ಬೆಳಗಾವಿ:- ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ರಸ್ತೆ ಮಧ್ಯೆ ಗಾಳಿಯಲ್ಲಿ ಗುಂಡು ಹಾರಿಸಿ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಹುಟ್ಟು ಹಬ್ಬ ಆಚರಿಸಿದ ಘಟನೆ ಜರುಗಿದೆ.
ಬುರ್ಖಾ ಧರಿಸಿ ಬರ್ತಾರೆ.. ಕ್ಷಣಾರ್ಧದಲ್ಲಿ ಕದ್ದು ಎಸ್ಕೇಪ್ ಆಗ್ತಾರೆ: ಕೊಪ್ಪಳದಲ್ಲಿ ಕಳ್ಳಿಯರ ಗ್ಯಾಂಗ್ ಆ್ಯಕ್ಟೀವ್!
ಕುಡಚಿ ಪಟ್ಟಣದ ಗ್ರಾಮ ಪಂಚಾಯತಿ ಸದಸ್ಯ ಬಾಬಾಜಾನ್ ಖಾಲಿಮುಂಡಾಸೈ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಗೂಂಡಾ ವರ್ತನೆ ತೋರಿದ್ದಾನೆ. ಕೇಕ್ ಕತ್ತರಿಸುವಾಗ ಯುವಕರು ನಡುರಸ್ತೆಯಲ್ಲೇ ಕೈಯಲ್ಲಿ ಚಾಕು ಹಿಡಿದ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಪಕ್ಕದಲ್ಲೇ ಠಾಣೆ ಇದ್ದರೂ ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದರು. ಬಾಬಾಜಾನ್ ಖಾಲಿಮುಂಡಾಸೈ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿತ್ತು.
ನಡು ರಸ್ತೆಯಲ್ಲಿ ಫೈರಿಂಗ್ ಮಾಡಿ ಅಸಭ್ಯ ವರ್ತನೆ ತೋರಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕುಡಚಿ ಪೊಲೀಸರು ಪ್ರಕರಣ ದಾಖಲಿಸಿ ಬಾಬಾಜಾನನ್ನು ಬಂಧಿಸಿದ್ದಾರೆ.