ಎದ್ದಾಗ ಮಾಡುವ ಒಂದು ಸಣ್ಣ ಕೆಲಸ ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಬೆಳಿಗ್ಗೆ ಎದ್ದಾಗ ಕೆಲವು ವಿಷಯಗಳನ್ನು ನೋಡುವುದು ಅಶುಭ ಎಂದು ವಾಸ್ತು ಹೇಳುತ್ತದೆ. ನಮ್ಮ ಇಡೀ ದಿನ ಚೆನ್ನಾಗಿ ಇರಬೇಕು ಎಂದರೆ ನಾವು ಎದ್ದಾಕ್ಷಣ ಮನಸಿಗೆ ಹಿತ ಎನ್ನಿಸುವಂತೆ ಇರಬೇಕು. ಇದೇ ಕಾರಣಕ್ಕೆ ಬೆಳಗ್ಗೆ ಕಣ್ಣು ಬಿಟ್ಟಾಕ್ಷಣ ಈ ವಸ್ತುಗಳನ್ನು ನೋಡದೇ ಒಳ್ಳೆಯ ವಸ್ತುಗಳನ್ನು ನೋಡಬೇಕು ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.
ಈಗ ಬೆಳಿಗ್ಗೆ ಎದ್ದಾಗ ನೋಡಬಾರದ ವಸ್ತುಗಳ ಬಗ್ಗೆ ತಿಳಿಯೋಣ. ಅದರೊಂದಿಗೆ ನಾವು ಆರ್ಥಿಕ ನಷ್ಟದ ಅಪಾಯವನ್ನು ತಪ್ಪಿಸಬಹುದು. ನಾವು ಬೆಳಗ್ಗೆ ಎದ್ದ ತಕ್ಷಣ ಏನು ನೋಡಬೇಕು, ಏನು ನೋಡಬಾರದು, ನೋಡಿದರೆ ನಮಗೆ ಒಳ್ಳೆಯದಾಗುತ್ತದೆ ಶುಭವಾಗುತ್ತದೆ, ಏನು ನೋಡಿದರೆ ನಮಗೆ ಸಮಸ್ಯೆಗಳು ಕಷ್ಟಗಳ ಸುರಿಮಳೆ ಬರುತ್ತೇವೆ ಎಂದು ಹೇಳಲಾಗುತ್ತಿದೆಕನ್ನಡಿ ನೋಡುವುದು : ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬೇಡಿ. ಹಾಗೆ ಮಾಡುವುದು ಅಶುಭ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಒಳ್ಳೆಯದಲ್ಲ. ಎದ್ದ ತಕ್ಷಣ ಕನ್ನಡಿಯನ್ನು ನೋಡಬೇಡಿ. ಅಲ್ಲದೇ ಅದರಲ್ಲಿಯೂ ಒಡೆದ ಕನ್ನಡಿಯನ್ನು ನೋಡುವುದು ಇನ್ನೂ ಅಶುಭವಾಗುತ್ತದೆ
ಕನ್ನಡಿ ನೋಡುವುದು : ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬೇಡಿ. ಹಾಗೆ ಮಾಡುವುದು ಅಶುಭ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಒಳ್ಳೆಯದಲ್ಲ. ಎದ್ದ ತಕ್ಷಣ ಕನ್ನಡಿಯನ್ನು ನೋಡಬೇಡಿ. ಅಲ್ಲದೇ ಅದರಲ್ಲಿಯೂ ಒಡೆದ ಕನ್ನಡಿಯನ್ನು ನೋಡುವುದು ಇನ್ನೂ ಅಶುಭವಾಗುತ್ತದೆ
ಕೊಳಕು ಪಾತ್ರೆಗಳು: ಕೊಳಕು ಪಾತ್ರೆಗಳನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡಬಾರದು. ಇದು ನಕಾರಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ ಬಡತನವನ್ನೂ ತರುತ್ತದೆ ಎಂದು ವಾಸ್ತು ತಜ್ಞರು ನಂಬುತ್ತಾರೆ. ಆದ್ದರಿಂದ, ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿಯಲ್ಲಿ ಅಡುಗೆಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಅಡುಗೆ ಮನೆಯಲ್ಲಿ ಕೊಳಕು ಪಾತ್ರೆಗಳನ್ನು ಇಡಬೇಡಿ.
ನೆರಳು: ಬೆಳಗ್ಗೆ ಎದ್ದ ತಕ್ಷಣ ನಿಮ್ಮ ನೆರಳು ಅಥವಾ ಇತರರ ನೆರಳನ್ನು ನೋಡುವುದು ಒಳ್ಳೆಯದಲ್ಲ. ನೋಡಿದರೆ ಜೀವನದಲ್ಲಿ ಅಶಾಂತಿ, ಒತ್ತಡ ಹೆಚ್ಚುತ್ತದೆ. ಬೆಳಿಗ್ಗೆ ನೆರಳನ್ನು ನೋಡುವುದು ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಹ ಬೆಳಗ್ಗೆ ಎದ್ದ ತಕ್ಷಣ ನೆರಳು ನೋಡಬೇಡಿ.
ಕೆಲ ಪ್ರಾಣಿಗಳ ಚಿತ್ರಗಳು: ಮನೆಯಲ್ಲಿ ಕಾಡು ಪ್ರಾಣಿಗಳ, ಯುದ್ಧದ ಚಿತ್ರಗಳನ್ನು ಇಡಬೇಡಿ. ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ಇಂತಹ ಚಿತ್ರಗಳನ್ನು ನೋಡಬೇಡಿ. ಇದು ನಿಮ್ಮ ಸಂಬಂಧಗಳು, ಮನಸ್ಸು, ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ಚಿತ್ರಗಳನ್ನು ಮನೆಯಲ್ಲಿ ಇಡದಿರುವುದು ಉತ್ತಮ. ಅಲ್ಲದೆ, ಮನೆಯಲ್ಲಿ ದೇವತೆಗಳ ಉಗ್ರ ರೂಪಗಳ ಚಿತ್ರಗಳನ್ನು ಇಡಬೇಡಿ
ಬೆಳಗ್ಗೆ ಎದ್ದಾಕ್ಷಣ ಹಾಳಾದ ಅಥವಾ ನಿಂತು ಹೋದ ಗಡಿಯಾರವನ್ನು ನೋಡಬಾರದು. ಇದರಿಂದ ದಿನ ಕಷ್ಟಕರವಾಗಲಿದೆ ಎಂಬ ನಂಬಿಕೆ ಇದೆ, ವಾಸ್ತುಶಾಸ್ತ್ರದ ಪ್ರಕಾರ, ಗಡಿಯಾರ ಚಲನಶೀಲತೆ ಪ್ರತೀಕ ಇದು ನಿಂತರೆ ಅಶುಭ ಎನ್ನಲಾಗಿದೆ. ಬೆಳಗ್ಗೆ ಎದ್ದಾಕ್ಷಣ ಒಡೆದ ಕನ್ನಡಿಯಲ್ಲಿ ಮುಖ ನೋಡಬಾರದು.