ಬೆಂಗಳೂರು: ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡ್ರು ನಮ್ಮ ಬೆಂಬಲ ಇದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ನಗರದಲಲಿ ಮಾತನಾಡಿದ ಅವರು,
ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡ್ರು ನಮ್ಮ ಬೆಂಬಲ ಇದೆ. ನಮ್ಮ ಪಕ್ಷದಿಂದ ಬೆಂಬಲವಿದೆ ಎಂದು ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ಇನ್ನೂ ಜಮೀರ್ ಯುದ್ದಕ್ಕೆ ಹೋಗೋದು ಬೇಡ, ಇಲ್ಲಿರೋ ಕುನ್ನಿಗಳನ್ನ ಕೊಲ್ಲಲಿ ಎಂದ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧನಿದ್ದೇನೆ. ನಾನು ಸೂಸೈಡ್ ಬಾಂಬ್ ಕಟ್ಟಿಕೊಂಡು ಹೋಗ್ತೇನೆ. ಸಿ.ಟಿ.ರವಿಗೆ(C T Ravi) ಏನು ಕೆಲಸ ಇಲ್ಲ. ಅದಕ್ಕಾಗಿ ಮಾತನಾಡ್ತಾರೆ. ನಮಗೆ ನಮ್ಮ ದೇಶ ಮುಖ್ಯ. ಅದಕ್ಕಾಗಿ ನಾನು ಯುದ್ಧಕ್ಕೆ ಹೋಗ್ತೇನೆ ಅಂದಿದ್ದೆ ಎಂದು ಹೇಳಿದರು.