ಬೆಂಗಳೂರು:- ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ ಅದೊಂದು ಕೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ನಿಮ್ಮ ಮನೆಯಲ್ಲೂ ಜಿರಳೆ ಕಾಟ ಹೆಚ್ಚಾಗಿದ್ಯಾ? ಚಿಂತೆ ಬಿಡಿ, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತನದ್ದು ಆತ್ಮಹತ್ಯೆಯಲ್ಲ, ಕೊಲೆ. ಅಧಿಕಾರದ ದರ್ಪದಿಂದ ಕಾಂಗ್ತೆಸ್ನವ್ರು ಹೇಳಿಕೆ ಕೊಡ್ತಿದ್ದಾರೆ. ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ ಅದೊಂದು ಕೊಲೆ ಎಂದು ಆರೋಪಿಸಿದರು. ಇದರ ಹಿಂದೆ ಯಾರೆಲ್ಲ ದುಷ್ಟ ಶಕ್ತಿಗಳು ಇವೆ ಅಂತ ಎಲ್ಲರಿಗೂ ಗೊತ್ತಿದೆ. ಅವರಿಗೆ ಶಿಕ್ಷೆ ಆಗಲೇಬೇಕು. ನಾವು ಕಾನೂನು ಹೋರಾಟ ಮಾಡ್ತೇವೆ. ಇವತ್ತು ಕಾನೂನು ತಜ್ಞರ ಜೊತೆ ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು. ಇನ್ನೂ ರಾಮನವಮಿ ಸಂಧರ್ಭದಲ್ಲಿ, ಬಿಜೆಪಿ ಸಂಸ್ಥಾಪನ ದಿನದಂದು ಸೇರಿದ್ದೇವೆ. ರಾಮೇಶ್ವರದಲ್ಲಿ ಪ್ರಧಾನಿ ಮೋದಿ ಅವರು ರಾಮಸೇತುವೆ ಬಳಿ ರೈಲ್ವೇ ಯೋಜನೆಗೆ ಚಾಲನೆ ನೀಡ್ತಿರೋದು ಸಂತಸದ ಸುದ್ದಿ. ನಾವೆಲ್ಲರೂ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುವ ಪವಿತ್ರ ದಿನ. ಬಿಜೆಪಿ ಅಂದ್ರೆ ದೇಶದ ಕೋಟಿ ಕೋಟಿ ಯುವಕರಲ್ಲಿ ದೇಶಭಕ್ತಿ ಪ್ರೇರೇಪಿಸುವ ಪಕ್ಷ.
ಭಾರತ ಮಾತೆಗೆ ಜಯವಾಗಲಿ ಅಂತಹೇಳುವ ಪಕ್ಷದ ಕಾರ್ಯಕರ್ತ ಅಂದ್ರೆ ಅದು ಬಿಜೆಪಿ ಕಾರ್ಯಕರ್ತರು. ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಅಪೇಕ್ಷೆಯಂತೆ. ಹಳ್ಳಿಯಿಂದ, ದಿಲ್ಲಿವರೆಗೂ ಪಕ್ಷದ ಧ್ವಜವನ್ನು ಮನೆ ಮೇಲೆ ಹಾಕಿ ಸಂಭ್ರಮಿಸಿದ್ದಾರೆ. ಅನೇಕರ ಬಲಿದಾನವನ್ನ ಸ್ಮರಿಸೋಣ. ಶಾಮ ಪ್ರಸಾದ್, ದೀನ್ ದಯಾಳ್ ಉಪಾಧ್ಯಾಯ, ವಾಜಪೇಯಿ, ಅಡ್ವಾಣಿ ಸೇರಿದಂತೆ ಅನೇಕರ ಹೆಸರು ಬರುತ್ತೆ. ಕರ್ನಾಟಕದಲ್ಲಿ ಕೂಡ ಯಡಿಯೂರಪ್ಪ, ಅನಂತ್ ಕುಮಾರ್, ಶಂಕರಮೂರ್ತಿ ಸೇರಿ ಅನೇಕ ಹೆಸರು ಬರ್ತವೆ. ವಾಜಪೇಯಿ ಅವರ ಬಳಿಕ ದೇಶದಲ್ಲಿ ಬಿಜೆಪಿ ಯಾರು ಮುನ್ನಡೆಸಬೇಕು ಅಂತ ಚರ್ಚೆಗೆ ಬಂತು. ಆಗ ಮುಂಬೈನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಮೋದಿ ಅವರಿಗೆ ನಾಯಕತ್ವ ಕೊಡಿ ಅಂತ ಹೇಳಿದ್ದು ಯಡಿಯೂರಪ್ಪ ಅವರು. ಇಂದು ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ನಡೆಸುತ್ತಿದ್ದೇವೆ.
