ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ನಡುವೆ ಏನೋ ಇದೆ. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನೋದು ಎಲ್ಲರಿಗೂ ಇರುವ ಕುತೂಹಲ. ಆದರೆ ಇವರಿಬ್ಬರು ಮಾತ್ರ ನಾವು ಫ್ರೆಂಡ್ಸ್ ಅಂತಾರೇ. ಆದ್ರೆ ಒಟ್ಟೊಟ್ಟಿಗೆ ಔಟಿಂಗ್, ಡಿನ್ನರ್ ಗೆ ಹೋಗುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೆ. ಸದ್ಯ ರಶ್ಮಿಕಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತ ವಿಜಯ್ ಕೂಡ ಕಿಂಗ್ ಡಮ್ ಸಿನಿಮಾದ ಬ್ಯುಸಿಯಾಗಿದ್ದಾರೆ.
ವಿಜಯ್ ದೇವರಕೊಂಡ ಥೇಟ್ ಅರ್ಜುನ್ ರೆಡ್ಡಿಯಂತೆ ಕಾಣಿಸಿಕೊಂಡಿರುವ ಕಿಂಗ್ ಡಮ್ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಈ ಗೀತೆಯಲ್ಲಿ ವಿಜಯ್ ನಟಿ ಭಾಗ್ಯಶ್ರೀಯೊಟ್ಟಿಗೆ ಲಿಕ್ ಲಾಕ್ ಮಾಡಿದ್ದಾರೆ. ಗೌತಮ್ ತಿನ್ನನುರಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇದೇ ತಿಂಗಳ 30ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ವಿಜಯ್ ದೇವರಕೊಂಡ ಜೊತೆಗೆ ಮೊದಲ ಬಾರಿಗೆ ಭಾಗ್ಯಶ್ರೀ ಬೋರ್ಸೆ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆಗಿನ ಸಿನಿಮಾಗಳ ಬಳಿಕ ವಿಜಯ್ ದೇವರಕೊಂಡ ಸಿನಿಮಾ ಅಷ್ಟೊಂದು ಸಕ್ಸಸ್ ಕಂಡಿಲ್ಲ. ಆದರೀಗ ‘ಕಿಂಗ್ಡಮ್’ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ.
ಗೀತಾ ಗೋವಿಂದ ಸಿನಿಮಾದಲ್ಲಿ ವಿಜಯ್ ರಶ್ಮಿಕಾ ಲಿಕ್ ಲಾಕ್ ಮಾಡುವ ಸೀನ್ಸ್ ವೈರಲ್ ಆಗಿತ್ತು. ಆ ಬಳಿಕ ಈ ಜೋಡಿ ಸೈಲೆಂಟಾಗಿಯೇ ಪ್ರೀತಿಯಲ್ಲಿ ಬಿದ್ದಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ರಶ್ಮಿಕಾ ಬಳಿಕ ವಿಜಯ್ ದೇವರಕೊಂಡ ನಟಿ ಭಾಗ್ಯಶ್ರೀ ಬೋರ್ಸೆಗೆ ಲಿಪ್ ಲಾಕ್ ಮಾಡಿದ್ದಾರೆ. ಆ ಪ್ರೋಮೋ, ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.