ಇಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ನ ಫೈನಲಿಸ್ಟ್ಗಳು ಕನ್ಫರ್ಮ್ ಆಗಿದ್ದಾರೆ. ಈ ಬಾರಿಯ ಐಪಿಎಲ್ ಬಿಗ್ ಫೈಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಇಂದು ನಡೆಯಲಿರುವ ಪಂದ್ಯದ ಮತ್ತೊಂದು ವಿಶೇಷತೆ ಎಂದರೆ ಆರ್ಸಿಬಿ 9 ವರ್ಷಗಳ ಬಳಿಕ ಫೈನಲ್ಗೇರಿದರೆ, ಪಂಜಾಬ್ ಕಿಂಗ್ಸ್ 11 ವರ್ಷಗಳ ಬಳಿಕ ಫೈನಲ್ ಪಂದ್ಯವಾಡಲು ಸಜ್ಜಾಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಇಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಆದರೆ, ಮಳೆಯ ಭೀತಿಯಿಂದಾಗಿ ಫೈನಲ್ ಪಂದ್ಯ ರದ್ದಾದರೆ ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿದೆ. IPL ನಿಯಮಗಳ ಪ್ರಕಾರ ಈ ಸನ್ನಿವೇಶವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಕುರಿತು ಇಲ್ಲಿ ವಿವರವಾಗಿ ತಿಳಿಸಲಾಗಿದೆ.
ಪಂಜಾಬ್-ಮುಂಬೈ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಕೊನೆಗೂ ಮಳೆ ನಿಂತ ಮೇಲೆ ಸುಮಾರು 2:30 ಗಂಟೆಯ ನಂತರ ಪಂದ್ಯ ಆಡಿಸಲಾಗಿತ್ತು. ಮಳೆ ನಿಂತ ಬಳಿಕ ಪೂರ್ಣ 20 ಓವರ್ಗಳನ್ನು ಆಡಿಸಲಾಗಿತ್ತು. ಹವಾಮಾನ ವರದಿ ಪ್ರಕಾರ ಅಹಮದಾಬಾದ್ನಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ. ಮಳೆ ಬಂದರೂ ದೊಡ್ಡ ಮಟ್ಟದ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಪ್ರತಿ ದೊಡ್ಡ ಕ್ರಿಕೆಟ್ ಟೂರ್ನಿಗೆ ಇರುವಂತೆ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇರಿಸಲಾಗಿದೆ.
ಒಂದು ವೇಳೆ ಮಂಗಳವಾರ ಪಂದ್ಯ ಸಾಧ್ಯವಾಗದೇ ಹೋದರೆ ಮೀಸಲು ದಿನವಾದ ಬುಧವಾರ ಪಂದ್ಯ ನಡೆಯಲಿದೆ. ಒಂದು ವೇಳೆ ಎರಡೂ ದಿನ ಪಂದ್ಯ ನಡೆಯದೇ ಇದ್ದರೆ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಚಾಂಪಿಯನ್ ಆಗಲಿದೆ.
ಲೀಗ್ನಲ್ಲಿ ಆರ್ಸಿಬಿ ಮತ್ತು ಪಂಜಾಬ್ ತಲಾ 19 ಅಂಕ ಸಂಪಾದಿಸಿದ್ದರೂ ನೆಟ್ ರನ್ ರೇಟ್ನಲ್ಲಿ ಪಂಜಾಬ್ ಮುಂದಿದೆ. ಆರ್ಸಿಬಿ 0.301 ನೆಟ್ ರನ್ ರೇಟ್ ಹೊಂದಿದ್ದರೆ ಪಂಜಾಬ್ 0.372 ಹೊಂದಿದೆ. 0.071 ಅಂಕ ಹೆಚ್ಚಿರುವ ಕಾರಣ ಪಂಜಾಬ್ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.
ಮಳೆಯಿಂದ ಪಂದ್ಯ ರದ್ದಾದರೆ ಏನಾಗುತ್ತದೆ?
ರಿಸರ್ವ್ ದಿನ: ಜೂನ್ 3 ರಂದು ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ, ಜೂನ್ 4, 2025 ರಂದು ರಿಸರ್ವ್ ದಿನದಲ್ಲಿ ಪಂದ್ಯವನ್ನು ನಡೆಸಲಾಗುತ್ತದೆ.
ಸೂಪರ್ ಓವರ್: ರಿಸರ್ವ್ ದಿನದಂದೂ ಆಟ ಸಾಧ್ಯವಾಗದಿದ್ದರೆ, ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಅಂತಿಮ ನಿರ್ಧಾರ: ಒಂದು ವೇಳೆ ರಿಸರ್ವ್ ದಿನದಂದೂ ಮತ್ತು ಸೂಪರ್ ಓವರ್ ಮೂಲಕವೂ ಪಂದ್ಯಾಟವಾಡಲು ಸಾಧ್ಯವಾಗದಿದ್ದರೆ, ಲೀಗ್ ಹಂತದಲ್ಲಿ ಉನ್ನತ ಸ್ಥಾನ ಪಡೆದ ತಂಡವಾದ ಪಂಜಾಬ್ ಕಿಂಗ್ಸ್ (PBKS) ಅನ್ನು IPL 2025 ರ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.