Close Menu
Ain Live News
    Facebook X (Twitter) Instagram YouTube
    Wednesday, May 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Vijayendra Life History: ಬಿಜೆಪಿ ನೂತನ ಅಧ್ಯಕ್ಷ ವಿಜಯೇಂದ್ರ ನಡೆದು ಬಂದ ಹಾದಿ: ಇಲ್ಲಿದೆ ಫುಲ್‌ ಡಿಟೇಲ್ಸ್!

    By AIN AuthorNovember 15, 2023
    Share
    Facebook Twitter LinkedIn Pinterest Email
    Demo
    ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ವಿಜಯ ಶಕೆ ಆರಂಭವಾಗಿದೆ. ಬಿಜೆಪಿಯ ಯುವ ಅಧ್ಯಕ್ಷ ವಿಜಯೇಂದ್ರ (BY Vijayendra) ಮುಂದೆ ಸಾಲು ಸಾಲು ಸವಾಲುಗಳಿವೆ. ಲೋಕಸಭೆ ಚುನಾವಣಾ (Lok Sabha Election) ಟಾಸ್ಕ್ ರೀಚ್ ಆಗಲು ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯ ತಂತ್ರಗಳನ್ನು ಹೆಣೆದಿದ್ದಾರೆ..
    ವಿಜಯೇಂದ್ರ ಎದುರು ಮುಳ್ಳಿನ ಹಾದಿ ಇದ್ದು ಸದ್ಯ ಈಗ ಬಿಜೆಪಿ (BJP) ಮನೆ ಸಮಸ್ಯೆಗಳ ಗೂಡಾಗಿದೆ. ಪಕ್ಷದ ಹೀನಾಯ ಸೋಲು, ಬಣ ಸಂಘರ್ಷ, ಒಗ್ಗಟ್ಟಿಲ್ಲ, ನಾಯಕತ್ವದ ಕೊರತೆ, ಸೊರಗಿದ ಪಕ್ಷ ಸಂಘಟನೆ ಇಂಥಹ ಸಂದರ್ಭದಲ್ಲಿ ಪಕ್ಷಕ್ಕೆ ನೂತನ ಸಾರಥಿಯಾಗಿ ವಿಜಯೇಂದ್ರ ಎಂಟ್ರಿಯಾಗಿದ್ದಾರೆ.
    ಇದೀಗ ವಿಜಯೇಂದ್ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಅವರ ಮುಂದೆ ದೊಡ್ಡ ಸವಾಲಗಳ ರಾಶಿಯೇ ಇದೆ. ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಪಕ್ಷವನ್ನು ಮೇಲೆತ್ತಬೇಕಿದೆ. ಮತ್ತೊಂದೆಡೆ ಸೋಲಿನಿಂದ ಹತಾಶೆಗೊಂಡು ಮನೆ ಸೇರಿರುವ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಹ ಮೂಡಿಸಿ ಮುನ್ನಲೆಗೆ ಕರೆದುಕೊಂಡು ಬರಬೇಕಿದೆ. ಅದರಲ್ಲೂ ಪ್ರಮುಖವಾಗಿ ಅಸಮಾಧಾನಗೊಂಡಿರುವ ಹಿರಿಯ ನಾಯಕರನ್ನು ಸಮಾಧಾನ ಮಾಡಬೇಕಿದೆ. ಹೀಗೆ ಹತ್ತು ಹಲವು ಸವಾಲುಗಳು ವಿಜಯೇಂದ್ರ ಮುಂದೆ ಇವೆ. ಇವೆಲ್ಲವುಗಳನ್ನು ಅದು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಕುತೂಹಲ‌
    ಮೊದಲಿಗೆ ಎಬಿವಿಪಿಯಲ್ಲಿ ಗುರುತಿಸಿಕೊಂಡು ಬಳಿಕ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹಲವು ಉಪ ಚುನಾವಣೆ ಹಾಗೂ ಪಕ್ಷ ಸಂಘಟನೆ ಸಂಬಂಧ ಹೈಕಮಾಂಡ್​ ನೀಡಿದ್ದ ಟಾಸ್ಕ್ ಗಳನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆ ಪ್ರಬಲ ಸಮುದಾಯದ ನಾಯಕನ ಪುತ್ರ ಎನ್ನು ಒಂದು ಅಂಶವೂ ಸಹ ವಿಜಯೇಂದ್ರಗೆ ಅಧ್ಯಕ್ಷ ಪಟ್ಟ ಒಲಿಯುವುದರಲ್ಲಿ ಸಹಾಯಕವಾಗಿದೆ.

