ತಮಿಳುನಟ ವಿಶಾಲ್ ಗೆ ಅಂತೂ ಇಂತೂ ಕಂಕಣ ಭಾಗ್ಯ ಕೂಡಿಬಂದಿದೆ. ನಟಿ ಸಾಯಿ ಧನ್ಸಿಕಾ ಜೊತೆ ವಿಶಾಲ್ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಅಕ್ಟೋಬರ್ 29ಕ್ಕೆ ಈ ಜೋಡಿ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ. ನಿನ್ನೆ ತಮಿಳುನಾಡಿನಲ್ಲಿ ನಡೆದ ಯೋಗಿ ದಾ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ವಿಶಾಲ್-ಸಾಯಿ ತಮ್ಮ ಪ್ರೀತಿ ಹಾಗೂ ಮದುವೆ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಅಭಿಮಾನಿಗಳು ಅವರ ವಿವಾಹದ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದರೆ, ಅನೇಕರು ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ, ಅವರ ಪ್ರೇಮಕಥೆ ಬಗ್ಗೆ ಕ್ಯೂರಿಯಾಸಿಟಿ ಹೊಂದಿದ್ದಾರೆ.
See how vishal is blushing when sai dhanshika is announcing their marriage date 🥰
Men in love ♥️pic.twitter.com/VGsh9yoWGw— 𝓓𝓸𝓵𝓵𝔂 🤍 (@dollybiblio) May 19, 2025
ವಿಶಾಲ್ ಆಗಸ್ಟ್ 29, 1977 ರಂದು ಜನಿಸಿದ್ದು, ಅವರಿಗೆ 47 ವರ್ಷ ವಯಸ್ಸಾಗಿದೆ. ಸಾಯಿ ಧನ್ಶಿಕಾ ನವೆಂಬರ್ 20, 1989 ರಂದು ತಮಿಳುನಾಡಿನಲ್ಲಿ ಜನಿಸಿದ್ದು, ಅವರಿಗೆ ಪ್ರಸ್ತುತ 35 ವರ್ಷ. ಇಬರಿಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ಸಾಯಿ ಧನ್ಸಿಕಾ ಹಾಗೂ ವಿಶಾಲ್ ಕಳೆದ 15 ವರ್ಷಗಳಿಂದ ಪರಸ್ಪರ ಪರಿಚಯ. ಈ ಪರಿಚಯವೇ ಪ್ರೀತಿಗೆ ತಿರುಗಿದೆ. ಬಹಳ ದಿನಗಳಿಂದ ಇವರಿಬ್ಬರ ಡೇಟಿಂಗ್ ಮ್ಯಾಟರ್ ಎಲ್ಲೆಡೆ ವೈರಲ್ ಆಗಿತ್ತು. ಸುದ್ದಿ ಹೊರಬೀಳ್ತಿದ್ದಂತೆ ಸ್ವತಃ ಸಾಯಿ ಹಾಗೂ ವಿಶಾಲ್ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.
Vishal 🫶 SaiDhanshika pic.twitter.com/i6DXTVwsEa
— AmuthaBharathi (@CinemaWithAB) May 19, 2025
ಸಾಯಿ ಧನ್ಶಿಕಾ ಮದುವೆಯಾದ ನಂತರವೂ ನಟನೆಯನ್ನು ಮುಂದುವರಿಸುವುದಾಗಿ ಎಲ್ಲರಿಗೂ ಭರವಸೆ ನೀಡಿದ್ದಾರೆ. “ಅವರು ನಟಿಸುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಅವರು ಅದ್ಭುತ ಪ್ರತಿಭೆ. ಅವರ ಪ್ರತಿಭೆಯನ್ನು ಸೀಮಿತಗೊಳಿಸಲು ನಾನು ಬಯಸುವುದಿಲ್ಲ” ಎಂದು ಬಾವಿ ಪತಿ ವಿಶಾಲ್ ತಿಳಿಸಿದ್ದಾರೆ.
Having known #Vishal Sir and #Dhanshika for so long, it fills my heart with joy to see them beginning this beautiful journey together.✨❤️
Two wonderful souls, perfectly made for each other—I'm truly overjoyed for them. Wishing them a lifetime filled with love, laughter, and… pic.twitter.com/vhrmuHisxe— RIAZ K AHMED (@RIAZtheboss) May 19, 2025
ಮುರಿದು ಬಿದ್ದಿದ್ದ ವಿಶಾಲ್ ಮದುವೆ!
ವಿಶಾಲ್ ಮತ್ತು ನಟಿ ಅನಿಶಾ ಅಲ್ಲಾ ರೆಡ್ಡಿ ಅವರು 2019 ರ ಏಪ್ರಿಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2019 ರಲ್ಲಿ ಮದುವೆಯಾಗಲು ಈ ಜೋಡಿ ಸಜ್ಜಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿತ್ತು. ವಿಶಾಲ್ ಹಲವು ನಟಿಯರ ಜೊತೆ ಡೇಟಿಂಗ್ ಮಾಡುತ್ತಿರಯವ ಬಗ್ಗೆ ಗುಲ್ಲೆದಿತ್ತು. ನಟಿ ವರಲಕ್ಷ್ಮಿ ಹಾಗೂ ಅಭಿನಯ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಅವರು ಸಾಯಿ ಧನ್ಸಿಕಾ ಅವರನ್ನು ವರಿಸಲಿದ್ದಾರೆ.
— Anisha Alla (@Anisha_Alla) March 17, 2019