ಬೆಂಗಳೂರು: ನಾವು ಅಧಿಕಾರಕ್ಕೆ ಬಂದ ನಂತರ ಬಿಬಿಎಂಪಿಗೆ ಚುನಾವಣೆ ನಡೆಸ್ತೇವೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇಲ್ಲದಿರೋದನ್ನು ಇದೆ ಅಂತ ತೋರಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಗ್ರೇಟರ್ ಬೆಂಗಳೂರು ಕಾಯ್ದೆ ಮೂಲಕ ಬಿಬಿಎಂಪಿ ಚುನಾವಣೆ ಇನ್ನಷ್ಟು ವಿಳಂಬ ಮಾಡಲು ಹೊರಟಿದ್ದಾರೆ.
ಇವರು ಬಂದ ನಂತರ ಕನಿಷ್ಠ ರಸ್ತೆ ಗುಂಡಿ ಮುಚ್ಚಿಲ್ಲ, ಅಭಿವೃದ್ಧಿ ಇಲ್ವೇ ಇಲ್ಲ. ಇದೆಲ್ಲ ಡಿಕೆಶಿ ನಿರ್ಧಾರಗಳು. ಅವರೇ ಈ ಕಾಯ್ದೆ ತರಲು ಹೊರಟಿರುವ ಬಾಸ್. ಮುಂದಿನ ಸಲ ಇವರು ಗೆಲ್ಲೋದಿಲ್ಲ, ಇವರ ನಂತರ ನಾವೇ ಮತ್ತೆ ಅಧಿಕಾರಕ್ಕೆ ಬರ್ತೇವೆ. ನಾವು ಬಂದ ನಂತರ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸ್ತೇವೆ” ಎಂದು ತಿಳಿಸಿದರು.
ರಡು ಏರ್ ಪೋರ್ಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, “ಅದರ ಬಗ್ಗೆ ಇನ್ನೊಮ್ಮೆ ಮಾತಾಡೋಣ. ದೆಹಲಿ ರಾಷ್ಟ್ರದ ರಾಜಧಾನಿ. ಅಲ್ಲಿಯ ಏರ್‌ಪೋರ್ಟ್‌ನಲ್ಲಿ ಎಲ್ಲ ಒಂದೇ ಕಡೆ ಇಲ್ವಾ?. ಟರ್ಮಿನಲ್ 1-2-3 ಎಲ್ಲಾ ಇಲ್ವಾ?. ಎಲ್ಲಾ ಒಂದೇ ಕಡೆ ಇದ್ದರೆ ಒಳ್ಳೆದಾಗುತ್ತದೆ. ನಾನು ಬೆಂಗಳೂರು ಅಭಿವೃದ್ಧಿ ಸಚಿವನಿದ್ದಾಗ ಇಷ್ಟು ಅನುಭವ ಇರಲಿಲ್ಲ. ಈಗಿರುವ ಅನುಭವ ಆಗಿದ್ದರೆ ಕಥೆಯೇ ಬೇರೆ ಆಗೋದು” ಎಂದು ಸೂಚ್ಯವಾಗಿ ತಿಳಿಸಿದರು.