ನೆಲಮಂಗಲ: ಇನ್ಸ್ಟಾಗ್ರಾಂನಲ್ಲಿ ಒಂದು ವಾರದ ಪ್ರೀತಿ, ಮದುವೆಯಲ್ಲಿ ಅಂತ್ಯವಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. 13 ವರ್ಷದ ಹಿಂದೆ ಮದುವೆಯಾಗಿ ಸಂಸಾರ ನಡೆಸಿದವಳು ಗಂಡನ ಜೊತೆ ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿ ಮತ್ತೊಂದು ಮದುವೆಯಾಗಿದ್ದಾಳೆ.
ವಿಶೇಷ ಅಂದ್ರೆ ತನ್ನ ಬಿಟ್ಟು ಓಡಿ ಹೋದ ಪತ್ನಿ ಮತ್ತೊಂದು ಮದುವೆ ಮಾಡಿಕೊಂಡಿರುವುದನ್ನ ಇನ್ಸ್ಟಾಗ್ರಾಂನಲ್ಲೇ ವಿಡಿಯೋ ಮದುವೆ ವಿಡಿಯೋ ನೋಡಿ ಪತಿ ಶಾಕ್ ಆಗಿದ್ದಾನೆ.
ನೆಲಮಂಗಲ ನಗರದ ಜಕ್ಕಸಂದ್ರದ ರಾಘವೇಂದ್ರನಗರದಲ್ಲಿ ಡ್ರ್ಯೆವರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಮೇಶ್ ಎಂಬುವವರ ಜೊತೆಗೆ 13 ವರ್ಷದ ಹಿಂದೆ ನೇತ್ರಾವತಿ ಎಂಬಾಕೆ ಮದುವೆಯಾಗಿದ್ದು, ಮಕ್ಕಳು ಸಹ ಇವೆಯಂತೆ. ಆದರೆ, ವಾರದ ಹಿಂದೆ ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಸಂತೋಷ್ ಎಂಬುವನ ಜೊತೆ ನಾಪತ್ತೆಯಾಗಿದ್ದ ಪತ್ನಿ, ಆತನ ಜತೆ ಮದುವೆ ಮಾಡಿಕೊಂಡ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಹಾಕಿಕೊಂಡಿದ್ದಾಳೆ.
ಮಕ್ಕಳು ಗಂಡನನ್ನು ಬಿಟ್ಟು ಹೋಗಿ ಓಡಿಹೋಗಿದ್ದ ನೇತ್ರಾವತಿ, ಪೊಲೀಸರ ಭದ್ರತೆಯಲ್ಲಿ ಗಂಡನ ಮನೆಯಲ್ಲಿದ್ದ ಬಟ್ಟೆ ತೆಗೆದುಕೊಳ್ಳಲು ಬಂದಿದ್ದಳಂತೆ. ಈ ವೇಳೆ ರಮೇಶ್ ಹಾಗೂ ಕುಟುಂಬದವರು ನೇತ್ರಾವತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೆಲಮಂಗಲ ಟೌನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.