ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ರೋಫಿ ಗೆಲ್ಲುವ ಕನಸು ಕೊನೆಗೂ ನನಾಸಗಿದೆ.
IPL 2025: 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದ ಆರ್ ಸಿಬಿ: ವಿಜಯ್ ಮಲ್ಯ ಹೇಳಿದ್ದೇನು?
ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳಲ್ಲಿ ಆನಂದಬಾಷ್ಪ ಉಕ್ಕಿ ಹರಿಯಿತು. ಗೆಲುವು ಖಚಿತವಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಕಣ್ಣೀರು ತಡೆಯಲಾಗಲಿಲ್ಲ. ಕಣ್ಣಲ್ಲಿ ನೀರು ತುಂಬಿಕೊಂಡು ಬಿಕ್ಕಿ-ಬಿಕ್ಕಿ ಅತ್ತುಬಿಟ್ಟರು.
18 ಆವೃತ್ತಿಗಳಲ್ಲಿ ಯಾವುದೇ ತಂಡಕ್ಕೆ ಹೋಗದೇ ಹಠ ಹಿಡಿದು ಆರ್‌ಸಿಬಿಯಲ್ಲೇ ಇದ್ದ ವಿರಾಟ್ ಕೊಹ್ಲಿ ಟ್ರೋಫಿ ಗೆಲ್ಲುವ ಆಸೆ ಕೊನೆಗೂ ಈಡೇರಿದೆ. ಕಪ್ ಗೆಲುವು ಖಚಿತವಾಗುತ್ತಿದ್ದಂತೆ ಕೊಹ್ಲಿ ಭಾವುಕರಾಗಿ ಕಣ್ಣೀರಿಟ್ಟರು. ಆ ಒಂದು ಕ್ಷಣ ಅಭಿಮಾನಿಗಳು ತೃಪ್ತಿ ಭಾವದ ಕಣ್ಣೀರು ಹರಿಸಿದರು.
20ನೇ ಓವರ್‌ನ 2ನೇ ಎಸೆತವನ್ನು ಮೇಡಿನ್ ಮಾಡುತ್ತಿದ್ದಂತೆ ಆರ್‌ಸಿಬಿಗೆ ಗೆಲುವು ಪಕ್ಕಾ ಎಂದು ಗೊತ್ತಾಯಿತು. ಇದು ತಿಳಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಗಳಗಳನೆ ಅಳಲು ಶುರು ಮಾಡಿದ್ದರು. 18 ವರ್ಷಗಳ ನೆನಪನ್ನು ಒಮ್ಮೆಲೆ ನೆನೆದು ಭಾವುಕರಾದರು. ಅಲ್ಲದೇ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಹಳೆಯ ಟೀಮ್‌ಮೆಟ್ ಎಬಿಡಿ ವಿಲಿಯರ್ಸ್ ಮಗುವಿನಂತೆ ಓಡಿ ಬಂದು ಕೊಹ್ಲಿಯನ್ನ ಅಪ್ಪಿಕೊಂಡು ಭಾವುಕರಾದರು. ಇದೇ ವೇಳೆ ಪತ್ನಿ ಅನುಷ್ಕಾ ಶರ್ಮಾ ಸಹ ಕೊಹ್ಲಿಯನ್ನ ಅಪ್ಪಿಕೊಂಡು ಭಾವುಕರಾದರು ಇದು ಅಭಿಮಾನಿಗಳನ್ನೂ ಕಣ್ಣೀರ ಕಡಲಲ್ಲಿ ತೇಲುವಂತೆ ಮಾಡಿತ್ತು
18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ ಆರ್‌ಸಿಬಿ ಅಭಿಮಾನಿಗಳ ಕೋಟೆಯ ಸಾಮ್ರಾಟ ಬೆಂಗಳೂರನ್ನು ಮರೆಯಲ್ಲಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ… ಕಪ್ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು.