ಕನ್ನಡ ಸಿನಿಮಾರಂಗದಲ್ಲಿ ವಯಸ್ಸು 40 ಕಳೆದ್ರೂ ಹಲವು ನಟಿಯರು ಮದುವೆಬಂಧನಕ್ಕೆ ಒಳಗಾದೇ ಇನ್ನೂ ಸಿಂಗಲ್ ಆಗಿಯೇ ಉಳಿದಿದ್ದಾರೆ. ಈ ಪೈಕಿ ನಟಿ ಭಾವನಾ ರಾಮಣ್ಣ ಕೂಡ ಒಬ್ರು. ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ಭಾವನಾ ರಾಮಣ್ಣ ತಮ್ಮ ಅಭಿನಯದ ಮೂಲಕ ಮೋಡಿ ಮಾಡಿದವರು. ಕೇವಲ ಕನ್ನಡ ಇಂಡಸ್ಟ್ರೀ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾದಲ್ಲಿಯೂ ಅವರು ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ನಟನೆಗೆ ರಾಜ್ಯಪ್ರಶಸ್ತಿ ಪಡೆದಿರುವ ಭಾವನಾ, ಗ್ಲಾಮರ್ ಹಾಗೂ ಡಿಗ್ಲಾಮರ್ ಪಾತ್ರಗಳಲ್ಲಿ ಅಮೋಘವಾಗಿ ಅಭಿನಸಿದ್ದಾರೆ. ನಟನೆ ಮೈಲಕ ಪ್ರೇಕ್ಷಕರ ಮನಗೆದ್ದಿರುವ ಭಾವನಾ ರಾಮಣ್ಣ ವಯಸ್ಸು 40 ಕಳೆದ್ರೂ ಸಿಂಗಲ್ ಆಗಿಯೇ ಉಳಿದಿದ್ದಾರೆ. ಇದೀಗ ಈ ನಟಿ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ.
ನಟಿ, ಅದ್ಭುತ ಡ್ಯಾನ್ಸರ್ ಆಗಿರುವ ಭಾವನಾ ರಾಮಣ್ಣ ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಐವಿಎಫ್ ಮೂಲಕ 40 ರ ಹರೆಯದ ನಟಿ ಅವಳಿ ಮಕ್ಕಳನ್ನು ಪಡೆಯುತ್ತಿದ್ದಾರೆ. “ನಾನು ಯಾವಾಗಲೂ ತುಂಬಿರುವ ಮನೆಯಲ್ಲಿ ಬೆಳೆದ್ದು, ನನ್ನ ಸುತ್ತ ಯಾವಾಗಲೂ ಮಕ್ಕಳ ಇರುವುದನ್ನು ಇಷ್ಟಪಡುತ್ತಿದ್ದೆ, ಆದರೆ ನನ್ನ ಸ್ವಂತ ಮಕ್ಕಳನ್ನು ಹೊಂದುವ ಆಲೋಚನೆ ನನಗೆ ಇಪ್ಪತ್ತರ ದಶಕದಲ್ಲಿ ಬೇರೂರಲಿಲ್ಲ. ನನ್ನ ಮೂವತ್ತರ ಹರೆಯದಲ್ಲಿ, ನಾನು ಪ್ರೀತಿಗೆ ಸಿದ್ಧನಾಗಿದ್ದೆ, ಆದರೆ ಆಗಲೂ, ತಾಯ್ತನವು ನಾನು ಪರಿಗಣಿಸುವ ವಿಷಯವಾಗಿರಲಿಲ್ಲ. ನಾನು 40 ವರ್ಷ ತುಂಬಿದಾಗ ಮಾತ್ರ ತಾಯಿಯಾಗುವ ಕರೆಯನ್ನು ನಿರ್ಲಕ್ಷಿಸುವುದು ಅಸಾಧ್ಯವಾಯಿತು. ನಾನು ಈಗ ಆ ಆಳವಾದ ಆಸೆಯನ್ನು ಪೂರೈಸಿದ್ದೇನೆ. ನಾನು ಆರು ತಿಂಗಳ ಗರ್ಭಿಣಿಯಾಗಿದ್ದೇನೆ ಮತ್ತು ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದೇನೆ” ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.
ಭಾವನಾ ಮದುವೆಯಾಗಿರುವ ಕಾರಣವೇನು?
ನಟಿ ಭಾವನಾ ಇನ್ನು ಮದುವೆ ಆಗಿಲ್ಲ. ಅದಕ್ಕೆ ಕಾರಣ ಏನು ಎನ್ನವುದನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ನನ್ನ ಜೀವನದಲ್ಲೂ ವಯಸ್ಸಿಗೆ ತಕ್ಕಂತೆ ಪ್ರೀತಿ ಆಗಿತ್ತು. ಅದು 24 ವರ್ಷದ ಮೇಲೆ. ಅದಕ್ಕಿಂತ ಮುಂದೆ ಪ್ರೀತಿಯ ಬಗ್ಗೆ ಯಾವುದೇ ಗಮನ ಇರಲಿಲ್ಲ. ನನಗೆ ಬೇರೆ ಆಕಾಂಕ್ಷೆಗಳು ಜಾಸ್ತಿ ಇತ್ತು. ಡ್ಯಾನ್ಸ್ ಕಡೆ ಹೆಚ್ಚು ಒಲವಿತ್ತು. ನನ್ನ ಮೇಲೆ ನನ್ನ ಪೋಷಕರು, ಗುರುಗಳಿಗೆ ಹೆಚ್ಚು ಭರವಸೆ ಇತ್ತು. ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಪ್ರೀತಿ ಗೀತಿ ಆಲೋಚನೆ ಬರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.