Close Menu
Ain Live News
    Facebook X (Twitter) Instagram YouTube
    Sunday, June 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಸಂಜೆ ವಾಕಿಂಗ್ ಮಾಡೋದು ಆರೋಗ್ಯಕ್ಕೆ ಬೆಸ್ಟ್: ಬೆಳಗ್ಗೆ ಟೈಂ ಇಲ್ಲದವರು ಹೀಗೆ ಮಾಡಿ!

    By AIN AuthorJune 29, 2025
    Share
    Facebook Twitter LinkedIn Pinterest Email
    Demo

    ವಾಕಿಂಗ್​ ಯಾರು ಬೇಕಾದರೂ ಸುಲಭವಾಗಿ ಮಾಡಬಹುದಾದ ವ್ಯಾಯಾಮವಾಗಿದ್ದು, ಅನೇಕ ಪ್ರಯೋಜನಗಳನ್ನು ಹೊಂದಿದೆ. ಹೆಚ್ಚಿನ ಜನರಿಗೆ ಬೆಳಗ್ಗೆ ಇಲ್ಲವೆ ಸಂಜೆಯ ವಾಕಿಂಗ್ ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಸಂದರ್ಭದಲ್ಲಿ ಇವೆರಡರಲ್ಲಿ ಯಾವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ಅರಿತುಕೋಳ್ಳೋಣ.

    ಆರ್ ಸಿಬಿ ವೇಗಿ ವಿರುದ್ಧ ಕೇಳಿಬಂತು ಗಂಭೀರ ಆರೋಪ: ದೈಹಿಕ ಕಿರುಕುಳದ ದೂರುಕೊಟ್ಟ ಮಹಿಳೆ!

    ವಾಕಿಂಗ್ ಮಾಡುವುದು ಆರೋಗ್ಯಕರ ಕೆಲವರು ಬೆಳಗ್ಗೆ ವಾಕಿಂಗ್ ಮಾಡಿದರೆ ಇನ್ನೂ ಕೆಲವರು ಸಂಜೆ ಹೊತ್ತಿನಲ್ಲಿ ವಾಕಿಂಗ್ ಮಾಡುತ್ತಾರೆ. ಮುಂಜಾನೆ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಸಂಜೆಯ ನಡಿಗೆಯ ಲಾಭವೂ ಕಡಿಮೆಯೇನಿಲ್ಲ. ಅನೇಕರಿಗೆ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಮುಂಜಾನೆ ಶಾಂತ ಮನಸ್ಸಿನಿಂದ ನಡೆಯಲು ಸಾಧ್ಯವಾಗುವುದಿಲ್ಲ. ಅಂತಹವರು ಸಂಜೆ ಆರಾಮವಾಗಿ ವಾಕಿಂಗ್ ಮಾಡಬಹುದು.

    ಸಂಜೆಯ ನಡಿಗೆಯ ಆರೋಗ್ಯ ಪ್ರಯೋಜನಗಳು ಅನೇಕ ಸಂಶೋಧನೆಗಳಲ್ಲಿ ತಿಳಿಸಲಾಗಿದೆ. ತೂಕ ಇಳಿಕೆಯಿಂದ ಹಿಡಿದು ಉತ್ತಮ ನಿದ್ದೆ ಮಾಡುವವರೆಗೆ ಇದು ಸಹಕಾರಿ. ಸಂಜೆಯ ನಡಿಗೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು ಮತ್ತು ಅದರಿಂದ ನಿಮಗಾಗುವ ಲಾಭಗಳೇನು ಎಂಬುದನ್ನು ಇಲ್ಲಿ ತಿಳಿಯಬಹುದು.

    ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಂಜೆಯ ನಡಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಸಂಜೆಯ ನಡಿಗೆಯು ಕ್ಯಾಲೊರಿಗಳನ್ನು ವೇಗವಾಗಿ ಕರಗಿಸುತ್ತದೆ. ಪ್ರತಿದಿನ ನಡೆಯುವುದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಕೊಬ್ಬನ್ನು ಸುಡುವಂತೆ ಮಾಡುತ್ತದೆ. ದೇಹದಲ್ಲಿ ಯಾವುದೇ ಹೆಚ್ಚುವರಿ ಕೊಬ್ಬು ಇದ್ದರೂ ಅದು ಬೆವರಿನ ರೂಪದಲ್ಲಿ ಹೊರಬರುತ್ತದೆ.

