ಕಿಚ್ಚ ಸುದೀಪ್ ನಟನೆಯ ಬಿಲ್ಲಾ ರಂಗ ಬಾಷಾ ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಮೊದಲ ಹಂತದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ.. ಸುಮಾರು 20 ದಿನಗಳ ಮೊದಲ ಶೆಡ್ಯೂಲ್ನಲ್ಲಿ ಫೈಟ್ ಸೀಕ್ವೆನ್ಸ್ ಚಿತ್ರೀಕರಣ ನಡೆಸಲಾಗ್ತಿದೆ.. ಅಂದ್ಹಾಗೆ ಬೃಹತ್ ಸೆಟ್ ಒಂದರಲ್ಲಿ ಚಿತ್ರೀಕರಣ ನಡೀತಿದ್ದು, ಚಿತ್ರೀಕರಣದ ಸುತ್ತಲೂ ಟೈಟ್ ಸೆಕ್ಯೂರಿಟಿ ನೀಡಲಾಗಿದೆ.. ಚಿತ್ರೀಕರಣದಲ್ಲಿ ಯಾರೂ ಮೊಬೈಲ್ ಬಳಸದಂತೆ, ದೃಶ್ಯಗಳು ಲೀಕ್ ಆಗದಂತೆ ಎಚ್ಚರಿಕೆ ವಹಿಸಲಾಗ್ತಿದೆ.
ಬಿಲ್ಲಾ ರಂಗ ಭಾಷಾ ನಾಯಕಿ ಯಾರು ಅನ್ನೋ ಪ್ರಶ್ನೆಗೆ ಒಂದು ಹಿಂಟ್ ಸಿಕ್ಕಿದೆ.. ಮೂಲಗಳ ಪ್ರಕಾರ ಮಿಸ್ ಇಂಡಿಯಾ 2024ರ ವಿನ್ನರ್ ನಿಖಿತಾ ಪೊರ್ವಲ್ ಕಿಚ್ಚನಿಗೆ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಮತ್ತೊಂದು ನಾಯಕಿಯ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸೋ ಸಾಧ್ಯತೆ ಹೆಚ್ಚಿದೆ.
ಬಹುಭಾಷಾ ನಟಿ ಪೂಜಾ ಹೆಗ್ಡೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಗುಲ್ಲೆದಿತ್ತು. ಬಿಲ್ಲ ರಂಗ ಭಾಷಾ ಮೂಲಕ ಕನ್ನಡಕ್ಕೆ ಕರಾವಳಿ ಸುಂದ್ರಿ ಎಂಟ್ರಿಯಾಗಲಿದ್ದಾರೆ ಎಂಬ ಸಮಾಚಾರ ಹರಿದಾಡಿತ್ತು. ಈ ಪೂಜಾ ನಟಿಸ್ತಿಲ್ಲ ಎನ್ನಲಾಗುತ್ತಿದೆ. ಇನ್ನೂ ಶ್ರೀನಿಧಿ ಶೆಟ್ಟಿ ಹೆಸ್ರು ಕೂಡ ಹೇಳಿಬಂದಿತ್ತು. ಅವ್ರು ಬಿಟ್ಟು ಇನ್ಯಾರು ಅನ್ನೋ ಹಾಗೇ. ಅದ್ಯಾರು ಬಿಲ್ಲ ರಂಗ ಭಾಷಾನಿಗೆ ಜೊತೆಯಾಗ್ತಾರೋ ಗೊತ್ತಿಲ್ಲ.
ಈ ಹಿಂದೆ ಕಿಚ್ಚನ ಜೊತೆ ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ನಿರ್ದೇಶಕ ಅನೂಪ್ ಭಂಡಾರಿ ಬಿಲ್ಲ ರಂಗ ಭಾಷಾನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೂಲಕ ಭವಿಷ್ಯದ ಕಾಲಘಟ್ಟದ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಹೊಸ ಪ್ರಪಂಚವನ್ನೇ ಚಿತ್ರತಂಡ ಸೃಷ್ಟಿಸಿದೆಯಂತೆ.