Close Menu
Ain Live News
    Facebook X (Twitter) Instagram YouTube
    Wednesday, May 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಮಂಗಳವಾರ ಯಾವ ದೇವರನ್ನು ಪೂಜಿಸಬೇಕು!? ಈ ತಪ್ಪುಗಳನ್ನು ಪೂಜೆಯಲ್ಲಿ ಮಾಡ್ಬೇಡಿ!

    By AIN AuthorMarch 11, 2025
    Share
    Facebook Twitter LinkedIn Pinterest Email
    Demo

    ಹಿಂದೂಗಳಲ್ಲಿ, ಶ್ರೀ ರಾಮನ ಭಕ್ತ ಹನುಮನನ್ನು ಕಲಿಯುಗದ ದೇವತೆ ಎಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಚಿರಂಜೀವಿ ಹನುಮಾನ್, ಅವರ ಹೆಸರು ಸಹ ಭಜರಂಗಬಲಿ, ಇದನ್ನು ಶಿವನ 11 ನೇ ರುದ್ರಾವತಾರ ಎಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹನುಮಾನ್, ಶಿವನ ಭಾಗವಾಗಿದ್ದರಿಂದ, ಅವನಂತೆ ಸುಲಭವಾಗಿ ಹನುಮಂತನನ್ನು ಸಂತೋಷಗೊಳಿಸಬಹುದು. ವಾರದ ಪ್ರಕಾರ, ಮಂಗಳವಾರ ಹನುಮಂತನ ಮತ್ತು ಮಂಗಳ ಗ್ರಹಕ್ಕೆ ಸಂಬಂಧಿಸಿದ ದಿನ.

    ಲವ್ ಜಿಹಾದ್​​ಗೆ ಬಲಿಯಾಗಬೇಡಿ, ಅನ್ಯ ಧರ್ಮದ ಯುವತಿಯರನ್ನ ಪ್ರೀತಿಸಿ: ಸೂಲಿಬೆಲೆ!

    ಮಂಗಳವಾರದಂದು ಹನುಮಂತನ ಪೂಜೆಗೆ ವಿಶೇಷ ಮಹತ್ವವಿದೆ. ಆದ್ದರಿಂದ ಹನುಮಂತನನ್ನು ಪೂಜಿಸಲಾಗುತ್ತದೆ. ಮಂಗಳವಾರದಂದು ಅಂದರೆ ಇಂದು ಹನುಮಂತನನ್ನು ಪೂಜಿಸುವುದರಿಂದ ಭಕ್ತರ ಕಷ್ಟಗಳೆಲ್ಲವೂ ದೂರಾಗುತ್ತದೆ, ಆರೋಗ್ಯದ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ, ನಕಾರಾತ್ಮಕ ಶಕ್ತಿಯಿಂದ ದೂರಿರುವಿರಿ ಮತ್ತು ಆಸೆಗಳೆಲ್ಲವೂ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಮಂಗಳವಾರದಂದು ಹನುಮಂತನನ್ನು ಪೂಜಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ಹನುಮನ ಕೃಪೆ ನಿಮಗಿರುತ್ತದೆ. ಆ ನಿಯಮಗಳಾವುವು..?

    ರಾಮನ ಶ್ರೇಷ್ಠ ಭಕ್ತನಾದ ಹನುಮನು ಯಾವಾಗಲೂ ಬ್ರಹ್ಮಚರ್ಯವನ್ನು ಅನುಸರಿಸಿದವನು. ಆದ್ದರಿಂದ ಯಾರು ಇಂದು ಹನುಮಂತನನ್ನು ಪೂಜಿಸುತ್ತಾರೋ ಅವರು ಬ್ರಹ್ಮರ್ಯದಿಂದಿರಬೇಕು. ಈ ದಿನದಂದು ವಿವಾಹಿತರೂ ಕೂಡ ತನ್ನ ಪತ್ನಿಯಿಂದ ಅಥವಾ ಪತಿಯಿಂದ ದೂರವಿದ್ದು ಬ್ರಹ್ಮಚರ್ಯವನ್ನು ಪಾಲಿಸಬೇಕು.

    ಹನುಮಂತನ ಪೂಜೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹನುಮಂತನನ್ನು ಪೂಜಿಸುವವರು ಪೂಜೆಗೂ ಮುನ್ನ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಯನ್ನು ಧರಿಸಬೇಕು. ಹನುಮನ ವಿಗ್ರಹವನ್ನೋ ಅಥವಾ ಫೋಟೋವನ್ನೋ ಇಟ್ಟು ಪೂಜಿಸುವ ಸ್ಥಳದಲ್ಲಿ ಶುದ್ಧತೆ ಹಾಗೂ ಸ್ವಚ್ಛತೆಯನ್ನು ಕಾಯ್ದುಕೊಳ್ಳಿ.

