ಬೆಂಗಳೂರು:- ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್ ಬಾರ್ಗಳ ಮೇಲೆ ಖಾಕಿ ದಿಢೀರ್ ದಾಳಿ ನಡೆಸಿದೆ. ನಗರದ ಹಲವು ಡ್ಯಾನ್ಸ್ ಬಾರ್ಗಳಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ದಾಳಿ ನಡೆದಿದೆ.
ಯುವತಿಯರು ಅರೆಬರೆ ಬಟ್ಟೆ ತೊಟ್ಟು ಡ್ಯಾನ್ಸ್, ಸಮಯ ಮೀರಿ ಓಪನ್, ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಆರೋಪ ಕೇಳಿ ಬಂದ ಹಿನ್ನೆಲೆ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಉಪ್ಪಾರಪೇಟೆ, ಕಬ್ಬನ್ ಪಾರ್ಕ್ , ಅಶೋಕ ನಗರ, ಎಸ್.ಜೆ.ಪಾರ್ಕ್ ಸೇರಿ ಅನೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ.
ದಾಳಿ ನಡೆದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