ವಿಜಯಪುರ:- ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಜರುಗಿದೆ.
ನೀನ್ಯಾಕೆ ಸಾಯ್ಬಾರ್ದು ಎಂದು ಗಂಡ ಕೇಳಿದ್ದೇ ತಡ ಆತ್ಮಹತ್ಯೆ ಮಾಡಿಕೊಂಡ ಹೆಂಡ್ತಿ!
ಭಾನುವಾರದ ರಜೆ ಇರುವ ಕಾರಣ ಇಂದು ಸಿಬ್ಬಂದಿ ರಜೆ ಇರುತ್ತಾರೆ ಎಂದು ಖತರ್ನಾಕ್ ಪ್ಲ್ಯಾನ್ ಮಾಡಿಯೇ ಕಳ್ಳರು ಕೃತ್ಯ ಎಸಗಿದ್ದಾರೆ. ಮೊದಲಿಗೆ ಕೆನರಾ ಬ್ಯಾಂಕ್ ಮುಂಭಾಗದ ಬಾಗಿಲಿನ ಕೀ ಮುರಿದು ಒಳ ಹೋಗಿದ್ದಾರೆ. ಬಳಿಕ ಕೃತ್ಯ ಎಸಗಿದ್ದಾರೆ. ಏನೇನೂ ಕಳ್ಳತನ ನಡೆದಿದೆ ಎಂದು ಇನ್ನೂ ತಿಳಿದು ಬಂದಿಲ್ಲ.
ಬ್ಯಾಂಕ್ ಕಳ್ಳತನ ವಾದ ಕಾರಣ ಸ್ಥಳಕ್ಕೆ ಬ್ಯಾಂಕ್ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು. ಸ್ಥಳದಲ್ಲಿ ಶ್ವಾನದಳದ ಸಿಬ್ಬಂದಿ ಹಾಗೂ ಪೋಲಿಸರಿಂದ ಪರಿಶೀಲನೆ ನಡೆದಿದೆ. ಹಾಗೂ ಬ್ಯಾಂಕ್ ಸಿಬ್ಬಂದಿ ಯಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.