    ಸಂಜೆಯ ನಡಿಗೆಯ ನಂತರ ಆಯಾಸವಾಗುತ್ತದೆ, ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಏಕೆಂದರೆ ನಡೆದಾಡಿದಾಗ ನಿಮ್ಮ ದೇಹವು ರಿಲ್ಯಾಕ್ಸ್ ಆಗುತ್ತದೆ. ನಿಮ್ಮ ಮನಸ್ಸಿನಲ್ಲಿ ಏನೇ ಒತ್ತಡವಿದ್ದರೂ ಸಂಜೆ ವಾಕಿಂಗ್ ಅಥವಾ ಜಾಗಿಂಗ್ ಮಾಡುವುದರಿಂದ ಅದು ಕಡಿಮೆಯಾಗುತ್ತದೆ. ಸಂಜೆಯ ನಡಿಗೆ ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಇದು ಬೆನ್ನುನೋವಿನಿಂದ ಪರಿಹಾರವನ್ನು ನೀಡುತ್ತದೆ. ಆಗಾಗ್ಗೆ ಜನರು ಕಚೇರಿಯಲ್ಲಿ ದಿನವಿಡೀ ಕೆಲಸ ಮಾಡಿದ ನಂತರ ಭುಜಗಳು ಮತ್ತು ಬೆನ್ನಿನ ನೋವಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಇದು ಅವರಿಗೆ ಪರಿಹಾರದ ಸಾಧನವಾಗಬಹುದು.

    ನಿಮ್ಮ ಜೀರ್ಣಕ್ರಿಯೆಗೆ ಸಂಜೆಯ ನಡಿಗೆ ಕೂಡ ಒಳ್ಳೆಯದು. ಊಟದ ನಂತರ ವಾಕಿಂಗ್ ಹೋದರೆ ಆಹಾರ ಜೀರ್ಣವಾಗುತ್ತದೆ. ಸಂಜೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾದ ಗ್ಯಾಸ್ಟ್ರಿಕ್, ಅಸಿಡಿಟಿ ಮತ್ತು ಮಲಬದ್ಧತೆ ಇತ್ಯಾದಿಗಳನ್ನು ನಿವಾರಿಸುತ್ತದೆ

    NCBI ನಲ್ಲಿ ಲಭ್ಯವಿರುವ ಸಂಶೋಧನೆಯ ಪ್ರಕಾರ, ಇತರ ವ್ಯಾಯಾಮಗಳ ಜೊತೆಗೆ ವಾಕಿಂಗ್‌ ಮಾಡುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಕಛೇರಿಯಲ್ಲಿ ದಣಿದ ದಿನದ ನಂತರ ನೀವು ಸಂಜೆ ವಾಕ್ ಮಾಡಿದರೆ, ಅದು ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ನಿಮಗಿದು ಗೊತ್ತಾ!? ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ?

    June 29, 2025

    ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚಾರ್ಜ್ ಮಾಡಬೇಕು ಗೊತ್ತಾ!? ಮೊಬೈಲ್ ಪ್ರಿಯರು ತಿಳಿಯಬೇಕು!

    June 29, 2025

    ಅತಿಯಾದ ಮೊಬೈಲ್ ಬಳಕೆ ಅನೇಕ ರೋಗಗಳಿಗೆ ಕಾರಣವಾಗುತ್ತಂತೆ!

    June 28, 2025

    ಆನೆಗಳ ಕಿವಿ ಏಕೆ ದೊಡ್ಡದಾಗಿರುತ್ತವೆ? ಇದನ್ನು ನೀವು ತಿಳಿಯಲೇಬೇಕು!

    June 28, 2025

    ಅಲೋವೆರಾ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಹಣದ ಕೊರತೆಯೇ ಇರುವುದಿಲ್ಲ!

    June 28, 2025

    ನಿಮ್ಮ ಹತ್ತಿರ ಇರುವ ಬೆಳ್ಳಿ ಅಸಲಿನಾ? ನಕಲಿನಾ? ತಿಳಿಯಲು ಹೀಗೆ ಮಾಡಿ!

    June 28, 2025

    ನಿಮ್ಮ ಬಳಿ ಈ ವಸ್ತುಗಳಿದ್ದರೆ ಹಾವುಗಳು ಹತ್ತಿರ ಸುಳಿಯಲ್ವಂತೆ!

    June 28, 2025

    ಹಾಸನದಲ್ಲಿ ಹೃದಯಾಘಾತ ಮರಣ ಮೃದಂಗ: ಈ ಲೀಸ್ಟ್ ನೋಡಿದ್ರೆ ನಿಮ್ಮ ಎದೆಬಡಿತ ಜಾಸ್ತಿ ಆಗೋದ್ರಲ್ಲಿ ಡೌಟೇ ಇಲ್ಲ..!

    June 28, 2025

    ಶನಿವಾರ ಈ ಐದು ಕೆಲಸಗಳನ್ನು ಮಾಡಿದ್ರೆ ಶನಿದೋಷ ದೂರವಾಗತ್ತೆ.. ತಪ್ಪದೇ ಮಾಡಿ!

    June 28, 2025

    ಎಷ್ಟು ದಿನಕ್ಕೊಮ್ಮೆ ಬಾತ್ ಟವೆಲ್ ವಾಶ್ ಮಾಡ್ಬೇಕು? ತಜ್ಞರು ಹೇಳುವುದು ಹೀಗಿದೆ!

    June 28, 2025

    ಬೇರೆಯವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡ್ಬಹುದು: ಈ ಟ್ರಿಕ್ ಫಾಲೋ ಮಾಡಿ!

    June 28, 2025

    ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.