ಭಾರತದ ಕ್ರಿಕೆಟ್ ಜಗತ್ತಿನ ದಂತಕಥೆ ವಿರಾಟ್ ಕೊಹ್ಲಿ ಅಂದ್ರೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೆ ಅಚ್ಚುಮೆಚ್ಚು. ಬ್ಯಾಟ್ ಹಿಡಿದು ಫೀಲ್ಡ್ ಗಿಳಿದ್ರೆ ಕಿಂಗ್ ಕೊಹ್ಲಿ ರನ್ ಮಳೆಯನ್ನೇ ಹರಿಸ್ತಾರೆ. ಇಂತಹ ವಿರಾಟ್ ಕೊಹ್ಲಿ ಬಗ್ಗೆ ತಮಿಳುನಟ ಸಿಂಬು ಇಂಟ್ರೆಸ್ಟಿಂಗ್ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿಗೂ ಬಾಲಿವುಡ್ ಗೂ ನಂಟಿದೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚಿದವರು. ಹೀಗಾಗಿ ಹಿಂದಿ ಇಂಡಸ್ಟ್ರೀಯವರು ಕೊಹ್ಲಿ ಚಿರಪರಿಚತ . ಆದ್ರೆ ಕಾಲಿವುಡ್ ಬಗ್ಗೆ ವಿರಾಟ್ ಗೆ ಅಷ್ಟಾಗಿ ಗೊತ್ತಿಲ್ಲ ಅನ್ನೋದಕ್ಕೆ ಸಿಂಬು ಹೇಳಿದ ಮ್ಯಾಟರ್ ಸಾಕ್ಷಿ. ಒಮ್ಮೆ ಕೊಹ್ಲಿ ಭೇಟಿ ಮಾಡುವ ಅವಕಾಶ ಸಿಂಬುಗೆ ಸಿಕ್ಕಿತ್ತಂತೆ. ಅವರು ಸ್ಟೈಲ್ ಆಗಿ ಹೋಗಿ, ‘ನಾನು ಸಿಂಬು’ ಎಂದು ಪರಿಚಯ ಮಾಡಿಕೊಂಡರು. ವಿರಾಟ್ ರಿಯಾಕ್ಷನ್ ಸಿಂಬುಗೆ ಶಾಕ್ ತರಿಸಿತು. ‘ನನಗೆ ಗೊತ್ತಿಲ್ಲ ಎಂದು ಅವರು ಹೋಗೇ ಬಿಟ್ಟರು. ಇದು ನನಗೆ ಬೇಕಿತ್ತಾ ಎಂದುಕೊಂಡೆ. ಒಂದು ದಿನ ನಾನು ಯಾರು ಎಂಬುದು ನಿಮಗೆ ಗೊತ್ತಾಗುತ್ತದೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ’ ಎಂದು ಸಿಂಬು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇತ್ತೀಚೆಗೆ ಆರ್‌ಸಿಬಿ ಪೇಜ್ನಲ್ಲಿ ಹಾಕಿದ ಕೊಹ್ಲಿ ಸಂದರ್ಶನ ನೋಡಿದೆ. ಅದರಲ್ಲಿ ಅವರು ನನ್ನ ಸಿನಿಮಾ ಸಾಂಗ್ ಇಷ್ಟಪಟ್ಟಿದ್ದಾರೆ ಎಂದು ತಿಳಿಯಿತು. ಅದೇ ಸಕ್ಸಸ್ ಎಂದುಕೊಂಡೆ. ಈಗಲೂ ಅವರಿಗೆ ನನ್ನ ಪರಿಚಯ ಇದೆಯೋ ತಿಳಿದಿಲ್ಲ’ ಎಂದಿದ್ದಾರೆ ಸಿಂಬು.