    ವಿಜಯೇಂದ್ರ ನಡೆದು ಬಂದ ಹಾದಿ

    • 1973 ಆಗಸ್ಟ್ 6ರಂದು ವಿಜಯೇಂದ್ರ ಜನನ
    • ರಾಜ್ಯದ ಪ್ರಮುಖ ಲಿಂಗಾಯತ ಸಮುದಾಯಕ್ಕೆ ಸೇರಿರುವ ವಿಜಯೇಂದ್ರ
    • ತಂದೆ ಬಿ ಎಸ್ ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿ
    • ಸಹೋದರ ಬಿ ವೈ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದ ಸಂಸದ
    • ವಿಜೇಯಂದ್ರ ಅವರು ಕಾನೂನು ಪದವಿ ಪೂರ್ಣಗೊಳಿಸಿ ಒಂದಿಷ್ಟು ದಿನಗಳ ಕಾಲ ವಕೀಲಿಕಿ ಕೂಡ ಮಾಡಿದ್ದಾರೆ.
    • ವಿದ್ಯಾಬ್ಯಾಸ ಮಾಡುತ್ತಿರುವಾಗಲೇ ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.
    • ತಂದೆ 1983ರಿಂದಲೂ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದ 2023ರ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ.
    •  ಶಾಸಕರಾಗುವ ಮುಂಚೆ ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
    •  ಪಕ್ಷದ ಉಪಾಧ್ಯಕ್ಷರಾಗುವ ಮುಂಚೆ ವಿಜಯೇಂದ್ರ ಅವರು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.
    • ಕಳೆದ ವಿಧಾನಸಭೆ ಚುನಾವಣೆ ವೇಳೆ ವಿಜಯೇಂದ್ರ ಅವರು 25 ಸದಸ್ಯರ ಚುನಾವಣಾ ಪ್ರಚಾರ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
    • 2020ರಲ್ಲಿ ಕೆ ಆರ್ ಪೇಟೆ ಮತ್ತು ಶಿರಾ ವಿಧಾನಸಭಾ ಉಪ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದರು. ಅಲ್ಲದೇ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು.
    • ಈ ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವಲ್ಲಿ ವಿಜಯೇಂದ್ರ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.
    • ಉತ್ತಮ ಸಂಘಟಕ, ತಂತ್ರಗಾರ ಎಂದು ಹೈಕಮಾಂಡ್​ ಗೆ ಮುಂದೆ ಸಾಬೀತು ಮಾಡಿದ್ದಾರೆ.
    Post Views: 2

    Demo
    Share. Facebook Twitter LinkedIn Email WhatsApp

    Related Posts

    ತಗ್ಗು ಪ್ರದೇಶದ ನಿವೇಶನಗಳಲ್ಲಿ ಅಂಡರ್ ಗ್ರೌಂಡ್ ವಾಹನ ನಿಲ್ದಾಣ ನಿರ್ಮಾಣಕ್ಕೆ ಅವಕಾಶವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್!

    May 20, 2025

    ಬೆಂಗಳೂರು| ಭೀಕರ ರಣಮಳೆಗೆ ಮುಳುಗಿದ ಫೇಮಸ್ ‘ಬೆಳ್ಳುಳ್ಳಿ ಕಬಾಬ್’ ಹೋಟೆಲ್!

    May 20, 2025

    ಕಾಂಗ್ರೆಸ್ ಸಾಧನೆ ಬೆಂಗ್ಳೂರಿನ ರಸ್ತೆ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ: ಹೆಚ್.ಡಿ ಕುಮಾರಸ್ವಾಮಿ

    May 20, 2025

    ಆಪರೇಷನ್ ಸಿಂಧೂರ್ ಬಗ್ಗೆ ಹೇಳಿಕೆ: ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದೂರು ದಾಖಲು

    May 20, 2025

    ಈ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಯಾವುದೂ ಇಲ್ಲ: ಬಿ.ವೈ. ವಿಜಯೇಂದ್ರ ಕಿಡಿ

    May 20, 2025

    Breaking: RCB V/s SRH ಪಂದ್ಯ ಬೆಂಗಳೂರಿನಲ್ಲಿ ರದ್ದು..ಹಾಗಿದ್ರೆ ಎಲ್ಲಿ ನಡೆಯಲಿದೆ ಮ್ಯಾಚ್!‌

    May 20, 2025

    ಜನರ ಋಣ ತೀರಿಸಲು 6ನೇ ಭೂಗ್ಯಾರಂಟಿ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್

    May 20, 2025

    ರೋಗಗಳಿಂದ ಮುಕ್ತಿ ಹೊಂದಲು ಯೋಗ: ಡಾ. ಸಿ.ಎನ್ ಮಂಜುನಾಥ್

    May 20, 2025

    ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನು ರದ್ದು ಮಾಡಬೇಕಿತ್ತು: ಆರ್. ಅಶೋಕ್ ಕಿಡಿ

    May 20, 2025

    ಕುಡಿಯೋದು ಕಾವೇರಿ ನೀರು..ಉಸಿರಾಡೋ ಕನ್ನಡ ನೆಲದಲ್ಲಿ..ಆದ್ರೆ ಕನ್ನಡ ಮಾತಾಡಲ್ಲ ಎಂದ SBI ಬ್ಯಾಂಕ್‌ ಮ್ಯಾನೇಜರ್‌ ದರ್ಪ.. video ವೈರಲ್!

    May 20, 2025

    ಜನರ ಮುಂದೆ ಇಟ್ಟಿದ್ದ 145 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಟಕ್ಕರ್

    May 20, 2025

    ರೀಲ್ಸ್‌ಗಾಗಿ ವಂದೇ ಭಾರತ್ ರೈಲಿನಲ್ಲೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆ ಅಧಿಕಾರಿಗಳು: video viral

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.