ಟಾಕ್ಸಿಕ್, ಭಾರತೀಯ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಸಿನಿಮಾ. ಮುಂದಿನ ವರ್ಷದ ಮಾರ್ಚ್19ಕ್ಕೆ ಬಹಳ ಅದ್ಧೂರಿಯಾಗಿ ತೆರೆಗೆ ಬರ್ತಿರುವ ಚಿತ್ರ. ಕೆಜಿಎಫ್ ಸರಣಿ ಸಿನಿಮಾ ಬಳಿಕ ರಾಕಿಭಾಯ್ ಯಶ್ ಭತ್ತಳಿಕೆಯಿಂದ ಬರ್ತಿರುವ ಈ ಮೆಗಾ ಪ್ರಾಜೆಕ್ಟ್ ಮೇಲೆ ಇನ್ನಿಲ್ಲದ ನಿರೀಕ್ಷೆಯಂತೂ ಇದೆ. ರಾಷ್ಟ್ರಪ್ರಶಸ್ತಿ ವಿಜೇತೆ ಗೀತು ಮೋಹನ್ ದಾಸ್ ಜೊತೆಗೂಡಿ ಕೆಜಿಎಫ್ ಕಿಂಗ್ ಡ್ರಗ್ಸ್ ಕಥೆಯನ್ನು ಹರವಿಡೋದಿಕ್ಕೆ ಹೊರಟಿದ್ದಾರೆ. ಇಲ್ಲಿವರೆಗೂ ಟಾಕ್ಸಿಕ್ ತಾರಾಬಳಗದ ಬಗ್ಗೆ ಗುಟ್ಟುರಟ್ಟಾಗಿಲ್ಲ. ಆದ್ರೆ ಅವರು ನಟಿಸ್ತಿದ್ದಾರಂತೆ, ಇವರು ನಟಿಸ್ತಾರಂತೆ ಅನ್ನೋ ಬರೀ ಅಂತೇ ಕಂತೇಗಳ ಸಮಾಚಾರ ಕೇಳ್ತಿದ್ದೇವೆ. ಅದಕ್ಕೀಗ ಹೊಸ ಸೇರ್ಪಡೆ ಗುಬ್ಬಿ ವೀರಣ್ಣನ ಮೊಮ್ಮಗಳು ಬಿ ಜಯಶ್ರೀ.
ರಂಗಭೂಮಿಯ ದಿಗ್ಗಜ ಗುಬ್ಬಿ ವೀರಣ್ಣನ ಮೊಮ್ಮಗಳು ಬಿ ಜಯಶ್ರೀ ಈಗ ಟಾಕ್ಸಿಕ್ ಭಾಗವಾಗಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಕಂಚಿನ ಕಂಠ, ಮನಮುಟ್ಟುವ ನಟನೆ, ನೇರಮಾತುಗಳಿಂದ ಖ್ಯಾತಿ ಪಡೆದವರು ಜಯಶ್ರೀಯಮ್ಮ.ಈ ಹೆಮ್ಮೆಯ ಕಲಾವಿದೆ ಈಗ ಯಶ್ ಟಾಕ್ಸಿಕ್ ನಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳದೇ ಹೋದರೂ ಈ ಮ್ಯಾಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ಪವರ್ ಫುಲ್ ಪಾತ್ರದಲ್ಲಿ ಜಯಶ್ರೀಮ್ಮ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಟಾಕ್ಸಿಕ್ ಸಿನಿಮಾದ ಶೂಟಿಂಗ್ ಸದ್ಯ ಮುಂಬೈನಲ್ಲಿ ನಡೆಯುತ್ತಿದೆ. ಪತ್ನಿ ಜೊತೆ ಯಶ್ ಮುಂಬೈನಲ್ಲಿಯೇ ಬೀಡುಬಿಟ್ಟಿದ್ದಾರೆ. ಇತ್ತೀಚೆಗೆಷ್ಟೇ ನಯನ್ ತಾರಾ ಕೂಡ ಮಕ್ಕಳ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಟಾಕ್ಸಿಕ್ ಶೂಟಿಂಗ್ ನಲ್ಲಿ ಭಾಗಿಯಾಗೋದಿಕ್ಕೆ ಮಯಾನಗರಿಗೆ ನಯನ್ ಲ್ಯಾಂಡ್ ಆಗಿರುವ ಬಗ್ಗೆ ಸುದ್ದಿಯಾಗಿತ್ತು. ಕೆವಿಎನ್ ಹಾಗೂ ಯಶ್ ಒಡೆತನದ ಮಾಸ್ಟರ್ ಮೈಂಡ್ ಕ್ರಿಯೇಷನ್ ಟಾಕ್ಸಿಕ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.