Thalaivan #STR 🔥🔥🔥🔥#RCB #ViratKohli𓃵 pic.twitter.com/RE8JiSZL1B
— கதைப்போமா (@Kathaipomaa) May 23, 2025
ಸಿಂಬು ಚಿತ್ರದ ಹಾಡು ಕೊಹ್ಲಿಗೆ ಫೇವರೇಟ್!
ವಿರಾಟ್ ಮೈದಾನದಲ್ಲಿ ಅಭ್ಯಾಸ ಮಾಡುವಾಗ, ಏರ್ಪೋರ್ಟ್, ವಿಮಾನದಲ್ಲಿ ಪ್ರಯಾಣ ಮಾಡುವಾಗ ನೀ ಸಿಂಗಮ್ ಧಾನ ಸಾಂಗ್ ಅನ್ನು ಪದೇ ಪದೇ ಕೇಳುತ್ತಿರುತ್ತಾರೆ. ಆ ಹಾಡು ಎಂದರೆ ವಿರಾಟ್ಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಏರ್ಫೋನ್ ಹಾಕೊಂಡು ಒಂದೇ ಹಾಡನ್ನು ಪದೇ ಪದೇ ಕೇಳುತ್ತಿರುತ್ತಾರೆ. ನೀ ಸಿಂಗಮ್ ಧಾನ, ನಟ ಸಿಲಂಬರಸನ್ ಊರೂಫ್ ಸಿಂಬು ಅಭಿನಯದ ಪಾಥು ಥಾಲಾ ಚಿತ್ರದ ಹಾಡು. 2023ರಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿರುವ ಈ ಚಿತ್ರದ ನೀ ಸಿಂಗಮ್ ಧಾನ ವಿರಾಟ್ ಫೇವರೇಟ್ ಗೀತೆ. ಸಿದ್ ಶ್ರೀರಾಮ್ ಕಂಠದಲ್ಲಿ, ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿತ್ತು. ನೀ ಸಿಂಗಮ್ ಧಾನ ಅಂದ್ರೆ ‘ನೀವು ನಿಜವಾಗಿಯೂ ಸಿಂಹ’ ಅಂದರ್ಥ.
ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು?
ತಮಿಳಿನ ನಟ ಸಿಲಂಬರಸನ್ ಅಲಿಯಾಸ್ ಸಿಂಬು ಬಹಳ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಒಂದೊಳ್ಳೆ ಅಭಿಮಾನಿ ವರ್ಗವನ್ನೂ ಸಂಪಾದಿಸಿದ್ದಾರೆ. ಇದೀಗ ಸಿಂಬು ವಿರಾಟ್ ಕೊಹ್ಲಿ ಬಯೋಪಿಕ್‌ಗೆ ಸೂಕ್ತ ಎಂಬ ಚರ್ಚೆ ಶುರುವಾಗಿದೆ. ವಿರಾಟ್ ಕೊಹ್ಲಿ ಫಿಟ್ನೆಸ್, ಅವರ ಸ್ಟೈಲ್, ನೋಟವನ್ನು ಸಿಂಬು ಹೋಲುತ್ತಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೀಗಾಗಿ ವಿರಾಟ್ ಬಯೋಪಿಕ್ ಪ್ಲಾನ್ ನಡೆದರೇ ಅವರ ಪಾತ್ರವನ್ನು ನಿಭಾಯಿಸೋದಿಕ್ಕೆ ಸಿಂಬು ಬೆಸ್ಟ್ ಎಂಬ ಮಾತು ಮುಂಬೈ ಗಲ್ಲಿಯಲ್ಲಿ ಕೇಳಿ ಬರ್ತಿದೆ. ಮುಂದೆ ವಿರಾಟ್ ಅನುಷ್ಕಾ ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾ ಶುರು ಮಾಡಿದಲ್ಲಿ ಸಿಂಬು ಅವರನ್ನು ಅಪ್ರೋಚ್ ಆದರು ಅಚ್ಚರಿಪಡುವ ಆಗಿಲ್ಲ.