    ಇಂದು ನೀವು ಹನುಮಂತನನ್ನು ಪೂಜಿಸುವುದಾದರೆ ಮೊದಲು ಮಾಂಸಾಹಾರ ಸೇವನೆಯಿಂದ ಮದ್ಯಪಾನ ಸೇವನೆಯಿಂದ ದೂರವಿರಬೇಕು. ಹನುಮಂತನನ್ನು ಪೂಜಿಸುವವರು ಸಸ್ಯಹಾರವನ್ನು ಮಾತ್ರ ಸೇವಿಸಬೇಕು ಮತ್ತು ಸದ್ಗುಣಗಳನ್ನು ರೂಢಿಸಿಕೊಳ್ಳಬೇಕೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

    ಹನುಮಂತನು ಬಾಲ್ಯದಿಂದಲೇ ಬ್ರಹ್ಮಚರ್ಯವನ್ನು ಅನುಸರಿಸಿಕೊಂಡು ಬಂದವನು ಹಾಗೂ ಆತನನ್ನು ಅವಿವಾಹಿತನೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಹಿಳೆಯರು ಎಮದಿಗೂ ಹನುಮಂತನ ಪೂಜೆಯಲ್ಲಿ ತಮ್ಮಿಂದ ಬಟ್ಟೆಯನ್ನು ನೀಡಬಾರದು ಅಥವಾ ವಸ್ತ್ರವನ್ನು ನೀಡಬಾರದು. ಒಂದುವೇಳೆ ನೀವು ಅಂತಹ ಹರಕೆಯನ್ನಾಗಲಿ ಅಥವಾ ನಿಯಮಗಳನ್ನಾಗಲಿ ಅನುಸರಿಸಿಕೊಂಡು ಬಂದಿದ್ದರೆ ನೀವು ನೀಡಬೇಕೆಂದುಕೊಂಡ ವಸ್ತ್ರವನ್ನು ನಿಮ್ಮ ಪತಿ ಅಥವಾ ಪುತ್ರನ ಕೈಯಿಂದ ಅರ್ಪಿಸಬಹುದು.

    ಮಂಗಳವಾರದಂದು ಮತ್ತು ಶನಿವಾರದಂದು ನೀವು ಹನುಮಂತನನ್ನು ಪೂಜಿಸುವಾಗ ಕಪ್ಪು ಮತ್ತು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ ಪೂಜಿಸಬಾರದು. ಹನುಮಂತನನ್ನು ಪೂಜಿಸುವಾಗ ಯಾವಾಗಲೂ ನೀವು ಕೆಂಪು, ಕೇಸರಿ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಹನುಮಂತನನ್ನು ಪೂಜಿಸಬೇಕು. ಹನುಮಂತನಿಗೆ ಕೆಂಪು ಮತ್ತು ಕೇಸರಿ ಬಣ್ಣವೆಂದರೆ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ಆದ್ದರಿಂದ ಆತನ ಪೂಜೆಯಲ್ಲಿ ಈ ಬಣ್ಣದ ಬಟ್ಟೆಯನ್ನು ಧರಿಸಿ. ಇನ್ನು ನೀವು ಆಂಜನೇಯನಿಗಾಗಿ ಮಂಗಳವಾರ ವ್ರತವನ್ನು ಕೈಗೊಂಡಿದ್ದರೆ ಇಂದು ನೀವು ಉಪ್ಪು ಬೆರೆಸಿದ ಆಹಾರವನ್ನು ಸೇವಿಸಬಾರದು.

    ಒಂದು ವೇಳೆ ಇಂದು ನಿಮ್ಮ ಮನಸ್ಸು ಸರಿಯಿಲ್ಲದಿದ್ದರೆ, ಯಾವುದೋ ಕಾರಣದಿಂದ ಮನಸ್ಸು ಅಶಾಂತಿಯಲ್ಲಿದ್ದರೆ ನೀವು ಹನುಮಂತನನ್ನು ಪೂಜಿಸಬಾರದು. ಶಾಂತ ಹಾಗೂ ಗೊಂದಲವಿಲ್ಲದ ಮನಸ್ಸಿನಿಂದ ಮಾತ್ರ ಹನುಮಂತನನ್ನು ಆರಾಧಿಸಬೇಕು. ಇಲ್ಲವಾದರೆ ನಿಮ್ಮ ಮನಸ್ಸನ್ನು ಪೂಜೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅಷ್ಟು ಮಾತ್ರವಿಲ್ಲ, ಪೂಜೆಯ ಫಲವೂ ಕೂಡ ದೊರೆಯುವುದಿಲ್ಲ

