ಈ ಬಾರಿ ಐಪಿಎಲ್ ಕಾಪು ಜೋರಾಗಿದೆ. ಕಪ್ ಗೆಲ್ಲಬೇಕು ಅಂತಾ ಆರ್‌ಸಿಬಿ ಪಣ ತೊಟ್ಟು ಅಖಾಡಕ್ಕೆ ಇಳಿದ್ದು, ಟೇಬಲ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಎಲ್ಲಾ ಮ್ಯಾಚ್‌ಗಳನ್ನು ಸೊಗಸಾಗಿ ಆಟವಾಡುತ್ತಿದೆ. ಮೊನ್ನೆ ಇತ್ತೀಚೆಗೆ ನ್ಯೂ ಚಂಡೀಗಢದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ ಬೆಂಗಳೂರು ಪಂದ್ಯ ನಡೆಯಿತು. ಈ ವೇಳೆ ಆರ್‌ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಹಾಗೂ ಪಂಜಾಬ್ ಕಿಂಗ್ಸ್ ಮಾಲೀಕೆ ಪ್ರೀತಿ ಜಿಂಟಾ ಮಾತುಕತೆಯಲ್ಲಿ ತೊಡಗಿದ್ದರು. ಮೊಬೈಲ್ ನೋಡಿ ಇಬ್ಬರು ನಗುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದಕ್ಕೆ ಕಾರಣ ಏನೂ ಅನ್ನೋದನ್ನು ಇದೀಗ ಪ್ರೀತಿ ಜಿಂಟಾ ಹೇಳಿದ್ದಾರೆ.
ಪ್ರೀತಿ ಜಿಂಟಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟ ಆಕ್ಟೀವ್. ಅವರು ಇತ್ತೀಚೆಗೆ ಟ್ವಿಟರ್ನಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದ್ದರು. ಈ ವೇಳೆ ವಿರಾಟ್ ಹಾಗೂ ಪ್ರೀತಿ ಪರಸ್ಪರ ನಗುತ್ತಿರುವ ಫೋಟೋ ಇದೆ. ಈ ಬಗ್ಗೆ ಪ್ರೀತಿ ಜಿಂಟಾಗೆ ಪ್ರಶ್ನೆ ಮಾಡಲಾಗಿದೆ. ‘ವಿರಾಟ್ ಅವರ ಬಳಿ ಏನು ಮಾತನಾಡುತ್ತಿದ್ದಿರಿ’ ಎಂದು ಅಭಿಮಾನಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಪ್ರೀತಿ ಉತ್ತರಿಸಿದ್ದಾರೆ.
ಮಕ್ಕಳ ಫೋಟೋ ನೋಡಿ ನಗು!
‘ನಾವು ನಮ್ಮ ಮಕ್ಕಳ ಚಿತ್ರಗಳನ್ನು ಪರಸ್ಪರ ತೋರಿಸಿಕೊಳ್ಳುತ್ತಿದ್ದೆವು. ಮತ್ತು ಅವರ ಬಗ್ಗೆ ಮಾತನಾಡುತ್ತಿದ್ದೆವು. ಸಮಯ ಕಳೆಯುತ್ತಲೇ ಇರುತ್ತದೆ. 18 ವರ್ಷಗಳ ಹಿಂದೆ ನಾನು ವಿರಾಟ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರು ಉತ್ಸಾಹ ಭರಿತರಾಗಿದ್ದರು. ಈಗಲೂ ಅವರಲ್ಲಿ ಉತ್ಸಾಹ ಇದೆ. ಅವರು ಯವಾಗಲೂ ಸ್ವೀಟ್ ಮತ್ತ ಪ್ರೀತಿಯ ತಂದೆ’ ಎಂದು ಪ್ರೀತಿ ಜಿಂಟಾ ಉತ್ತರಿಸಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿ ಒಂದಷ್ಟು ವರ್ಷಗಳ ಕಾಲ ಮಿಂಚಿದ್ದ ಪ್ರೀತಿ ಜಿಂಟಾ ಸದ್ಯ ಮಕ್ಕಳು, ಗಂಡ ಕ್ರಿಕೆಟ್ ಅಂತಾ ಖುಷಿಯಾಗಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಅವರು ಆಗಾಗಾ ಭಾರತಕ್ಕೆ ಬರುತ್ತಾರೆ.