ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅದೆಷ್ಟೋ ಯುವ ಆಟಗಾರರಿಗೆ ಸ್ಪೂರ್ತಿ. ಕಿಂಗ್ ಕೊಹ್ಲಿ ಜೊತೆ ಫೋಟೋ ತೆಗೆದುಕೊಳ್ಳಬೇಕು. ಅವರಿಂದ ಆಟೋಗ್ರಾಫ್ ತೆಗೆದುಕೊಳ್ಳುಬೇಕು ಅನ್ನೋದು ಅದೆಷ್ಟೋ ಕ್ರಿಕೆಟ್ ಪ್ರೇಮಿಗಳ ಕನಸು. ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ದಾಖಲೆಗಳ ದಂಡಯಾತ್ರೆ ಮಾಡುತ್ತಿದ್ದಾರೆ. ಇಂತಹ ಕೊಹ್ಲಿಯನ್ನು ನೆರಳಿನಂತೆ ಹಿಂಬಲಿಸುವ ಹುಡ್ಗನೊಬ್ಬ ಆರ್‌ಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದಾನೆ.
ಆರ್‌ಸಿಬಿ ಯಾವುದೇ ಪಂದ್ಯವಿರಲಿ, ಪ್ರಾಕ್ಟೀಸ್ ಇರಲಿ. ಅದರಲ್ಲಿಯೂ ಕೊಹ್ಲಿ ಎಲ್ಲೇ ಇರಲಿ ಅವರ ಹಿಂದೆ ನೆರಳಿನಂತೆ ಹಿಂಬಾಲಿಸುವ ಹುಡ್ಗ ಸ್ವಸ್ತಿಕ್ ಚಿಕಾರ. ಸ್ವಸ್ತಿಕ್ ಆರ್‌ಸಿಬಿ ಆಟಗಾರ. ಆದ್ರೆ ಈವರೆಗೂ ಈತ ರಾಯಲ್ ಚಾಲೆಂಜರ್ಸ್ ಪರ ಒಂದು ಮ್ಯಾಚನ್ನೂ ಆಡಿಲ್ಲ. ಆದರೂ ಕನ್ನಡಿಗರ ಹೃದಯ ಗೆದ್ದಿದ್ದಾನೆ. ಸದಾ ಕೊಹ್ಲಿ ಸುತ್ತಮುತ್ತ ಸುತ್ತುತ್ತ ಕ್ಯಾಮೆರಾ ಕಣ್ಣುಗಳನ್ನು ತನ್ನತ್ತ ಸೆಳೆಯುತ್ತಾನೆ.
ಯಾರು ಸ್ವಸ್ತಿಕ್ ಚಿಕಾರ?
19 ವರ್ಷದ ಸ್ವಸ್ತಿಕ್ ಚಿಕಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನವರು. ಈತ ಒಬ್ಬ ಪ್ರತಿಭಾನ್ವಿತ ಬ್ಯಾಟರ್. ಇವರು ಯುಪಿ ಟಿ20 ಲೀಗ್‌ನಲ್ಲಿ ಅತ್ಯತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈ ಟೂರ್ನಿಯಲ್ಲಿ ಇವರು ಆಡಿದ 12 ಪಂದ್ಯಗಳಲ್ಲಿ 49.9ರ ಸರಾಸರಿಯಲ್ಲಿ 499 ರನ್ ಸಿಡಿಸಿದ್ದರು. ಇವರನ್ನು ಕೊಳ್ಳಲು ಹಲವು ತಂಡಗಳು ಪ್ಲ್ಯಾನ್ ಮಾಡಿದ್ದವು. ಆದರೆ ಕೊನೆಗೆ ಇವರು ಆರ್‌ಸಿಬಿ ಪಾಲಾದರು.
ಕೊಹ್ಲಿಗೆ ಭಾಯಿ ಪರ್ಫೂಮ್ ಬಳಸಿದ್ದ ಚಿಕಾರ!
ಹೇಳದೇ ಕೇಳದೆ ವಿರಾಟ್ ಕೊಹ್ಲಿ ಬ್ಯಾಗ್‌ನಿಂದ ಅವರು ಬಳಸುವ ಪರ್ಫ್ಯೂಮ್ ತೆಗೆದುಕೊಂಡು ಸುದ್ದಿಯಾಗಿದ್ದವರು ಇದೇ ಸ್ವಸ್ತಿಕ್ ಚಿಕಾರ. ಅಲ್ಲದೇ ತಮ್ಮ ಬರ್ತಡೇಗೆ ಕೊಹ್ಲಿ ಬಳಿ ವಾಚ್ ಗಿಫ್ಟ್ ಕೇಳಿದ್ದ ಈತ ಕೊಹ್ಲಿಯನ್ನು ಭಾಯ್ ಅಂತಾ ಪ್ರೀತಿಯಿಂದ ಕರೆಯುತ್ತಾನೆ. ಸದಾ ಕೊಹ್ಲಿ ಹಿಂದೆ ಮುಂದೆ ಸುತ್ತುವ ಸ್ವಸ್ತಿಕ್ ಚಿಕಾರ ಆರ್‌ಸಿಬಿ ಅಭಿಮಾನಿಗಳಿಗೂ ಅಚ್ಚುಮೆಚ್ಚು ಆಗಿಬಿಟ್ಟಿದ್ದಾರೆ.