ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಸದಾ ಒಂದಲ್ಲ ಒಂದು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಾರೆ. ಇದೀಗ ಫರ್ಪೆಕ್ಟ್ ಫ್ಯಾಮಿಲಿ ಪಿಕ್ಚರ್ ಶೇರ್ ಮಾಡಿದ್ದು, ಸೆಲೆಬ್ರಿಟಿಗಳು ಹ್ಯಾಪಿ ಪಿಕ್ಚರ್, ಈ ಕುಟುಂಬಕ್ಕೆ ಯಾರ ದೃಷ್ಟಿ ಬೀಳದಿರಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಅಂಬಾರಿ ಹೊರುವ ಅಭಿಮನ್ಯು ಆನೆ ಜೊತೆ ದರ್ಶನ್, ವಿಜಯಲಕ್ಷ್ಮೀ, ಮಗ ವಿನೀಶ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಡಿಬಾಸ್, ಅತ್ತಿಗೆ, ಮಗನನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ ದರ್ಶನ್ ರನ್ನು ಶತಪ್ರಯತ್ನ ಮಾಡಿ ವಿಜಯಲಕ್ಷ್ಮೀ ಹೊರತಂದಿದ್ದರು.
ದರ್ಶನ್ ಸದ್ಯ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ರಾಜಸ್ತಾನದ ಉದಯಪುರದಲ್ಲಿ ಮೂರನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಮಾತಿನ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚನ ರೈ, ಮಹೇಶ್ ಮಂಜ್ರೇಕರ್, ಅಚ್ಯುತಕುಮಾರ್ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.