    ಹನುಮಂತನ ಪೂಜೆಯಲ್ಲಿ ಚರಣಾಮೃತವನ್ನು ಬಳಸಬಾರದು. ಆದರೆ ಕಡ್ಡಾಯವಾಗಿ ತುಳಸಿಯನ್ನು ಬಳಸಬೇಕು. ರಾಮಾಯಣದ ಸಮಯದಲ್ಲಿ ಸೀತೆಯು ಹನುಮಂತನಿಗೆ ಊಟವನ್ನು ನೀಡುತ್ತಾಳೆ. ಸೀತೆ ಎಷ್ಟೇ ಊಟವನ್ನು ನೀಡಿದರೂ ಕೂಡ ಹನುಂತನಿಗೆ ಹೊಟ್ಟೆ ತುಂಬುವುದಿಲ್ಲ. ಆಗ ಸೀತೆ ಹನುಮಂತನಿಗೆ ತುಳಸಿ ಎಲೆಯನ್ನು ಸೇವಿಸಲು ನೀಡುತ್ತಾಳೆ. ಅದನ್ನು ತಿಂದ ನಂತರ ಹೊಟ್ಟೆ ತುಂಬಿತು. ಆದ್ದರಿಂದ ಹನುಮಂತನ ಪೂಜೆಯಲ್ಲಿ ಕಡ್ಡಾಯವಾಗಿ ತುಳಸಿ ಎಲೆಗಳನ್ನು ಬಳಸಬೇಕು.

    ಹನುಮಂತನನ್ನು ಪೂಜಿಸುವಾಗ ಆತನ ಮುರಿದ ವಿಗ್ರಹವನ್ನು ಪೂಜಿಸಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಮುರಿದ ಅಥವಾ ತುಂಡಾದ ಹನುಮನ ವಿಗ್ರಹವಿದ್ದರೆ ತಕ್ಷಣವೇ ಅದನ್ನು ಬದಲಾಯಿಸಿ. ಮುರಿದ ಹನುಮನ ವಿಗ್ರಹವನ್ನು ಪೂಜಿಸುವುದು ಶ್ರೇಯಸ್ಕರವಲ್ಲ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ನಾಗರಿಕರ ಹೆಸರಿನಲ್ಲಿ ನಾಳೆ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ಮಾಡುತ್ತೇವೆ: ಆರ್.ಅಶೋಕ್

    May 13, 2025

    Bengaluru Rain: ರಣಬಿಸಿಲಿಗೆ ಬೆಂಡಾಗಿದ್ದ ಬೆಂಗಳೂರಿಗೆ ತಂಪೆರೆದ ವರುಣ: ಸವಾರರ ಪರದಾಟ!

    May 13, 2025

    Crime News: ಕೆಲಸ ಮಾಡ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಮಹಿಳೆ ಅರೆಸ್ಟ್..!‌

    May 13, 2025

    ಕದಮ ವಿರಾಮ: ಪೆಹಲ್ಗಾಮ್ʼನಲ್ಲಿ ಮೃತಪಟ್ಟ ಪ್ರವಾಸಿಗರಿಗೆ ನ್ಯಾಯ ಸಿಕ್ಕಿಲ್ಲ – ಸತೀಶ್ ಜಾರಕಿಹೊಳಿ

    May 13, 2025

    ಶಿವಣ್ಣನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅರ್ಜುನ್‌ ಜನ್ಯ.. ಸಾಥ್‌ ಕೊಟ್ಟ ಪತ್ನಿ!

    May 13, 2025

    ಬೆಂಗಳೂರು: ವಿದೇಶಿ ಪ್ರಜೆಯಿಂದ ರಾಬರಿ ಮಾಡಿದ್ದ ಆರೋಪಿಗಳ ಬಂಧನ..!

    May 13, 2025

    ಬ್ಯಾಂಕ್ ಡೆಪಾಸಿಟ್ ಮಾಡಲು ನೀಡಿದ್ದ 1.51 ಕೋಟಿ ಎಗರಿಸಿದ ಆರೋಪಿ ಅರೆಸ್ಟ್..!

    May 13, 2025

    Gold Silver Price: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌: ಚಿನ್ನದ ಬೆಲೆ ಮತ್ತೆ ಇಳಿಕೆ, ಬೆಂಗಳೂರಿನಲ್ಲಿ ಎಷ್ಟಿದೆ ದರ?

    May 13, 2025

    FIR ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ ಸೋನು ನಿಗಮ್: ಇಂದು ಗಾಯಕನ ಅರ್ಜಿ ವಿಚಾರಣೆ

    May 13, 2025

    “ಮೋದಿ ಮನೆ ಮೇಲೆ ಮೊದಲು ಬಾಂಬ್ ಹಾಕಿ”: ವಿಡಿಯೋ ಮಾಡಿ ವೈರಲ್ ಮಾಡಿದ್ದ ಯುವಕ ಅರೆಸ್ಟ್.!

    May 13, 2025

    Benefits of Peanut: ಬಡವರ ಬಾದಾಮಿ ಕಡಲೆ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು..! ತಿಳಿದ್ರೆ ಶಾಕ್‌ ಆಗ್ತೀರಾ..

    May 13, 2025

    ಬೇಸಿಗೆಯಲ್ಲಿ ಎಳನೀರನ್ನು ಕುಡಿಯುತ್ತೀರಾ? ಯಾವಾಗ ಕುಡಿಯೋದು ಉತ್ತಮ ಎಂದು ನೀವು ತಿಳಿದಿರಲೇಬೇಕು..!

    May 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.