ನಮ್ಮಲ್ಲಿರುವ ಅನೇಕ ತರಕಾರಿಗಳು, ಮಸಾಲೆ ಪದಾರ್ಥಗಳು ಬರೀ ನಮ್ಮ ಅಡುಗೆಗೆ ರುಚಿ ಕೊಡುವುದಲ್ಲದೆ, ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಸಹ ಹೊಂದಿದೆ. ಅದರಲ್ಲಿಯೂ ಶುಂಠಿ, ಬೆಳ್ಳುಳ್ಳಿ ಅಂತಹ ಆಹಾರ ಪದಾರ್ಥಗಳು ಅನೇಕ ಶತಮಾನಗಳಿಂದ ಅಡುಗೆಮನೆಯ ಭಾಗವಾಗಿದೆ.
ಅಷ್ಟೇ ಅಲ್ಲದೆ, ಈ ಮೂಲಿಕೆಯು ಅದರ ಬ್ಯಾಕ್ಟೀರಿಯಾ ಮತ್ತು ನಂಜುನಿರೋಧಕ ಗುಣದಿಂದಾಗಿ ಗುಣಪಡಿಸುವ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಅದರಲ್ಲೂ ಬೆಳ್ಳುಳ್ಳಿಯ ರಂಜಕ, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಬೆಳ್ಳುಳ್ಳಿ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಅಂತ ಹೇಳಬಹುದು. ಅದರಲ್ಲೂ ಈ ಬೆಳ್ಳುಳ್ಳಿಯನ್ನು ರಾತ್ರಿ ಹೊತ್ತು ತಿಂದರೆ ಇನ್ನೂ ಒಳ್ಳೆಯದಂತೆ ಅಂತ ಹೇಳಲಾಗುತ್ತಿದೆ.
ಆದ್ರೆ ಬೇಸಿಗೆ ಸಮಯದಲ್ಲಿ ಇವುಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಏಕೆಂದರೆ ಬೆಳ್ಳುಳ್ಳಿ ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಾಗಿಸುವ ಸ್ವಭಾವವನ್ನು ಹೊಂದಿರುತ್ತದೆ. ಇದರರ್ಥ ಇದು ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬೇಸಿಗೆಯಲ್ಲಿ ಹವಾಮಾನವು ಈಗಾಗಲೇ ಬಿಸಿಯಾಗಿರುವುದರಿಂದ ಇವುಗಳನ್ನು ಅತಿಯಾದ ಸೇವನೆ ಒಳ್ಳೆಯದಲ್ಲ.
ಇದು ನಮ್ಮ ದೇಹದ ಶಾಖವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹಾಗಾದರೆ ಬೆಳ್ಳುಳ್ಳಿಯನ್ನು ಬೇಸಿಗೆ ಸಮಯದಲ್ಲಿ ಯಾರು ಸೇವನೆ ಮಾಡಬಾರದು? ಯಾವ ರೀತಿಯ ಆರೋಗ್ಯ ಸಮಸ್ಯೆ ಇರುವವರಿಗೆ ಇದು ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
ಯಾರಿಗೆ ಒಳ್ಳೆಯದಲ್ಲ?
ಬಾಯಿಯೊಳಗೆ ಹುಣ್ಣು, ಅಜೀರ್ಣ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳಿರುವವರು ಬೇಸಿಗೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ಸೇವನೆ ಮಾಡಬಾರದು. ಏಕೆಂದರೆ ಇದು ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮಗೆ ತಿನ್ನಲೇಬೇಕಾದರೆ ವೈದ್ಯರ ಸಲಹೆ ತೆಗೆದುಕೊಂಡ ಆ ನಂತರವೇ ಸೇವನೆ ಮಾಡುವುದು ಬಹಳ ಸೂಕ್ತ.
ಯಾರು ಸೇವನೆ ಮಾಡಬಹುದು?
ಬೆಳ್ಳುಳ್ಳಿಯಲ್ಲಿರುವ ಆರೋಗ್ಯಕರ ಗುಣಲಕ್ಷಣಗಳು ಋತುಮಾನದ ಕಾಯಿಲೆಗಳಾದ ಜ್ವರ, ಶೀತ ಮತ್ತು ಕೆಮ್ಮಿನಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವುಗಳನ್ನು ಹಸಿಯಾಗಿ ಸೇವನೆ ಮಾಡುವ ಬದಲು ಹುರಿದು ಆ ಬಳಿಕ ಅವುಗಳನ್ನು ತರಕಾರಿಗಳೊಂದಿಗೆ ಬೆರೆಸಿ ಸೇವನೆ ಮಾಡಬಹುದು. ಆದರೆ ಪ್ರತಿದಿನ ಒಂದೆರಡು ಬೆಳ್ಳುಳ್ಳಿ ಎಸಳುಗಳಿಗಿಂತ ಜಾಸ್ತಿ ಸೇವನೆ ಮಾಡಬೇಡಿ.
ಹಸಿ ಬೆಳ್ಳುಳ್ಳಿ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ ಜೊತೆಗೆ ಬ್ಯಾಕ್ಟೀರಿಯಾಗಳಿಂದ ದೂರವಿರಿಸುತ್ತದೆ. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಬಾರದು. ಜೀರ್ಣಶಕ್ತಿಯ ಕೊರತೆ ಇದ್ದರೆ ಅಂತವರು ಬೇಸಿಗೆಯಲ್ಲಿ ಮಿತವಾಗಿ ಬೆಳ್ಳುಳ್ಳಿಯನ್ನು ಸೇವನೆ ಮಾಡಬಹುದು. ಇದು ಹೊಟ್ಟೆಯ ಉರಿಯೂತ, ಗ್ಯಾಸ್ ಸಮಸ್ಯೆ, ಅಜೀರ್ಣ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.