭದಲ್ಲಿ ವಚನ ಗಾಯನದಲ್ಲಿ ಹಾಗೂ ಇತರ ಚಟುವಟಿಕೆಗಳಲ್ಲಿ ಪಾಲ್ಗೊಂಡವರಿಗೆ ಮತ್ತು ಮಹಿಳೆಯರು ಮತ್ತು ಮಕ್ಕಳಿಗೆ ನಡೆದ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಸನ್ಮಾನಿಸಲಾಗುವದು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯಾ, ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಇತರರು ಭಾಗವಹಿಸಲಿದ್ದಾರೆ ಎಂದರು.
ಏ. 30 ರಂದು ನಡೆಯುವ ಬಸವ ಜಯಂತಿ ಅಂಗವಾಗಿ ಮೂರುಸಾವಿರಮಠ ವೀರಶೈವ ಸಂಘಟನಾ ಸಮಿತಿ ವತಿಯಿಂದ ಅದ್ದೂರಿಯಾಗಿ ಬಸವೇಶ್ವರರ ಜಯಂತ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಅಂದು ಸಂಜೆ 4 ಗಂಟೆಗೆ ನಡೆಯುವ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭವ್ಯ ಮೆರವಣೆಗೆಗೆ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಮೆರವಣಿಗೆ ಮೂರುಸಾವಿರಮಠದಿಂದ ಹೊರಟು ದಾಜೀಬಾನಪೇಟ, ಮೇದಾರ ಓಣಿ, ದುರ್ಗದಬೈಲ್, ಬಾಡವೇ, ಬೆಳಗಾಂವ ಗಲ್ಲಿ, ಮಹಾವೀರ ಗಲ್ಲಿ ಮೂಲಕ ಶ್ರೀಮಠಕ್ಕೆ ಆಗಮಿಸುವದು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕೋಲಾಟ, ಕರಡಿ ಮಜ್ಜಲು ಮೊದಲಾದ ಸಕಲ ವಾದ್ಯವೈಭವಗಳು ಭಾಗವಹಿಸಲಿವೆ ಎಂದರು. ಪ್ರವೀಣ ಕುಬಸದ, ರತ್ನಾ ಗಂಗಣ್ಣವರ, ಅಶೋಕ ಮೀಶೆ, ಚನ್ನಬಸಪ್ಪ ಧಾರವಾಡಶೆಟ್ಟರ, ಈರಪ್ಪ ಎಮ್ಮಿ. ವೀರಣ್ಣ ನೀರಲಗಿ ಇತರರಿದ್ದರು.