ಬೆಂಗಳೂರು: ಕನ್ನಡದ ಹೆಸರಾಂತ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಎಂಬ ಹೆಗ್ಗಳಿಕೆಗೆ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ. ‘ಹಾರ್ಟ್ ಲ್ಯಾಂಪ್’ ಎಂಬ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಹಾಗಾಗಿ ಕರುನಾಡಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಒಲಿದಿದೆ.
ಮೂಲತಃ ಹಾಸನದವರೇ ಆದ ಬಾನು ಮುಷ್ತಾಕ್ ಬೆಳೆದದ್ದು ಹಾಸನದಲ್ಲಿಯೇ. ಅರಸೀಕೆರೆಯಲ್ಲಿ ಶಾಲೆಗೆ ಸೇರಿದ ಬಾನುಗೆ ಉರ್ದು ಮಾತ್ರ ತಲೆಗೆ ಹೋಗಲಿಲ್ಲ. ಹೀಗಾಗಿ ಅವರ ಪೋಷಕರು ಕನ್ನಡವನ್ನಾದರೂ ಕಲಿಯಲಿ ಎಂದು ಆಕೆಯನ್ನು ಶಿವಮೊಗ್ಗದ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗೆ ಸೇರಿಸುತ್ತಾರೆ. ಬಳಿಕ ಪದವಿವರೆಗೂ ವ್ಯಾಸಂಗ ಮಾಡುತ್ತಾರೆ.
ಮುಂದೆ ವೃತ್ತಿಯಲ್ಲಿ ವಕೀಲೆಯಾದ ಬಾನು ಮುಷ್ತಾಕ್ ಅವರು, ಮುಸ್ಮಿಂ ಮಹಿಳೆಯ ಪರವಾಗಿ ತಮ್ಮ ಧ್ವನಿ ಎತ್ತುತ್ತಾರೆ. ಸಾಕಷ್ಟು ಮುಸ್ಮಿಂ ಮಹಿಳೆ ಕೇಸ್ಗಳನ್ನು ವಾದಿಸುತ್ತಾರೆ. ಓರ್ವ ಮುಸ್ಮಿಂ ಯುವತಿ ಸಿನಿಮಾ ನೋಡಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಇದನ್ನು ಖಂಡಿಸುವುದು ಮಾತ್ರವಲ್ಲದೇ ಲಂಕೇಶ್ ಪತ್ರಿಕೆಗೆ ಬರೆಯುವ ಮೂಲಕ ಮಾಧ್ಯಮ ಲೋಕಕ್ಕೂ ಪಾದಾರ್ಪಣೆ ಮಾಡುತ್ತಾರೆ.
ಬಿಯರ್ ಕುಡಿದರೆ ಕಿಡ್ನಿ ಸ್ಟೋನ್ ಆಗುತ್ತಾ? ಎಣ್ಣೆ ಪ್ರಿಯರು ನೋಡಲೇಬೇಕಾದ ಸ್ಟೋರಿ!
ಶಿಕ್ಷಕಿ, ಪತ್ರಕರ್ತೆ, ವಕೀಲೆಯಾಗಿ, ಸಾಹಿತಿಯಾಗಿ ಬಾನು ಮುಷ್ತಾಕ್ ಅವರು ಚಿರಪರಿಚಿತರಾಗಿರುವ ಬಾನು ಮುಷ್ತಾಕ್. ಉರ್ದು, ಹಿಂದಿ, ತಮಿಳು, ಮಲಯಾಳಂ ಮತ್ತು ಇತ್ತೀಚೆಗೆ ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸಲಾಗಿದೆ. 25 ರಲ್ಲಿ, ದೀಪಾ ಭಸ್ತಿ ಅನುವಾದಿಸಿದ ಅವರ ಸಣ್ಣ ಕಥೆಗಳ ಸಂಗ್ರಹ, ಹಾರ್ಟ್ ಲ್ಯಾಂಪ್ , ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಬಾನು ಮುಷ್ತಾಕ್ ಅವರು ಹಾಸನ ಮೂಲದ, ಅವರ ಕೃತಿಗಳು ಉರ್ದು, ಹಿಂದಿ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿಯೂ ಪ್ರಕಟವಾಗಿವೆ. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. “ಹಾರ್ಟ್ ಲ್ಯಾಂಪ್” ಕೃತಿಯು ಇಂಗ್ಲಿಷ್‌ನಲ್ಲಿ ʻಹಸೀನಾ ಮತ್ತು ಇತರ ಕಥೆಗಳುʼ ಎಂದು ಸಹ ಕರೆಯಲ್ಪಡುತ್ತದೆ.
ಹಾರ್ಟ್ ಲ್ಯಾಂಪ್ 1990 ಮತ್ತು 2023 ರ ನಡುವೆ ಬಾನು ಮುಷ್ತಾಕ್ ಅವರು ಬರೆದ 12 ಕಥೆಗಳ ಸಂಗ್ರಹವಾಗಿದ್ದು, ದೀಪಾ ಭಸ್ತಿ ಅವರು ಇದನ್ನು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಈ ಕಥೆಗಳು ದಕ್ಷಿಣ ಭಾರತದ ಮುಸ್ಲಿಂ ಸಮುದಾಯಗಳ ಮಹಿಳೆಯರ ದೈನಂದಿನ ಜೀವನದ ಅನುಭವಗಳನ್ನು, ವಿಶೇಷವಾಗಿ ಅವರ ಸ್ಥಿತಿಸ್ಥಾಪಕತ್ವ, ಪ್ರತಿರೋಧ ಮತ್ತು ಸಹೋದರತ್ವವನ್ನು ಎತ್ತಿ ತೋರಿಸುತ್ತವೆ. ಬಾನು ಮುಷ್ತಾಕ್ ಅವರು ತಮ್ಮ ಬರಹಗಳ ಮೂಲಕ ಧರ್ಮ, ಸಮಾಜ ಮತ್ತು ರಾಜಕೀಯವು ಮಹಿಳೆಯರ ಮೇಲೆ ಹೇಗೆ ನಿರ್ಬಂಧಗಳನ್ನು ಹೇರುತ್ತವೆ ಎಂಬುದನ್ನು ಚಿತ್ರಿಸುತ್ತಾರೆ.
ಬಾನು ಮುಷ್ತಾಕ್ ಅವರು ಬರೆದ ಹಾರ್ಟ್ ಲ್ಯಾಂಪ್ ಕೃತಿಯನ್ನು ಇಂಗ್ಲೀಷ್ಗೆ ಟ್ರಾನ್ಸ್ಲೇಟ್ ಮಾಡಿದವರು ಮಡಿಕೇರಿ ಮೂಲದ ಅನುವಾದಕಿ ದೀಪಾ ಬಸ್ತಿ ಆಗಿದ್ದಾರೆ. ಲಂಡನ್ನಲ್ಲಿ ಪ್ರಶಸ್ತಿ ಪಡೆಯುವಾಗ ದೀಪಾ ಬಸ್ತಿ ಕೂಡ ಜೊತೆಯಲ್ಲಿದ್ದರು. ಮೇ 21 ರಂದು ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಇನ್ನು ಈ ಪ್ರಶಸ್ತಿಯು ಒಟ್ಟು 50,000 ಪೌಂಡ್ (57.28 ಲಕ್ಷ ರೂಪಾಯಿ ) ಹೊಂದಿರುತ್ತದೆ.