ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆದ “ಸಮರ್ಪಣೆ ಸಂಕಲ್ಪ”ಕ್ಕೆ ಬಿಜೆಪಿ ಕಟು ಟೀಕೆ ಮಾಡಿದೆ.
ಸರ್ಕಾರದ ಸಾಧನೆ ಸಮಾವೇಶ ಬಗ್ಗೆ ಬಿಜೆಪಿ ಎಮ್.ಎಲ್.ಸಿ ಎಸ್ ವಿ ಸಂಕನೂರ ಹರಿಹಾಯ್ದಿದ್ದಾರೆ.
ಗದಗನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಏನು ಸಾಧನೆ ಮಾಡಿದ್ದಿರೆಂದು ಸಾಧನೆ ಸಮಾವೇಶ ಮಾಡ್ತಿದ್ದಿರಿ? ಯಾವ ಸಿಎಂ ಮಾಡದ 2.40 ಲಕ್ಷ ಕೋಟಿ ಸಾಲ ಮಾಡಿದ್ದಿರಲ್ಲಾ. ಇದೇನಾ ನಿಮ್ಮ ಸಾಧನೆ ಎಂದು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರ ಕುರಿತು ದೇಶದಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಎಂಬುದು ನಿಮ್ಮ ಸಾಧನೆನಾ?
ಹೀಗಂತ ನಿಮ್ಮದೆ ಪಕ್ಷದ ಶಾಸಕರು ಹೇಳ್ತಿದ್ದಾರೆ. ನಮ್ಮ ಮೇಲೆ ಆರೋಪ ಮಾಡಿದ್ರಿ 40% ಭ್ರಷ್ಟಾಚಾರ ಸರಕಾರ ಅಂತ. ನೀವೇನು ಮಾಡಿದ್ದೀರಿ ಈಗ. 60% ಕಮಿಷನ್ ಹೆಚ್ಚಳ ಮಾಡಿದ್ದೆವೆಂಬ ಕಾರಣಕ್ಕೆ ಸಾಧನಾ ಸಮಾವೇಶ ಮಾಡ್ತಿರಾ? ಹಿಂದಿನ ಮುಖ್ಯಮಂತ್ರಿಗಳು ವಿಶೇಷ ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಕೊರತೆ ಬಜೆಟ್ ಮಂಡಿಸಿದ್ದಾರೆ. ಇದಕ್ಕಾಗಿ ನಿಮ್ಮ ಸಾಧನೆ ಸಮಾವೇಶ ಮಾಡ್ತಿದ್ದೀರಾ? SC, ST ಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸಿಕೊಂಡಿದ್ದು ನಿಮ್ಮ ಸರ್ಕಾರದ ಸಾಧನೆನಾ? ಸುಮಾರು 42 ವಸ್ತುಗಳ ಬೆಲೆ ಏರಿಕೆ ಮಾಡಿದ್ದಿರಲ್ಲಾ, ಇದೇನಾ ನಿಮ್ಮ ಸಾಧನೆ? ಜಾತಿಗಣತಿ ಎಲ್ಲಾ ಸಮಾಜದವರು ವಿರೋಧಿಸಿದರು.
ಆಪರೇಷನ್ ಸಿಂಧೂರ್ ಬಗ್ಗೆ ಹೇಳಿಕೆ: ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದೂರು ದಾಖಲು
ಜಾತಿ, ಉಪ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ರಲ್ಲಾ ಇದೆನಾ ನಿಮ್ಮ ಸಾಧನೆ? ಶಿಕ್ಷಣದ ಗುಣಮಟ್ಟ ಸಂಪೂರ್ಣ ಹಾಳು ಮಾಡಿದ್ದೀರಿ. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಭಾರತದಲ್ಲಿ ಕರ್ನಾಟಕ ಕೊನೆ ಸ್ಥಾನದಲ್ಲಿದೆ. ಇದೆನಾ ನಿಮ್ಮ ಸಾಧನೆ? ಶಾಲಾ ಕಾಲೇಜು, ವಿಶ್ವವಿದ್ಯಾಲಯ ಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಇದರಿಂದ ಶಿಕ್ಷಣದ ಗುಣಮಟ್ಟ ನೆಲಕಚ್ಚಿದೆ. ಶಿಕ್ಷಣದ ಗುಣಮಟ್ಟ ಹಾಳು ಆಗಿರುವುದಕ್ಕೆ ಸಾಧನೆ ಮಾಡ್ತಿದ್ದಿರಾ?
ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ರೇಟ್ ಬೋರ್ಡ್ ಫಿಕ್ಸ್ ಮಾಡಿದಿರಲ್ಲ, ಇದೇನಾ ನಿಮ್ಮ ಸಾಧನೆ? ಮೂಲಭೂತ ಸೌಕರ್ಯಗಳಿಗಾಗಿ ಬಡ್ಜೆಟ್ ನಲ್ಲಿ ಶೇಕಡಾ 25 ಹಣ ಮೀಸಲಿಡಬೇಕು.
ಕೇವಲ ಸೇಕಡಾ 10 ರಷ್ಡು ಇಟ್ಟಿದಿರಿ, ಇದೇನಾ ನಿಮ್ಮ ಸಾಧನೆ? ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವುದು ಇವರ ದೊಡ್ಡ ಸಾಧನೆ ಆಗಿದೆ. 19 ಸಾವಿರ ರೌಡಿ ಶೀಟರಗಳನ್ನು ಬಿಡುಗಡೆ ಮಾಡಿದ್ರಲ್ಲಾ, ಇದೆನಾ ನಿಮ್ಮ ಸಾಧನೆ? ರಾಜ್ಯ ಸರ್ಕಾರದ ಸಾಧನೆ ಶೂನ್ಯ.
ಯಾತಕ್ಕಾಗಿ ಈ ಸಾಧನೆ ಸಮಾವೇಶ ಮಾಡ್ತಿದ್ದಿರಿ? 2 ವರ್ಷ ಏನು ಮಾಡಿದಿರಿ ಅಂತ ಜನ್ರಿಗೆ ಗೊತ್ತಾಗಿದೆ. ಮುಂಬರುವ ದಿನಗಳಲ್ಲಿ ಜನ್ರು ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಸ್.ವಿ ಸಂಕನೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.