ದೊಡ್ಡಬಳ್ಳಾಪುರ: ಎತ್ತಿನಹೊಳೆ ಯೋಜನೆ ಡ್ಯಾಂ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೆನಹಳ್ಳಿ ಬಳಿ ಎತ್ತಿನಹೊಳೆ ನೀರು ಸಂಗ್ರಹಕ್ಕೆ ಡ್ಯಾಂ ನಿರ್ಮಾಣಕ್ಕೆ ಮುಂದಾಗಿರೋ ಸರ್ಕಾರದ ವಿರುದ್ದ ಅನ್ನದಾತರು ಸಿಡಿದೆದ್ದಿದ್ದಾರೆ. ಲಕ್ಕೆನಹಳ್ಳಿ ಡ್ಯಾಂ ನಿರ್ಮಾಣಕ್ಕೆ 7 ಗ್ರಾಮಗಳ 2600 ಎಕರೆ ಭೂಮಿ ಗುರುತಿಸಿದ್ದು,
ಡ್ಯಾಂ ನಿರ್ಮಿಸಿದ್ರೆ ಸಂಪೂರ್ಣ ವಾಗಿ ನಾಲ್ಕು ಗ್ರಾಮಗಳು ಊರು ಬಿಟ್ಟು ಖಾಲಿ ಮಾಡಬೇಕು. ಈಗಾಗಲೇ 2000 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಗಳನ್ನ ಗ್ರಾಮಸ್ಥರು ಹಾಕದ್ದಾರೆ. ಗ್ರಾಮದ ಭಾವನೆಗಳು ಬಿಟ್ಟು, ಜಮೀನು ಕಳೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ರೊಚ್ಚಿಗೆದ್ದ ಲಕ್ಕೆನಹಳ್ಳಿ, ಶ್ರೀರಾಮನಹಳ್ಳಿ, ಮಚ್ಚೇನಹಳ್ಳಿ ಗ್ರಾಮಸ್ಥರಿಂದ ಡ್ಯಾಂ ನಿರ್ಮಾಣ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ವಿಷ ಬೇಕಾದ್ರು ಕುಡಿಯುತ್ತೇವೆ ಡ್ಯಾಂ ನಿರ್ಮಾಣ ಮಾಡಲು ಬಿಡೋದಿಲ್ಲ ಅಂತಾ ಎಚ್ಚರಿಕೆ ನೀಡಿದ್ದಾರೆ. ಪೈಪ್ ಲೈನ್ ಕಾಮಗಾರಿಗೆ ನವ್ಯಾರು ಅಡ್ಡಿಪಡಿಸಲ್ಲ, ಡ್ಯಾಂ ನಿರ್ಮಾಣ ಬೇಡ ಅಂತಾ ರೈತರು ಪಟ್ಟು ಹಿಡಿದಿದ್ದು, ಲಕ್ಕೆನಹಳ್ಳಿ ಡ್ಯಾಂ ನಿರ್ಮಿಸಿ ಎತ್ತಿನಹೊಳೆ ಪಂಪ್ ಮೂಲಕ 1.8 ಟಿಎಂಸಿ ಕುಡಿಯೋ ನೀರು ಸಂಗ್ರಹಕ್ಕೆ ಸರ್ಕಾರದ ಚಿಂತನೆಯಾಗಿದೆ.
ಕಳೆದ ವಾರ ಡಿಸಿಎಂ ಡಿಕೆ ಶಿವಕುಮಾರ್ ಡ್ಯಾಂ ನಿರ್ಮಾಣದ ಸ್ಥಳಕ್ಕೆ ಬೇಟಿ ನೀಡಿದ್ದರು. ಇದರ ಬೆನ್ನಲ್ಲೇ, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಡ್ಯಾಂ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿಗಳು ಗ್ರಾಮಸ್ಥರ ಅಭಿಪ್ರಾಯ ಪಡೆಯದೇ ತೆರಳಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.