ಬೆಂಗಳೂರು:– ಕಾಂಗ್ರೆಸ್ ಅವಧಿಯಲ್ಲಿ ಉಗ್ರರ ವಿರುದ್ಧ ಕ್ರಮ ಯಾಕೆ ಆಗಿಲ್ಲ? ಎಂದು ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಭಾರತದಲ್ಲಿ ಉಗ್ರರನ್ನು ಸಾಕ್ತಿದ್ದಾರೆ. ಐಎಂಎಫ್ನಿಂದ ಪಡೆದ ಸಾಲದ ಹಣದಲ್ಲಿ ಪಾಕಿಸ್ತಾನದ ಸರ್ಕಾರ ಮಸೂದ್ ಅಜರ್ಗೆ ಪರಿಹಾರ ಕೊಟ್ಟಿದೆ. ಆ ಮೂಲಕ ಪಾಕಿಸ್ತಾನ ಉಗ್ರರನ್ನ ಸಾಕ್ತಿದೆ. ಇಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಮಾಡಿದ ಆದಿಲ್ಗೆ ಸುಪಾರಿ ಹಣ ಎಲ್ಲಿಂದ ಬಂತು? ಇದೇ ಕಾಂಗ್ರೆಸ್ ಸರ್ಕಾರ ಕೊಟ್ಟ ಪರಿಹಾರದಿಂದ ಬಂದಿದೆ. ಅಲ್ಲಿಗೆ ಕಾಂಗ್ರೆಸ್ನವ್ರೂ ಭಯೋತ್ಪಾದಕರನ್ನು ಸಾಕ್ತಿದ್ದಾರೆ ಅಂತಾ ಆಯ್ತು ಅಲ್ವಾ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರು ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕೆ ಮಾಡ್ತಿದ್ದಾರೆ. ಪಹಲ್ಗಾಮ್ ಕೃತ್ಯ ನಡೆಯುವಾಗ ಮೋದಿಯವ್ರು ಎಲ್ಲಿದ್ರು ಅಂತ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಆ ಸಂದರ್ಭದಲ್ಲಿ ಮೋದಿ ಎಲ್ಲಿದ್ರು, ಏನು ಮಾಡಿದ್ರು ಅಂತ ದೇಶದ ಎಲ್ಲ ಪ್ರಜೆಗಳಿಗೆ ಗೊತ್ತಿದೆ. ಎಲ್ಲರಿಗೂ ಗೊತ್ತಿರುವ ವಿಷಯ ಪ್ರಿಯಾಂಕ್ ಖರ್ಗೆಗೆ ಯಾಕೆ ಗೊತ್ತಿಲ್ಲ. ಇದೇನು ಪ್ರಿಯಾಂಕ್ ಖರ್ಗೆಯ ಗೋಸಂಬಿತನನಾ ಅಥವಾ ಡಬಲ್ ಸ್ಟಾಂಡರ್ಡಾ ಎಂದು ಪ್ರಶ್ನಿಸಿದರು