ಟಾಲಿವುಡ್ ಮೆಗಾಸ್ಟಾರ್ ಫ್ಯಾಮಿಲಿಗೆ ಹೊಸ ಸದಸ್ಯನ ಎಂಟ್ರಿ ಖಚಿತವಾಗಿದೆ. ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲ ದಿನಗಳಿಂದ ಜೋಡಿ ತಂದೆ ತಾಯಿ ಆಗಿ ಬಡ್ತಿ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಈ ಸುದ್ದಿಯನ್ನು ಖಚಿತ ಮಾಡಿದ್ದಾರೆ.
ಜೀವನದ ಅತ್ಯಂತ ಸುಂದರವಾದ ಪಾತ್ರ -ಶೀಘ್ರದಲ್ಲೇ ಬರಲಿದೆ ಎಬ ಕ್ಯಾಪ್ಟನ್ ಕೊಟ್ಟು ಪುಟ್ಟ ಮಗುವಿನ ಶೋ ಹಿಡಿದು ಲಾವಣ್ಯ ಹಾಗೂ ವರುಣ್ ಫೋಟೋ ಹಂಚಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿಗೆ ಎಲ್ಲೆಡೆಯಿಂದ ಶುಭಾಶಯಗಳು ಹರಿದು ಬರ್ತಿದೆ.
View this post on Instagram
ವರುಣ್ ತೇಜ್ ಹಾಗೂ ಲಾವಣ್ಯ ಪ್ರೀತಿಸಿ ಸಪ್ತಪದಿ ತುಳಿದ ಜೋಡಿ. ‘ಮಿಸ್ಟರ್’ ಸಿನಿಮಾದಿಂದಲೇ ಇಬ್ಬರ ನಡುವೆ ಸ್ನೇಹ ಶುರುವಾಗಿ, ಅದು ಪ್ರೀತಿಗೆ ತಿರುಗಿತ್ತು. ಕೊನೆಗೆ ಹಿರಿಯರನ್ನು ಒಪ್ಪಿಸಿ, ಇಟಲಿಯಲ್ಲಿ ಸಪ್ತಪದಿ ತುಳಿದಿದ್ದರು. ಇಟಲಿಯಲ್ಲಿ ನಡೆದ ಮದುವೆಗೆ ಚಿರಂಜೀವಿ, ರಾಮ್ ಚರಣ್, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ಸಾಯಿ ಧರಮ್ ತೇಜ್, ನಿತಿನ್ ಸೇರಿದಂತೆ ಅನೇಕರು ಹಾಜರಾಗಿದ್ದರು. ನಂತರ ಹೈದರಾಬಾದ್ಗೆ ಮರಳಿದ ಮೇಲೆ ನ.5ರಂದು ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಲಾಗಿತ್ತು. ತೆಲುಗು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಆರತಕ್ಷತೆಗೆ ಆಗಮಿಸಿ, ನವಜೋಡಿಯನ್ನು ಆಶೀರ್ವದಿಸಿದ್ದರು.