ಹುಬ್ಬಳ್ಳಿ; ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ನಗರದ ಗೋಕುಲ ರಸ್ತೆಯಲ್ಲಿನ ಗಾಂಧಿನಗರದಲ್ಲಿನ ಶ್ರೀ ಬಲಮುರಿ ಗಣಪತಿ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವ ಜಯಂತಿ ಏಪ್ರಿಲ್ 26 ರಿಂದ ಮೇ 1 ವರೆಗೆ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಬಲಮುರಿ ಗಣಪತಿ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಶ್ರೀ ಮೃತ್ಯುಂಜಯ ಸೇವಾ ಸಮಿತಿ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.
ಶ್ರೀ ಬಲಮುರಿ ಗಣಪತಿ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಎಸ್.ಬಿ.ಸವದತ್ತಿ, ಗೌರವಾದ್ಯಕ್ಷರಾದ ವಿನೋದ ನಾಯಕ, ಪ್ರಧಾನ ಕಾರ್ಯದರ್ಶಿ ಎಮ್.ಸಿ.ರವದಿ, ಸಹ ಕಾರ್ಯದರ್ಶಿ ಸಿದ್ದೇಶ್ವರ ಕಾರದಕಟ್ಟಿ, ಸಂಘಟನಾ ಕಾರ್ಯದರ್ಶಿ ಬಸವರಾಜ ಹಳಕಟ್ಟಿ, ಮಾರ್ಗದರ್ಶಕರಾದ, ಎಸ್.ಎಸ್.ಶಿವಶಿಂಪರ, ನಿರ್ದೇಶಕರಾದ ವೀರಣ್ಣಾ ಯಾವಗಲ, ಬಣಕಾರ, ಪ್ಯಾಟಿಶೆಟ್ಟರ, ರಾಜು ಮುಲಿಮನಿ, ಮಹೇಶ್ವರಪ್ಪಾ, ಕೋರಿ ಉದಯ ಹೊಳಿಮಠ, ಸಂತೋಷ ಬಡಿಗೇರ ಕಮೀಟಿಯ ಎಲಾ ಪದಾದಿಕಾರಿಗಳು ಸದಸ್ಯರು ಮತ್ತುಗುರು ಹಿರಿಯರು ಮಾರ್ಗದರ್ಶನದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗುವವು.
ಯುವ ಪ್ರೋತ್ಸಾಹಕರಾದ ಶ್ರೇಯಸ್ ಹರಗಿಮಠ, ಆದಿತ್ಯ ಗೌಡರ, ಯಶವಂತ ಪಾಟೀಲ್, ವಿನಯ ಜವಳಿ, ವಿಜಯ್ ಹೀರೆಮಠ, ಸಿದ್ದೇಶ ಜವಳಿ, ರಕ್ಷೀತ್ ಕಾರದಕಟ್ಟಿ, ಎಸ್ .ಸಿ.ಬಿಜಾಪುರ, ಪೂಜಾ ಕೋರಿ,ರಷ್ಮಿ ಕಾರದಕಟ್ಟಿ, ದೇವಸ್ಥಾನದ ಅರ್ಚಕರಾದ ಮಂಜುನಾಥ ದೇವರಗಿಮಠ, ಕುಮಾರಸ್ವಾಮಿ.ಭ.ದೇವರಗಿಮಠ ಸ್ಥಳೀಯರು ಎಲ್ಲ ಕಾರ್ಯಕ್ರಮದಲ್ಲಿ ತನು ಮನ ಧನದಿಂದ ಶ್ರಮಿಸುವರು.
ಏಪ್ರಿಲ್ 30 ರಂದು ನಡೆಯುವ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನ ಸಹ ಆಯೋಜನೆ ಮಾಡಲಾಗಿದೆ. ಶ್ರೀ ವೀರಭದ್ರೇಶ್ವರನ ರುದ್ರಾವತಾರನ ಯಜ್ಞದಂತೆ ಶ್ರೀ ವೀರಭದ್ರೇಶ್ವರನಿಗೆ ಜಯಘೋಷ ಹಾಕುತ್ತಾ ಒಡಪು ಹೇಳುತ್ತಾರೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಮುಖ್ಯಮಂತ್ರಿ ಸಂಸದ ಜಗದೀಶ ಶೆಟ್ಟರ್ ಆಗಮಿಸಲಿದ್ದು, ಅತಿಥಿಗಳನ್ನ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್. ಬಿ.ಸವದತ್ತಿ ಸ್ವಾಗತಿಸುವರು. ಅದೇ ದಿನ ಸಂಜೆ ವಾದ್ಯ ಮೇಳದೊಂದಿಗೆ ನಂದಿಕೊಲಿನ ಕುಣಿತ, ಹೆಜ್ಜಿಮಳಾ, ಜಾಂಜ್ ನಡೆಯುವುದು.