ಅಯೋಧ್ಯೆ ಪ್ರತೀ ಬಿಜೆಪಿ ಕಾರ್ಯಕರ್ತರ ಕನಸಾಗಿತ್ತು. ಭಾರತಕ್ಕೆ ಭವಿಷ್ಯವೇ ಇಲ್ಲ ಅಂತ ಯುವಜನತೆ ಮಾತಾಡ್ತಿತ್ತು. ಹಿಂದೆ ಮನಮೋಹನ್ ಸಿಂಗ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸುವಾಗ ಯುವಕರು ತಲೆತಗ್ಗಿಸಿ ನಡೆಯುವಂತಾಗಿತ್ತು. ನಾನು ಭಾರತದ ಪ್ರಧಾನಿ ಅಂತ ಎದೆ ತಟ್ಟಿ ಹೇಳುವ ಕಾಲವೇ ಇರಲಿಲ್ಲ. ಅಂತ ಸಂಧರ್ಭದಲ್ಲಿ ಭಾರತವೂ ಅಭಿವೃದ್ಧಿ ಸಾಲಿನಲ್ಲಿದೆ. ಭಾರತವೂ ಪೈಪೋಟಿ ನಡೆಸಲಿದೆ ಅಂತ ತೋರಿಸಿಕೊಟ್ಟರು. ಉಕ್ಕಿನ ಮನುಷ್ಯ ಅಂತ ಕರೆಸಿಕೊಂಡ ಅಮಿತ್ ಶಾ ಅವರು ಆರ್ಟಿಕಲ್ 370 ತೆಗೆದುಹಾಕಿದ್ರು. ಬಿಜೆಪಿ ಅಂದ್ರೆ ಮುಸ್ಲಿಂ ವಿರೋಧಿ ಅಂತ ಕಾಂಗ್ರೆಸ್ ಬಿಂಬಿಸಿದೆ. ಆದ್ರೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಕಾಂಗ್ರೆಸ್ ಎಂದೂ ನ್ಯಾಯ ಕೊಡುವ ಕೆಲಸ ಮಾಡಲಿಲ್ಲ. ತಲಾಕ್ ವಿಚಾರವಾಗಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿದ್ದು ಬಿಜೆಪಿ ಎಂದರು.
ಇನ್ನೂ 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಬೇಕು. ಮೋದಿ ಅವರು ಅಮೇರಿಕಾಗೆ ಹೋದಾಗ ಯಾವ ರೀತಿ ರಾಜಾತಿಥ್ಯ ಸಿಗ್ತಿದೆ. ಹಲವು ದೇಶಗಳಲ್ಲಿ ಅತ್ಯುನ್ನತ ನಾಗರೀಕ ಗೌರವ ಸಿಕ್ಕಿದೆ. ಇಂದು ನಕ್ಸಲ್ ವಿಚಾರ ಚರ್ಚೆಯೇ ಇಲ್ಲ. ಹಿಂದೆಲ್ಲಾ ನಕ್ಸಲ್ ಚಟುವಟಿಕೆ ಬಹಳಷ್ಟು ಇತ್ತು. ಈಗ ಬುಡ ಸಹಿತ ಕಿತ್ತು ಹಾಕುವ ಕೆಲಸ ಮೋದಿ ಮಾಡಿದ್ದಾರೆ. ಇಂದು ಬಿಜೆಪಿ ಸಂಸ್ಥಾಪನಾ ದಿನ. ಕಾರ್ಯಕರ್ತರನ್ನ ಒಗ್ಗೂಡಿಸುವ ಕೆಲಸ ಮಾಡೋಣ.
ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ, ನಾಯಕರು ಒಗ್ಗಟ್ಟಾಗಿ ಅಂತ ಸದಾನಂದ ಗೌಡರು ಹೇಳಿದ್ದಾರೆ.
ಇಂದು ನಮ್ಮ ನಾಯಕರು ಬಿಜೆಪಿ ಗೆಲ್ಲಬೇಕು, ಯಾರಾದ್ರೂ ಅಭ್ಯರ್ಥಿ ಆಗಲಿ ಅನ್ನೋ ಮನೋಭಾವನೆ ಬರಬೇಕು ಎಂದರು.
ಇನ್ನೂ ಆಡಳಿತ ಪಕ್ಷ ಇಂದು ಭ್ರಷ್ಟಾಚಾರ ಕೂಪದಲ್ಲಿದೆ. ಗ್ಯಾರಂಟಿ ಹೆಸರೇಳಿ ಅಭಿವೃದ್ಧಿ ಕಾರ್ಯ ಮರೆತಿದೆ. ಸಿಎಂ ಮಾತೆತ್ತಿದ್ರೆ ಅಹಿಂದ ಅಹಿಂದ ಅಂತಾರೆ. ಯಾವುದೇ ಹಿಂದುಳಿದವರ ಪರ ಕೆಲಸ ಮಾಡ್ತಿಲ್ಲ. ಬಿಜೆಪಿ ಮುಸ್ಲಿಂ ವಿರೋಧಿ ಅಂತಾರೆ. ಮುಸ್ಲಿಂ ವಿರೋಧಿಗಳಾಗಿದ್ರೆ ತಲಾಕ್ ಬಿಲ್ ತರ್ತಿರಲಿಲ್ಲ, ಕಲಾಂ ಅವರನ್ನು ರಾಷ್ಟ್ರಪತಿ ಮಾಡ್ತಿರಲಿಲ್ಲ, ನಸೀರ್ ಸಾಬ್ ಅಂಧ್ರದ ರಾಷ್ಟ್ರಪತಿ ಮಾಡ್ತಿರಲಿಲ್ಲ. ನಾನು ಯಡಿಯೂರಪ್ಪ ಮಗ ಅಂತಾರೆ. ನನಗೆ ಅದರ ದುರಹಂಕಾರವಿಲ್ಲ, ಹೆಮ್ಮೆ ಇದೆ. ನಾನೂ ಒಬ್ಬ ಬಿಜೆಪಿ ಕಾರ್ಯಕರ್ತ ಅನ್ನೋ ಹೆಮ್ಮೆ ಇದೆ ಎಂದರು.