ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಯಾರು ಅಂದ್ರೆ ತಕ್ಷಣ ಬರುವ ಹೆಸ್ರೇ ಒನ್ ಅಂಡ್ ಒನ್ಲಿ ತಲೈವರ್ ರಜನಿಕಾಂತ್. ಕೋಟ್ಯಾನು ಕೋಟಿ ಅಭಿಮಾನಿಗಳ ನೆಚ್ಚಿನ ಪಡೆಯಪ್ಪ ತಮಿಳು ಚಿತ್ರರಂಗದ ಸೂಪರ್ ಸ್ಟಾರ್. ಆ ನಂತ್ರ ಕಮಲ್ ಹಾಸನ್..ಹೀಗೆ ನಾನಾ ಹೆಸರುಗಳು ಸೇರ್ಪಡೆಯಾಗುತ್ತವೆ. ಕಾಲಿವುಡ್ ಸಿನಿದುನಿಯಾದ ಈ ಸೂಪರ್ ಸ್ಟಾರ್ ಗಳ ಸಂಭಾವನೆ ವಿಚಾರದ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತವೆ. 100 ಕೋಟಿ ಹಣ ಜೇಬಿಗಿಳಿಸಿಕೊಳ್ಳುವ ತಮಿಳು ಚಿತ್ರರಂಗದ ನಟರು ಬೇರೆ ಬೇರೆ ಉದ್ಯಮದಲ್ಲಿಯೂ ಹಣ ಹೂಡಿಕೆ ಮಾಡಿ ಸಾವಿರಾರು ಕೋಟಿ ಆಸ್ತಿ ಒಡೆಯರಾಗಿರುತ್ತಾರೆ.
ಫೋರ್ಬ್ಸ್ ಭಾರತದ ಅತ್ಯಂತ ಶ್ರೀಮಂತ ನಟರ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಅದರಲ್ಲಿಯೂ ತಮಿಳು ಚಿತ್ರರಂಗದ ಅತ್ಯಂತ ಶ್ರೀಮಂತ ನಟ ಯಾರು ಅನ್ನೋದನ್ನು ತಿಳಿಸಿದೆ. ನಿಮ್ಮ ತಲೆಯಲ್ಲಿ ರಜನಿಕಾಂತ್, ಕಮಲ್ ಹಾಸನ್ ಕಾಲಿವುಡ್ ನಂಬರ್ 1 ಕುಬೇರರು ಅಂದುಕೊಂಡರೆ ಅದು ತಪ್ಪು. ಯಾಕಂದ್ರೆ ತಮಿಳುಚಿತ್ರರಂಗದ ಶ್ರೀಮಂತ ನಟ ಇಳಯಳಪತಿ ವಿಜಯ್.
ತಮಿಳುಚಿತ್ರರಂಗದಲ್ಲಿ ರಜನಿಕಾಂತ್ ಅವರಷ್ಟೇ ಅಭಿಮಾನಿಗಳು, ವರ್ಚಸ್ಸು ಹೊಂದಿರುವ ನಟ ಅಂದರೆ ವಿಜಯ್. ಸದ್ಯ ಸಿನಿಮಾ ಬಿಟ್ಟು ರಾಜಕೀಯ ದಾಳ ಹಾಕಲು ಹೊರಟಿರುವ ದಳಪತಿ ಬರೋಬ್ಬರಿ 474 ಕೋಟಿ ರೂಪಾಯಿ ಒಡೆಯ ಎನ್ನಲಾಗುತ್ತಿದೆ. ಈ ಮೂಲಕ ಅತ್ಯಂತ ಶ್ರೀಮಂತ ತಮಿಳು ನಟ ಅನ್ನೋ ಖ್ಯಾತಿ ಜೊತೆ ಭಾರತದ 2ನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಕೂಡ ಆಗಿದ್ದಾರೆ. ಒಂದು ಚಿತ್ರಕ್ಕೆ ಏನಿಲ್ಲವೆಂದರೆ ವಿಜಯ್ 250 ಕೋಟಿ ಹಣ ಜೇಬಿಗಿಳಿಸಿಕೊಳ್ಳುತ್ತಾರಂತೆ. ಸದ್ಯ ವಿಜಯ್ ಜನನಾಯಗನ್ ಎಂಬ ಕೊನೆ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ತಲೈವರ್ ರಜನಿಕಾಂತ್ ತಮಿಳು ಚಿತ್ರರಂಗದ 2ನೇ ಅತ್ಯಂತ ಶ್ರೀಮಂತ ನಟ. ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದು, ರಜನಿ ಆಸ್ತಿ ಮೌಲ್ಯ ಸುಮಾರು 430 ಕೋಟಿ ರೂಪಾಯಿ ಇದೆಯಂತೆ. ತಲೈವರ್ ಸಿನಿಮಾಗಳು ತೆರೆಗೆ ಬಂತು ಅಂದ್ರೆ ಗಲ್ಲಾಪೆಟ್ಟಿಗೆ ಭರ್ಜರಿ ಕಮಾಯಿ ಮಾಡುವುದು ಗ್ಯಾರೆಂಟಿ. ಸದ್ಯ ಕೂಲಿ- ಜೈಲರ್-2 ಚಿತ್ರಗಳಲ್ಲಿ ರಜನಿಕಾಂತ್ ಬ್ಯುಸಿಯಾಗಿದ್ದಾರೆ.
ಸಿಂಗಂ ಖ್ಯಾತಿಯ ನಟ ಸೂರ್ಯ ತಮಿಳು ಚಿತ್ರರಂಗದ 3ನೇ ಶ್ರೀಮಂತ ನಟ. ಇವರ ಆಸ್ತಿ ಮೌಲ್ಯ 350 ಕೋಟಿ ರೂಪಾಯಿ. ಅವರು ಚೆನ್ನೈ ಮತ್ತು ಮುಂಬೈನಲ್ಲಿರುವ ಐಷಾರಾಮಿ ಆಸ್ತಿಗಳು ಮತ್ತು ದುಬಾರಿ ಬೆಲೆಯ ಕಾರುಗಳನ್ನ ಹೊಂದಿದ್ದಾರೆ. ಇವರ ಪತ್ನಿ ಜೋತಿಕಾ ಕೂಡ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.
ಥಲಾ ಅಜಿತ್ ತಮಿಳು ಚಿತ್ರರಂಗದಲ್ಲಿ ಮಾಸ್ ಆಡಿಯನ್ಸ್ ಹೊಂದಿರುವ ಈ ನಟನ ಆಸ್ತಿ ಮೌಲ್ಯ 196 ಕೋಟಿ ರೂಪಾಯಿ. ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ ಅಜಿತ್.
ಉಳಗನಾಯಗನ್ ಕಮಲ್ ಹಾಸನ್ ಒಟ್ಟು ಆಸ್ತಿ ಮೌಲ್ಯ 150 ಕೋಟಿ ರೂಪಾಯಿ ಎನ್ನಲಾಗ್ತಿದೆ. ಬಹಳ ವರ್ಷಗಳ ಬಳಿಕ ಮಣಿರತ್ನಂ ಜೊತೆಗೆ ಥಗ್ ಲೈಫ್ ಸಿನಿಮಾ ಮಾಡಿದ್ದು, ಅದರ ಬಿಡುಗಡೆಗಾಗಿ ಅವರು ಎದುರು ನೋಡುತ್ತಿದ್ದಾರೆ.