ಕೊಪ್ಪಳ : ಗ್ಯಾರೆಂಟಿ ಬಂದ್ ಹೇಳಿಕೆ ಬಗ್ಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸಮರ್ಥನೆ ನೀಡಿದ್ದಾರೆ. ಇಂದು ಯಲಬುರ್ಗಾ ತಾಲೂಕಿನ ಹಿರೆವಂಕಲಕುಂಟಾ ಗ್ರಾಮದಲ್ಲಿ ಮಾತನಾಡಿದರು.
ಗ್ಯಾರಂಟಿ ಬಂದ್ ಮಾಡೋ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಚರ್ಚೆ ಆಗಲಿ ಅಂತಾನೆ ನಾನು ಹೇಳಿಕೆ ಕೊಡೋದು ಎಂದಿದ್ದಾರೆ. ಕೆಲವೊಮ್ಮೆ ಆ ರೀತಿಯ ಹೇಳಿಕೆ ಕೊಡುತ್ತೀನಿ. ಅದೆಲ್ಲವನ್ನು ಸಿರೀಯಸ್ ಆಗಿ ತಗೋಬಾರದು.. ಚರ್ಚೆ ಆಗಲಿ ಅಂತಾನೆ ಹೇಳಿಕೆ ಕೊಡುತ್ತೇನೆ. ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಗ್ಯಾರಂಟಿ ಯೋಜನೆಯನ್ನ ಕೊಡುತ್ತೀನಿ, ರಸ್ತೆ ಬಿಲ್ಡಿಂಗ್ ಎಲ್ಲ ಆಗೋ ಸಮಯಕ್ಕೆ ಆಗುತ್ತೆ ಎಂದಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗ್ರಾಮ ರ್ಯಾವಣಕಿ ಗ್ರಾಮದ ಶಾಲಾ ಕೊಠಡಿ ಉದ್ಘಾಟನೆ ವೇಳೆ ರಾಯರೆಡ್ಡಿ ರಸ್ತೆ ದುರಸ್ತಿ ವಿಚಾರವಾಗಿ ಮಾತನಾಡುತ್ತಾ ಅಕ್ಕಿ ಬೇಡ ,ನಮಗೆ ಏನೂ ಬೇಡಾ ಅಂತಾ ಹೇಳಿ ರಸ್ತೆ ಮಾಡಿಸುತ್ತೀವಿ. ಅದೇ ಹಣದಲ್ಲಿ ರಸ್ತೆ ಮಾಡಿಕೊಟ್ಟ ಬಿಡುತ್ತೀವಿ ಅಂದಿದ್ದರು. ಇದೇ ವಿಚಾರಕ್ಕೆ ಬಿಜೆಪಿಗರು ಟೀಕೆ ವ್ಯಕ್ತಪಡಿಸಿದ್ದರು.