ಬಾಗಲಕೋಟೆ: ನಾವು ಕ್ವಾಲಿಟಿ ಡ್ರಿಂಕ್ಸ್ ಕೊಡಬೇಕು ಅಂತಾ ಬೆಲೆ ಹೆಚ್ಚಳ ಮಾಡಿದ್ದೇವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನೆರೆ ರಾಜ್ಯಗಳಿಗಿಂತ ನಮ್ಮಲ್ಲಿ ಬೆಲೆ ಇನ್ನೂ ಕಡಿಮೆ ಇದೆ. ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸ್ಲ್ಯಾಬ್‌ಗಿಂತ ಕಡಿಮೆ ಇದೆ. ಪ್ರೀಮಿಯಮ್ ಬ್ರ್ಯಾಂಡ್ ಏರಿಕೆ ಮಾಡಿಲ್ಲ. ಯಾವುದೇ ಸರ್ಕಾರ ಬಂದರೂ ಇದು ನಿರಂತರವಾಗಿ ನಡೆಯುತ್ತದೆ ಎಂದರು.
ಮಗು ಆದ್ಮೇಲೆ Hair Fall ಜಾಸ್ತಿ ಆಗಿದ್ಯಾ!? ಹಾಗಿದ್ರೆ ತಪ್ಪದೇ ಆಹಾರದಲ್ಲಿ ಈ ವಸ್ತು ಸೇರಿಸಿ!
ಬೆಲೆ ಏರಿಕೆಯಿಂದ ಕುಡುಕರ ಸಂಖ್ಯೆ ಕಡಿಮೆ ಆಗಲ್ವಾ? ಎಂಬ ಪ್ರಶ್ನೆಗೆ, ಕುಡುಕರ ಸಂಖ್ಯೆ ಕಡಿಮೆ ಆದ್ರೆ ಒಳ್ಳೆಯದಲ್ವಾ?. ನಾವು ಕ್ವಾಲಿಟಿ ಡ್ರಿಂಕ್ಸ್ ಕೊಡಬೇಕು ಅಂತಾ ಬೆಲೆ ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದರು.
ಮದ್ಯಪ್ರಿಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಈ ವಿಚಾರಕ್ಕೆ ಪ್ರತಿಭಟನೆ ಆಗೋದಿಲ್ಲ. ಕುಡಿಯುವವರ ಸಂಖ್ಯೆ ಕಡಿಮೆ ಆದ್ರೆ ಒಳ್ಳೆಯದಲ್ವಾ? ಎಲ್ಲ ಸರ್ಕಾರಗಳ ಅವಧಿಯಲ್ಲೂ ಮದ್ಯದ ಬೆಲೆ ಏರಿಕೆ ಮಾಡುತ್ತಲೇ ಬಂದಿದ್ದಾರೆ. ನಮ್ಮ ಸರ್ಕಾರದಲ್ಲೂ ಸ್ವಲ್ಪ ಬೆಲೆ ಏರಿಕೆ ಮಾಡಲಾಗಿದೆ ಎಂದರು.