ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅಂದರ್ ಆಗಿದ್ದಾರೆ. ಸಹನಟಿ ಮೇಲೆ ಅತ್ಯಾಚಾರ ಆರೋಪ ಹೊತ್ತು ಪೊಲೀಸ್ ಸ್ಟೇಷನ್ ನಲ್ಲಿ ಲಾಕ್ ಆಗಿದ್ದಾರೆ. ಅತ್ಯಾಚಾರದ ಆರೋಪ ಕೇಳಿ ಬರ್ತಿದ್ದಂತೆ ಎಸ್ಕೇಪ್ ಆಗಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹಾಸನ ಬಳಿಯ ಶಾಂತಿಗ್ರಾಮ ಬಳಿ ಬಂಧಿಸಿದ್ದಾರೆ.
ಮಡೆನೂರು ಮನು ಬಂಧನವಾಗುತ್ತಿದ್ದಂತೆ ಸಹನಟಿ ಜೊತೆಗಿನ ವಾಟ್ಸಪ್ ಚಾಟ್ ವೈರಲ್ ಆಗಿದೆ. ನಾನು ನಿನ್ನ ಕೈ ಬಿಡಲ್ಲ..ಮೂಡ್ ಬರ್ತಿದೆ ಅಂತೆಲ್ಲಾ ಮಡೆನೂರು ಮನು ಮಿಡ್ ನೈಟ್‌ನಲ್ಲಿ ಸಹನಟಿಗೆ ವಾಟ್ಸಪ್ ಮೆಸೇಜ್ ಹಾಕಿದ್ದು, ಆ ಸ್ಕ್ರೀನ್ ಶಾಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಿಂಚು ನಿಂಗೆ ಮೋಸ ಮಾಡಲ್ಲ ಎಂದ ಮನು!
ಸಹನಟಿ ಮೇಲೆ ಅತ್ಯಾಚಾರ ಆರೋಪದ ಬಳಿಕ ಮಡೆನೂರು ಮನು ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಎಲ್ಲರಿಗೂ ನಮಸ್ತೆ, ಎಲ್ಲರಿಗೂ ವಿಷಯ ಗೊತ್ತಾಗಿದೆ. ಅದರ ಬಗ್ಗೆ ಎಲ್ಲ ಕ್ಲಾರಿಟಿ, ಸಾಕ್ಷಿ ಸಮೇತ ನಾನು ಬರ್ತೀನಿ. ಇದರ ಹಿಂದೆ ಯಾರ್ಯಾರು ಇದ್ದಾರೆ? ಇದರ ಹಿಂದೆ ಯಾರ್ಯಾರು ಸಿನಿಮಾ ನಿಲ್ಲಿಸಬೇಕೆಂದು ಓಡಾಡ್ತಿದ್ದಾರೆ? ಯಾರ್ಯಾರು ಸಿನಿಮಾ ಪ್ರಮೋಷನ್ಸ್ ನೋಡಿ ನನಗೆ ಬೆದರಿಕೆ ಹಾಕಿದ್ದಾರೆ? ಪ್ರತಿಯೊಂದು ಪ್ರೂಫ್ ಸಮೇತ ಬರ್ತೀನಿ ಎಂದಿದ್ದಾರೆ.