ಬೆಂಗಳೂರು: ಶಾಸಕರ ಕೈಗೆ ಜಾತಿಗಣತಿ ವರದಿ ಪ್ರತಿ ಸಿಕ್ಕಿದ ಮೇಲೆ ಸರಿ, ತಪ್ಪು ಪರಾಮರ್ಶೆ ಮಾಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಲಿಂಗಾಯತರು, ವೀರಶೈವ ಲಿಂಗಾಯತರು ಅಂತಿದೆ. ಈ ವೀರಶೈವ ಲಿಂಗಾಯತರಲ್ಲಿ ಬಹಳ ಉಪಜಾತಿಗಳಿವೆ ಅಂದಿದ್ದರು. ಜಾತಿ ಜನಗಣತಿ ವರದಿ ಶಾಸಕರ ಕೈ ಸೇರಿಲ್ಲ.
ಸಚಿವರಿಗೆ ಒಂದೊಂದು ಕಾಪಿ ಸಿಕ್ಕಿದೆ, ಅವರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಶಾಸಕರ ಕೈಗೆ ಪ್ರತಿ ಸಿಕ್ಕಿದ ಮೇಲೆ ಸರಿ, ತಪ್ಪು ಪರಾಮರ್ಶೆ ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ಯಾವ ಜನಸಂಖ್ಯೆ ಎಷ್ಟಿದೆ? ಎಂದು ನಮಗೆ ಗೊತ್ತಿರುತ್ತದೆ.
ಚುನಾವಣೆಗಳನ್ನು ಮಾಡಿರುತ್ತೇವೆ, ಮನೆ ಮನೆಗೆ ಹೋಗಿರುತ್ತೇವೆ. ಯಾರು ಯಾವ ಜಾತಿ ಎನ್ನುವ ಸಂಪೂರ್ಣ ಮಾಹಿತಿ ಶಾಸಕರಿಗೆ ಇರುತ್ತದೆ. ಜಾತಿ ಜನಗಣತಿ ವರದಿ ಕೈಗೆ ಬಂದರೆ, ಹೋಲಿಕೆ ಮಾಡಿ ನೋಡುತ್ತೇವೆ. ಪ್ರತಿಯೊಬ್ಬ ಶಾಸಕರಿಗೂ ಒಂದೊಂದು ಜಾತಿಗಣತಿ ವರದಿ ಪ್ರತಿ ಕೊಡಬೇಕೆಂದು ಒತ್ತಾಯಿಸಿದರು.