ಬೆಂಗಳೂರು: ಅತ್ಯಾಚಾರ ಎಸಗಿದ ಮುನಿರತ್ನನನ್ನು ಬಿಜೆಪಿ ಇನ್ನೂ ಯಾಕೆ ಪಕ್ಷದಲ್ಲಿ ಉಳಿಸಿಕೊಂಡಿದೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಆರ್ಅರ್ ನಗರ ಶಾಸಕ ಮುನಿರತ್ನ ಅವರನ್ನು ಇನ್ನೂ ಯಾಕೆ ಪಕ್ಷದಲ್ಲ ಇಟ್ಟುಕೊಂಡಿದ್ದಾರೆ? ಜಾತಿ ನಿಂದನೆ ಮಾಡಿದವನನ್ನು,
ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿ, ಅತ್ಯಾಚಾರ ಎಸಗಿದವನನ್ನು ಪಕ್ಷದಲ್ಲಿ ಇಟ್ಟುಕೊಂಡಿರುವುದಕ್ಕೆ ಕಾರಣವೇನು? ಯಾರು ಏನೇನು ಮಾಡಿದ್ದಾರೆ ಅಂತ ಕೂತು ಚರ್ಚೆ ಮಾಡೋಣ, ಬಿಜೆಪಿ ನಾಯಕರು ಚರ್ಚೆಗೆ ಬರಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ನಿಮಗೂ ಈ ಸಮಸ್ಯೆ ಇದ್ಯಾ!? ಹಾಗಿದ್ರೆ ಆಲೂಗಡ್ಡೆ ಮುಟ್ಟಲೇಬೇಡಿ! ಇದು ತಿಳಿದ್ರೆ ಶಾಕ್ ಆಗ್ತೀರಾ!?
ರನ್ಯಾ ರಾವ್ ಕೇಸ್ನಲ್ಲಿ ಗೋಲ್ಡ್ ಸ್ಮಗ್ಲಿಂಗ್ ಅಂತ ಹೇಳ್ತಾರೆ. ಕಸ್ಟಮ್ಸ್ ಕಾಯೋ ಕೆಲಸ ಪರಮೇಶ್ವರ ಅವರದ್ದಾ?. ರಾಜ್ಯದ ಪೊಲೀಸರಿಗೆ ಇದು ಸಂಬಂಧ ಇದೆಯಾ?. ಏನೇ ಇದ್ದರೂ ಸಿದ್ದಾರ್ಥ ಟ್ರಸ್ಟ್ ದು ವ್ಯಾಲಿಡ್ ಟ್ರಾನ್ಸಾಕ್ಷನ್. ಕ್ರೆಡಿಟ್ ಕಾರ್ಡ್ದು ಯಾವುದೇ ಟ್ರಾನ್ಸಾಕ್ಷನ್ ಇದ್ರೂ ಅದು ವೆರಿಫೈಡ್ ಟ್ರಾನ್ಸಾಕ್ಷನ್ ಆಗಿರುತ್ತದೆ. ಬಿಜೆಪಿಯವರಿಗೆ ನೈತಿಕತೆ ಇದೆಯಾ? ನಾಚಿಕೆ ಆಗಬೇಕು. ಮೊದಲು ಶಾಸಕ ಮುನಿರತ್ನರನ್ನು ಹೊರಗೆ ಹಾಕಬೇಕಿತ್ತು ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು.