ವಿಜಯಪುರ: ಅನುಮಾನಾಸ್ಪದವಾಗಿ ಶಾಲಾ ವಿದ್ಯಾರ್ಥಿಯ ಶವ ತಾಳಿಕೋಟಿಯ ಖಾಸಗಿ ಶಾಲೆಯ ಪಕ್ಕದ ಜಮೀನಿನ ಬೇವಿನಮರದ ಕೆಳಗೆ ಪತ್ತೆಯಾಗಿರುವ ಘಟನೆ ನಡೆದಿದೆ. ಈ ಶವ ಸಂಬಂಧ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಶ್ರೀ ವಿನಾಯಕ ಇಂಟರ್ನ್ಯಾಷನಲ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಮಡಿವಾಳಪ್ಪ ಈರಗಂಟೆಪ್ಪ ಚಬನೂರು (15) ಶವವಾಗಿ ಪತ್ತೆಯಾಗಿದ್ದು, ಬೆಳಿಗ್ಗೆ 7 ಗಂಟೆಗೆ ಪೋಷಕರಿಗೆ ಘಟನೆ ಬಗ್ಗೆ ಗೊಂದಲಮಯವಾಗಿ ಶಾಲಾ ಸಿಬ್ಬಂದಿ ಮಾಹಿತಿ ನೀಡಿರುವ ಹಿನ್ನೆಲೆ ಪೋಷಕರು ವಿದ್ಯಾರ್ಥಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಘಟನೆ ಸಂಬಂಧ ತನಿಖೆ ಆರಂಭಿಸಿರುವ ತಾಳಿಕೋಟಿ ಠಾಣಾ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ರಾಮನಗೌಡ ಸಂಕನಾಳ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ.