ದೇಶದಲ್ಲಿ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗುತ್ತಿದೆ. ಇನ್ನು ಇದೇ ತಿಂಗಳು 30ರಂದು ಅಕ್ಷಯ ತೃತೀಯ ಇದೆ. ಈ ಬಾರಿ ಅಕ್ಷಯ ತೃತೀಯ ಚಿನ್ನ ಪ್ರಿಯರಿಗೆ ಹಾಗೂ ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಸ್ವಲ್ಪ ಸಿಹಿ ಹಾಗೂ ಸ್ವಲ್ಪ ಕಹಿ ತಂದಿದೆ ಅಂತಲೇ ಹೇಳಬಹುದು. ಆದರೆ, ಬಂಗಾರ ಪ್ರಿಯರ ಆತಂಕವನ್ನು ದೂರ ಮಾಡುವುದಕ್ಕೆ ಚಿನ್ನದ ಮಳಿಗೆಗಳು ಹಾಗೂ ಚಿನ್ನದ ಉದ್ಯಮಿಗಳು ಮುಂದಾಗಿದ್ದಾರೆ.
ನಿಮಗೂ ರಾಗಿ ಮಾಲ್ಟ್ ಸೇವಿಸೋ ಅಭ್ಯಾಸ ಇದ್ಯಾ!? ಹಾಗಿದ್ರೆ ಈ ಸಮಸ್ಯೆ ನಿಮ್ಮ ಬಳಿ ಸುಳಿಯಲ್ಲ!
ಹೌದು, 2025ರ ಅಕ್ಷಯ ತೃತೀಯ ಹಬ್ಬ ಬಂದೇ ಬಿಟ್ಟಿದೆ. ನಾಳೆ ದೇಶಾದ್ಯಂತ ಅಕ್ಷಯ ತೃತೀಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಕ್ಷಯ ತೃತೀಯ ಅಂದ್ರೆ ಚಿನ್ನವನ್ನು ಕೊಳ್ಳುವ ಶುಭ ದಿನ. ನಾಳೆ ಅನೇಕರು ಚಿನ್ನದ ಅಂಗಡಿಗೆ ತೆರಳಿ ಚಿನ್ನ ಕೊಳ್ಳಲು ಮುಂದಾಗಿದ್ದಾರೆ. ಚಿನ್ನಾಭರಣ ಪ್ರಿಯರಿಗೆ ಬಂಗಾರದ ಅಂಗಡಿಗಳು ಈಗಾಗಲೇ ಭರ್ಜರಿ ಆಫರ್ ಕೊಟ್ಟು ಸ್ವಾಗತ ಕೋರುತ್ತಿವೆ.
ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಆದರೆ ಒಂದು ಸಮಾಧಾನಕರ ಸುದ್ದಿ ಏನಂದ್ರೆ 1 ಲಕ್ಷದ ಗಡಿ ದಾಟಿದ್ದ ಬಂಗಾರ ಮತ್ತೆ ವಾಪಸ್ ಲಕ್ಷದ ಒಳಗೆ ಬಂದಿದೆ.
ಏಪ್ರಿಲ್ 29ರಂದು ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿದೆ. ಅಂದ್ರೆ ಬೆಂಗಳೂರಲ್ಲಿ ಸದ್ಯ ಚಿನ್ನದ ದರ ಹೀಗಿದೆ.
1 ಗ್ರಾಂ 24K ಚಿನ್ನ – ₹9,797
1 ಗ್ರಾಂ 22K ಚಿನ್ನ – ₹8,980
1 ಗ್ರಾಂ 18K ಚಿನ್ನ – ₹7,348
24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ ಅಂದ್ರೆ ಏಪ್ರಿಲ್ 28ರಂದು ಒಂದು ಗ್ರಾಂಗೆ 9,753 ರೂಪಾಯಿ ಇತ್ತು. ನಿನ್ನೆಯಿಂದ ಇಂದಿಗೆ ಕೇವಲ 44 ರೂಪಾಯಿ ಏರಿಕೆಯಾಗಿದ್ದು, ಏಪ್ರಿಲ್ 29ಕ್ಕೆ ಒಂದು ಗ್ರಾಂ ಚಿನ್ನದ ಬೆಲೆ 9,797 ರೂಪಾಯಿ ನಿಗದಿಯಾಗಿದೆ.
ದಿನದಿಂದ ದಿನಕ್ಕೆ ಬಂಗಾರದ ದರ ಏರಿಳಿತ ಆಗೋದು ಸಹಜ. ಆದರೆ ಖುಷಿಯ ಸುದ್ದಿ ಏನಂದ್ರೆ ಸದ್ಯ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂಪಾಯಿಗಿಂತ ಕೆಳಗೆ ಇಳಿದಿದೆ.